Advertisement

ಇಸ್ರೇಲ್‌ ಕೃಷಿ ಪದ್ಧತಿ ಜಾರಿ ಅವಶ್ಯ: ಕುಮಾರಸ್ವಾಮಿ

05:13 PM Apr 10, 2018 | |

ಬಸವನಬಾಗೇವಾಡಿ: ರಾಜ್ಯದಲ್ಲಿ ಇಸ್ರೇಲ್‌ ದೇಶದ ಮಾದರಿಯಲ್ಲಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಅಧ್ಯಯನ ಮಾಡಲಾಗಿದೆ. ರಾಜ್ಯದಲ್ಲಿ ಇಸ್ರೇಲ್‌ ದೇಶದ ಮಾದರಿಯಲ್ಲಿ ಕೃಷಿ ಪದ್ಧತಿ ಜಾರಿಯಾದರೆ ರೈತರು ಸಂಕಟದಿಂದ ಹೊರ ಬರಲು ಸಾಧ್ಯವೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ವೀರಭದ್ರೇಶ್ವರ ನಗರದಲ್ಲಿ ಬಯಲು ರಂಗ ಮಂದಿರದಲ್ಲಿ ಕುಮಾರಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಕೃಷಿ ನೀತಿ ಜಾರಿಗೆ ಬರಬೇಕಿದೆ ಎಂದರು.

ರಾಜ್ಯದಲ್ಲಿ ಯುವಕರು ಮತ್ತು ರೈತರು ಮಹಿಳೆಯರಿಗೆ ಗೌರವದಿಂದ ಕಾಣುವಂತ ಸರಕಾರ ಅಧಿಕಾರಕ್ಕೆ ಬರಬೇಕು. ಅಂದಾಗ ಮಾತ್ರ ಈ ರಾಜ್ಯದ ಯುವಕರು, ರೈತರು, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತದೆ. ಯಾಕೆಂದರೆ ರಾಜ್ಯದಲ್ಲಿ ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗ ತಾಂಡವಾಡುತ್ತಿದೆ. ರೈತರು ಸಾಲ ಸೂಲ ಮಾಡಿ ತಮ್ಮ ಕುಟುಂಬದ ಜೀವನ ಸಾಗಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಕೇಂದ್ರದಲ್ಲಿನ ಬಿಜೆಪಿ ಸರಕಾರ ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರ ರೈತರ ಮತ್ತು ಯುವಕರ ನೇರವಿಗೆ ಬಾರದೆ ಇರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಸಾವಿರಾರು ಕೋಟಿ ಹಣದ ಜಾಹೀರಾತು ನೀಡಿ ಕರ್ನಾಟಕ ಬದಾಲಾವಣೆ ಎಂದು ಹೇಳುತ್ತಾರೆ. ಇವರ ಬದಲಾವಣೆ ಅಭಿವೃದ್ಧಿ ಪರವಾಗಿಲ್ಲ, ಕೇವಲ ಜಾಹೀರಾತು ಮೂಲಕ ಮಾತ್ರ ಅಭಿವೃದ್ಧಿಯಾಗಿದೆ ಎಂದು ಆರೋಪಿಸಿದರು.

