Advertisement
ಇಸ್ರೇಲ್ ಬೇಹುಗಾರಿಕೆ ನಡೆಸಬಹುದು ಎಂಬ ಕಾರಣಕ್ಕೆ ಮೊಬೈಲ್ ಫೋನ್ ಬಳಕೆಯನ್ನು ಬಿಟ್ಟು, ಹೆಜ್ಬುಲ್ಲಾ ಉಗ್ರರು, ಪೇಜರ್‌ಗಳನ್ನು ಬಳಸಲು ಆರಂಭಿಸಿದ್ದರು. ಇದಕ್ಕಾಗಿ 5,000 ಪೇಜ ರ್‌ಗಳನ್ನು ಖರೀದಿ ಮಾಡಿ ದ್ದರು. ಲೆಬ ನಾನ್ ತಲುಪುವ ಮೊದಲೇ ಮೊಸಾದ್ ಇವುಗಳನ್ನು ಅಪಹರಿಸಿ, ಸ್ಫೋಟಕ, ಡಿಟೋನೇಟರ್, ಚಾರ್ಜ್ (ಸ್ಫೋಟವ ನ್ನುಂಟು ಮಾಡುವ ವಸ್ತು)ಗಳನ್ನು ಅಳವಡಿಸಿತ್ತು ಎಂದು ವರದಿ ತಿಳಿಸಿದೆ.
ಯಾವುದೇ ಸ್ಫೋಟಕಗಳನ್ನು ತಯಾರು ಮಾಡಲು ಬೇಕಾಗುವ ಬ್ಯಾಟರಿ ಹಾಗೂ ಟ್ರಿಗರಿಂಗ್ ಡಿವೈಸ್‌ಗಳು ಈಗಾಗಲೇ ಪೇಜರ್‌ಗಳಲ್ಲಿವೆ. ಹೀಗಾಗಿ ಡಿಟೋನೇಟರ್ ಮತ್ತು ಚಾರ್ಜ್‌ಗಳನ್ನು ಅಳವಡಿಸಿ ಸ್ಫೋಟ ಮಾಡಲಾಗಿದೆ. ನಿಗದಿತ ವಾದ ಮೆಸೇಜ್ ಕಳುಹಿಸುವ ಮೂಲಕ ಪೇಜರ್‌ಗಳಲ್ಲಿ ತಾಪ ಮಾನ ಹೆಚ್ಚಳವಾಗುವಂತೆ ಮಾಡ ಲಾ ಗಿದೆ. ತಾಪಮಾನ ಹೆಚ್ಚಾದ ಕೂಡಲೇ ಪೇಜರ್‌ನಲ್ಲಿಟ್ಟ ಸ್ಫೋಟಕ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಇದನ್ನೂ ಓದಿ: Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