Advertisement

ನೆನಪಿಗೆಂದು ಬಾಂಬ್‌ ಅನ್ನೇ ಹೊತ್ತುತಂದ ಪ್ರವಾಸಿಗರು!

08:45 AM Apr 30, 2022 | Team Udayavani |

ಜೆರುಸಲೆಂ: ಇಸ್ರೇಲ್‌ ಪ್ರವಾಸದ ನೆನಪಿಗೆಂದು ಅಮೆರಿಕ ಮೂಲದ ಕುಟುಂಬವೊಂದು ಬಾಂಬ್‌ ಅನ್ನೇ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ ವಿಚಿತ್ರ ಘಟನೆ ಗುರುವಾರ ಇಸ್ರೇಲ್‌ನ ಬೆನ್‌ ಗುರಿಯಾನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.

Advertisement

ಅಮೆರಿಕ ಮೂಲದ ಕುಟುಂಬ ಇಸ್ರೇಲ್‌ನ ಗೋಲನ್‌ ಗೈಟ್ಸ್‌ ಪ್ರವಾಸಿ ತಾಣಕ್ಕೆ ತೆರಳಿದಾಗ ಅಲ್ಲಿ ಅವರಿಗೆ, ಸ್ಫೋಟಗೊಳ್ಳದೆ ಬಿದ್ದಿದ್ದ ಬಾಂಬ್‌ ಒಂದು ಸಿಕ್ಕಿದೆ.

ಇಸ್ರೇಲ್‌ ಪ್ರವಾಸದ ನೆನಪಿಗೆ ಏನಾದರೂ ತೆಗೆದುಕೊಂಡು ಹೋಗಬೇಕೆಂದು ಪರಿಗಣಿಸಿದ ಕುಟುಂಬ ಆ ಸ್ಫೋಟಗೊಳ್ಳದ ಬಾಂಬ್‌ ಅನ್ನೇ ಸೂಟ್‌ಕೇಸ್‌ ಒಳಗಿಟ್ಟು ಪ್ಯಾಕ್‌ ಮಾಡಿಕೊಂಡು ಹೊರಟಿದ್ದಾರೆ.

ಅಮೆರಿಕಕ್ಕೆ ವಾಪಸು ತೆರಳಲೆಂದು ವಿಮಾನ ನಿಲ್ದಾಣಕ್ಕೆ ಬಂದಾಗ ಅವರ ಬ್ಯಾಗ್‌ನಲ್ಲಿ ಬಾಂಬ್‌ ಇರುವುದು ಭದ್ರತಾ ಸಿಬ್ಬಂದಿಗೆ ತಿಳಿದುಬಂದಿದೆ.

ಇದನ್ನೂ ಓದಿ:‘ವಾಮನ’ ಕನ್ನಡ ಸಿನಿಮಾದ ನಾಯಕಿಯಾಗಿ ಪುತ್ತೂರಿನ ರಚನಾ ರೈ

Advertisement

ಅಲ್ಲಿದ್ದ ಪ್ರಯಾಣಿಕರಿಗೂ ಈ ವಿಚಾರ ತಿಳಿದುಬಂದಿದ್ದು, ಅವರೆಲ್ಲರೂ ಪ್ರಾಣರಕ್ಷಣೆಗಾಗಿ ಓಡಿ ಹೋಗಲಾರಂಭಿಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಲಗೇಜ್‌ಗಳ ಮೇಲೆಯೇ ಓಡಿ ಹೋಗಲು ಪ್ರಯತ್ನಿಸಿ ಬಿದ್ದು, ಗಂಭೀರ ಗಾಯ ಮಾಡಿಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಾಂಬ್‌ ತಂದಿದ್ದ ಕುಟುಂಬವನ್ನು ವಿಮಾನ ನಿಲ್ದಾಣದ ಭದ್ರತಾ ಪಡೆಯು ಕೂಲಂಕುಷವಾಗಿ ವಿಚಾರಣೆ ಮಾಡಿದೆ. ಕುಟುಂಬ ಕೇವಲ ನೆನಪಿಗಾಗಿ ಬಾಂಬ್‌ ತಂದಿದ್ದು ಸ್ಪಷ್ಟವಾದ ನಂತರ ಅವರನ್ನು ಅಮೆರಿಕಕ್ಕೆ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next