Advertisement

Iran ಪ್ರತಿ ದಾಳಿಯ ಭಯ: ಸೈನಿಕರ ರಜೆ ರದ್ದುಗೊಳಿಸಿದ ಇಸ್ರೇಲ್, GPS ಕಡಿತ

09:08 PM Apr 05, 2024 | Team Udayavani |

ಜೆರುಸಲೇಮ್: ಸಿರಿಯಾದಲ್ಲಿ ವೈಮಾನಿಕ ದಾಳಿಯಲ್ಲಿ ಇಬ್ಬರು ಇರಾನಿನ ಜನರಲ್‌ಗಳು ಸೇರಿದಂತೆ 13 ಜನರನ್ನು ಹತ್ಯೆಯಾದ ನಂತರ ಇರಾನ್‌ನಿಂದ ಸಂಭವನೀಯ ಪ್ರತೀಕಾರದ ದಾಳಿಯ ಭಯದಿಂದ ಇಸ್ರೇಲ್ ಕಟ್ಟೆಚ್ಚರ ವಹಿಸಿದ್ದು ಜಿಪಿಎಸ್ ನ್ಯಾವಿಗೇಷನ್ ಸೇವೆಗಳನ್ನು ನಿರ್ಬಂಧಿಸಲಾಗಿದ್ದು, ಯುದ್ಧ ಘಟಕಗಳಿಗೆ ರಜೆ ರದ್ದುಗೊಳಿಸಲಾಗಿದೆ, ವಾಯು ರಕ್ಷಣ ಆಜ್ಞೆಯನ್ನು ವರ್ಧಿಸಲಾಗಿದೆ

Advertisement

ವಿದೇಶಿ ಮಾಧ್ಯಮಗಳ ವರದಿ ಪ್ರಕಾರ, ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನೊಂದಿಗಿನ ಯುದ್ಧದಿಂದಾಗಿ ಈಗಾಗಲೇ ಹೋರಾಟ ನಿರತವಾಗಿ ಸಾಕಷ್ಟು ದಣಿದಿರುವ  ಇಸ್ರೇಲ್, ಪವಿತ್ರ ರಂಜಾನ್ ತಿಂಗಳ ಕೊನೆಯ ಶುಕ್ರವಾರದ ಏಪ್ರಿಲ್ 5 ರ ನಂತರ ಇರಾನ್‌ನಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದೆ. ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲ ವ್ಯಕ್ತಪಡಿಸಲು ಇರಾನ್ ಈ ದಿನವನ್ನು ‘ಜೆರುಸಲೇಮ್ ದಿನ’ವನ್ನಾಗಿ ಆಚರಿಸುತ್ತದೆ.

ಸಿರಿಯಾ ರಾಜಧಾನಿಯಲ್ಲಿ ಇರಾನಿನ ರಾಜತಾಂತ್ರಿಕ ಕಟ್ಟಡದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ ನ ಉನ್ನತ ಕುಡ್ಸ್ ಫೋರ್ಸ್ ಕಮಾಂಡರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಹತ್ಯೆಯಾಗಿದೆ.. 2020 ರಲ್ಲಿ ಯುಎಸ್ ಡ್ರೋನ್ ದಾಳಿಯಲ್ಲಿ ಖುಡ್ಸ್ ಫೋರ್ಸ್ ಕಮಾಂಡರ್ ಮೇಜರ್ ಜನರಲ್ ಖಾಸೆಮ್ ಸೊಲೈಮಾನಿ ಸಾವನ್ನಪ್ಪಿದ ನಂತರ ಇದು ಅತ್ಯಂತ ಉನ್ನತ ಮಟ್ಟದ ಅಧಿಕಾರಿಯೊಬ್ಬರ ಹತ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next