ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಭಯೋತ್ಪಾದಕರ ನಡುವಿನ ಸಮರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ಗಾಜಾದ ಮೇಲೆ ದಾಳಿ ನಡೆಸುವ ಮೂಲಕ ಗಾಜಾದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಎಂದು ಇಸ್ರೇಲ್ ಹೇಳಿದೆ.
ತನ್ನನ್ನು ಕೆಣಕಿ ಯುದ್ಧ ಸಾರಿರುವ ಹಮಾಸ್ ಉಗ್ರರನ್ನು ನಿರ್ದಯವಾಗಿ ಮಟ್ಟ ಹಾಕುತ್ತಿರುವ ಇಸ್ರೇಲ್ ಸೇನೆಯು ಗಾಜಾ ಗಡಿಯನ್ನು ಪೂರ್ಣವಾಗಿ ನಿಯಂತ್ರಣಕ್ಕೆ ಪಡೆದುಕೊಂಡಿದೆ.
ಇಸ್ರೇಲ್ ಸೈನ್ಯವು ದಕ್ಷಿಣ ಇಸ್ರೇಲ್‌ನಲ್ಲಿ ತನ್ನ ಸದಸ್ಯರನ್ನು ಸಜ್ಜುಗೊಳಿಸುತ್ತಿದೆ ಮತ್ತು ಭಾರೀ ಮಿಲಿಟರಿ ಉಪಕರಣಗಳೊಂದಿಗೆ ಮೀಸಲು ಪಡೆಗಳ ಹೆಚ್ಚಿನ ಸದಸ್ಯರನ್ನು ಸಹ ಕರೆಸಲಾಗಿದೆ. ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಮೃತರ ಸಂಖ್ಯೆ 3,000 ದಾಟಿದೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲಿ ರಕ್ಷಣಾ ಪಡೆ ಗಾಜಾದ ಗಡಿಯಲ್ಲಿರುವ ದಕ್ಷಿಣ ಇಸ್ರೇಲ್‌ನ ನಿಯಂತ್ರಣವನ್ನು ಮರಳಿ ಪಡೆದಿರುವುದಾಗಿ ಘೋಷಿಸಿದೆ.
ಇಸ್ರೇಲ್‌ನ ದಾಳಿಗೆ ಹಮಾಸ್‌ನ ವಿತ್ತೀಯ ವಿಭಾಗದ ಮುಖ್ಯಸ್ಥ ಹತನಾಗಿದ್ದಾನೆ. ಗಾಜಾ ಪಟ್ಟಿಯ ವಿವಿಧ ಭಾಗಗಳ ಮೇಲೆ ಇಸ್ರೇಲ್ ವಾಯುಪಡೆ ನಿರಂತರ ವೈಮಾನಿಕ ದಾಳಿ ಮುಂದುವರಿಸಿದೆ ಅಲ್ಲದೆ ಗಾಜಾ ಗಾಡಿಯಲ್ಲಿ ತನ್ನ ಸೇನಾ ವಾಹನಗಳನ್ನೇ ತಡೆಗೋಡೆಯಂತೆ ನಿಲ್ಲಿಸಿದೆ ಒಂದು ವೇಳೆ ಹಮಾಸ್ ಉಗ್ರರು ನುಸುಳಲು ಯತ್ನಿಸಿದರೆ ಹೊಡೆದುರುಳಿಸಲು ಎಲ್ಲಾ ವ್ಯವಸ್ಥೆ ಇಸ್ರೇಲ್ ಮಾಡಿಕೊಂಡಿದೆ ಎಂದು ಹೇಳಿದೆ.
ಇದನ್ನೂ ಓದಿ: Horoscope Today: ಈ ರಾಶಿಯವರಿಗಿಂದು ಯೋಗ್ಯ ಕಾರ್ಯಗಳಿಗೆ ಸಹಾಯ ಮಾಡುವ ಅವಕಾಶ ಒದಗಿ ಬರಲಿದೆ