Advertisement

israel Army: ಮಕ್ಕಳ, ಹೆಂಗಸರ ಅಳು ಕೇಳಿ ಹೊರ ಬಂದರೆ ಗುಂಡೇಟು!

03:22 AM Dec 06, 2024 | Team Udayavani |

ಹೊಸದಿಲ್ಲಿ: ಹೊಸ ಹೊಸ ಯುದ್ಧ ತಂತ್ರಗಳನ್ನು ಹೊಸೆಯುವುದರಲ್ಲಿ ಇಸ್ರೇಲ್‌ ಸೇನೆ ಯಾವತ್ತೂ ಮುಂದಿದೆ. ಅದನ್ನು ಪುಷ್ಟೀಕರಿಸುವಂತೆ ಗಾಜಾ ಪಟ್ಟಿ ಮೇಲೆ ದಾಳಿ ವೇಳೆ ವಿನೂತನ ತಂತ್ರವನ್ನು ಅಳವಡಿಸಿಕೊಂಡದ್ದು ಈಗ ಬಹಿರಂಗವಾಗಿದೆ.

Advertisement

ಪ್ಯಾಲೆಸ್ತೀನಿಗಳನ್ನು ಮನೆಯಿಂದ ಹೊರಬರುವಂತೆ ಮಾಡಲು ಇಸ್ರೇಲ್‌ ಸೇನೆ ಮಕ್ಕಳು ಅಳುತ್ತಿರುವಂತೆ ಮತ್ತು ಮಹಿಳೆಯರು ಕಿರುಚಿಕೊಳ್ಳುತ್ತಿರುವಂತೆ ಧ್ವನಿ ಹೊರಡಿಸುವ ಕ್ವಾಡ್‌ಕಾಪ್ಟರ್‌(ಡ್ರೋನ್‌)ಗಳನ್ನು ನಿಯೋಜಿಸಿತ್ತು. ಈ ಧ್ವನಿ ಕೇಳಿ ಜನ ಹೊರಬರುತ್ತಿದ್ದಂತೆ ಪಡೆಗಳು ಅವರನ್ನು ಶೂಟ್‌ ಮಾಡುತ್ತಿ ದ್ದವು! ಮಹಾಹುಸೇನ್‌ ಎಂಬ ಪತ್ರಕರ್ತೆ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

ನುಸೈರತ್‌ ಸೇರಿ ಗಾಜಾದ ವಿವಿಧೆಡೆ ಈ ರೀತಿ ಧ್ವನಿ ಕೇಳಿ ನಿವಾಸಿಗಳು ಹೊರ ಬರುತ್ತಿದ್ದಂತೆ ಗುಂಡು ಹಾರಿಸಿದ ಘಟನೆ ಗಳು ನಡೆದಿವೆ. ನಿಧಾನವಾಗಿ ಜನರಿಗೆ ಇದೊಂದು ತಂತ್ರವೆಂದು ಅರಿವಾಯಿತು ಎಂದು ಹುಸೇನ್‌ ಹೇಳಿದ್ದಾರೆ. ಗಾಜಾ ಮೇಲೆ ಯುದ್ಧ ಸಾರಿದ ಬಳಿಕ, ಕಣ್ಗಾವಲು, ವ್ಯಕ್ತಿಗಳಿಗೆ ಗುರಿ ಯಿಡಲು, ಜನದಟ್ಟಣೆ ಚದುರಿಸಲು, ಇಸ್ರೇಲ್‌ ಸೇನೆ ರಿಮೋಟ್‌ ಮೂಲಕ ಕಾರ್ಯನಿರ್ವಹಿಸುವ ಈ ಕ್ವಾಡ್‌ಕಾಪ್ಟರ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next