ಎಂ.ಬಿ. ಪಾಟೀಲ ರಾಜ್ಯದ ಸಚಿವರಾಗಿ ಕಾರ್ಯ ನಿರ್ವಹಿಸದೆ ಕೇವಲ ಬಬಲೇಶ್ವರ ಕ್ಷೇತ್ರಕ್ಕೆ ಸಚಿವರಾಗಿ ಕಳೆದ 5 ವರ್ಷದಿಂದ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯದಲ್ಲಿ ನೀರಾವರಿ ಮತ್ತು ಕೆರೆ ತುಂಬುವ ಯೋಜನೆಗೆ ಪ್ರಾಮುಖ್ಯತೆ ನೀಡದೆ ತಮ್ಮ ಮನೆಯಿಂದ ತಂದಿರುವ ಹಣದಂತೆ ಸರಕಾರದ ಮತ್ತು ಸಾರ್ವಜನಿಕರ ಸಾವಿರಾರು ಕೋಟಿ ಹಣವನ್ನು ಜಾಹಿರಾತಿಗೆ ಬಳಸಿ ತಮ್ಮ ಅಭಿವೃದ್ಧಿ ಜಾಹೀರಾತಿನಲ್ಲಿ ತೊರಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದ ಜನತೆ 2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದ ಬಾಗಿಲು ತಟ್ಟುವ ಕೆಲಸವನ್ನು ನನಗೆ ನೀಡದೆ ಸರಳ ಬಹುಮತಕ್ಕೆ ಅವಕಾಶ ನೀಡಿ 113 ಸ್ಥಾನ ಗೆಲ್ಲಿಸಿ. ನಿಮಗೆ 5 ವರ್ಷಗಳ ಕಾಲ ಸುಭಧ್ರ ಸರಕಾರ ನೀಡುವ ಜವಾಬ್ದಾರಿ ನನ್ನದು. ರಾಜ್ಯದ ಎಲ್ಲ ಜನತೆಯನ್ನು ಒಂದುಗೂಡಿಸಿ ಕೊಂಡೊಯ್ಯುವುದರ ಜೊತೆಗೆ ಎಲ್ಲಿರಿಗೂ ಸಮಪಾಲು ಎಲ್ಲರಿಗೂ ಸಮಬಾಳು ನೀಡುತ್ತೇನೆ ಎಂದು ಹೇಳಿದರು.

Advertisement

ಬಸವನಬಾಗೇವಾಡಿ ಮತಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿ ಅಪ್ಪುಗೌಡ ಪಾಟೀಲ ಮಾತನಾಡಿ, ನಮ್ಮ ತಂದೆ ಬಿ.ಎಸ್‌. ಪಾಟೀಲ ಮನಗೂಳಿ ಈ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಅವರು ಯಾವುದೇ ಹಣ ಮತ್ತು ಆಸ್ತಿಗಳಿಕೆ ಮಾಡಿಲ್ಲ. ಕ್ಷೇತ್ರದ ಜನರನ್ನು ಗಳಿಸಿದ್ದಾರೆ. ನಾನು ಕೂಡಾ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ನಡೆಯುತ್ತೆನೆ ನನಗೂ ಒಮ್ಮೆ ಅವಕಾಶ ನೀಡಿ ಎಂದು ಹೇಳಿದರು.

ಬಸವರಾಜ ಹೊರಟ್ಟಿ, ಎಂ.ಸಿ. ಮನಗೂಳಿ, ಎನ್‌.ಎಸ್‌. ಪಾಟೀಲ, ರೇಷ್ಮಾ ಪಡೇಕನೂರ, ಶಿವನಗೌಡ ಬಿರಾದಾರ, ರೀಯಾಜ್‌ ಪಾರುಕ್‌, ಎಲ್‌.ಎಲ್‌. ಉಸ್ತಾದ, ಎಸ್‌.ಬಿ. ಪಾಟೀಲ, ಗಣೇಶಾಂ ಬಾಂಡಗೆ, ರಾಜುಗೌಡ ಪಾಟೀಲ ಸದಾಶಿವ ಕುಬಗಡ್ಡಿ, ಸೂಭಾಸ್‌ಗೌಡ ಪಾಟೀಲ, ಎಂ. ಗೋಪಿನಾಥ, ಮಲ್ಲಿಕಾರ್ಜುನ ಅವಟಿ, ಮನಾನ ಶಾಬಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಶಿಧರ ಯರನಾಳ ಸ್ವಾಗತಿಸಿದರು. ಬಸವರಾಜ ಅವಟಿ ಕಾರ್ಯಕ್ರಮ ನೀರುಪಿಸಿ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next