ಗಾಜಾಪಟ್ಟಿ: ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ದಾಳಿ ಮುಂದುವರೆಸಿದ್ದು ಅದರ ಮುಂದುವರಿದ ಭಾಗವಾಗಿ ಇಸ್ರೇಲ್ ಸೇನೆ ಇಂದು ವೆಸ್ಟ್ ಬ್ಯಾಂಕ್‌ನ ಜೆನಿನ್‌ನಲ್ಲಿರುವ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದಿಗಳ ಅಡಗುತಾಣಗಳನ್ನು ಹೊಡೆದುರುಳಿಸಿದೆ.
ದಾಳಿ ನಡೆಸಿದ ಬಳಿಕ ಇಸ್ರೇಲ್ ರಕ್ಷಣಾ ಪಡೆಗಳು ಅಲ್ಲಿನ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಇಲ್ಲಿ ಮಸೀದಿಯ ಕೆಳಗಿರುವ ಬಂಕರ್‌ನ ಪ್ರವೇಶದ್ವಾರವನ್ನು ಫೋಟೋದಲ್ಲಿ ತೋರಿಸಲಾಗಿದೆ, ಇಲ್ಲಿ ಹಮಾಸ್ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದರು ಎಂದು ಹೇಳಲಾಗಿದೆ. ಅದೇ ಉದ್ದೇಶದಿಂದ ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಬಂಕರ್ ಗಳನ್ನು ನಾಶ ಪಡಿಸಿದೆ ಎಂದು ಹೇಳಿಕೊಂಡಿದೆ.
ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ರೇಲ್, ಹಮಾಸ್ ಉಗ್ರರು ತಮ್ಮ ದಾಳಿಕೆ ಮಸೀದಿಯನ್ನು ಶಸ್ತ್ರಾಸ್ತ್ರ ಸಂಗ್ರಹಿಸಲು ಬಳಕೆ ಮಾಡುತ್ತಿದ್ದರು. ಈ ಕಾರಣದಿಂದ ಮಸೀದಿ ಮೇಲೆ ವೈಮಾನಿಕ ದಾಳಿ ನಡೆಸಿ ಭಯೋತ್ಪಾಕರನ್ನು ಹತ್ಯೆ ಮಾಡಲಾಯಿತು ಅಲ್ಲದೆ ದಾಳಿಯಲ್ಲಿ ಹತ್ಯೆಯಾದ ಉಗ್ರರು ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದು, ಅಷ್ಟುಮಾತ್ರವಲ್ಲದೆ ಹಲವೆಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿಸಿದೆ.
ಈಗಾಗಲೇ ಇಸ್ರೇಲ್ ಮೇಲಿನ ಹಮಾಸ್ ದಾಳಿಯಲ್ಲಿ 1,400 ಜನರು ಸಾವನ್ನಪ್ಪಿದ್ದರೆ, ಗಾಜಾ ಪಟ್ಟಿಯಲ್ಲಿ ಸಾವಿನ ಸಂಖ್ಯೆ 4,469 ಕ್ಕೆ ಏರಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Earthquake: ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪ, ದೆಹಲಿ-ಎನ್‌ಸಿಆರ್‌ನಲ್ಲೂ ಕಂಪನದ ಅನುಭವ