Advertisement

ಬಾಗ್ದಾದಿ ಹತ್ಯೆ ಸತ್ಯ: ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದ ಐಸಿಸ್, ಹೊಸ ನಾಯಕನ ನೇಮಕ

08:28 AM Nov 02, 2019 | Team Udayavani |

ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಪಡೆಗಳು ನಡೆಸಿದ ದಾಳಿಯ ನಂತರ ಮೃತಪಟ್ಟಿದ್ದ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಬಾಗ್ದಾದಿಯ ಹತ್ಯೆ ನಿಜ, ನಾವು ಶೀಘ್ರದಲ್ಲಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಐಸಿಸ್ ಹೇಳಿದೆ.

Advertisement

ಈ ಕುರಿತು ಆಡಿಯೋ ಟೇಪ್ ಬಿಡುಗಡೆ ಮಾಡಿರುವ ಐಸಿಸ್ , ಬಾಗ್ದಾದಿ ಮೃತಪಟ್ಟಿರುವುದು ನಿಜ. ಆತನ ಉತ್ತರಾಧಿಕಾರಿಯಾಗಿ ಅಬು ಇಬ್ರಾಹಿಂ ಅಲ್ ಹಷಿಮಿ ಅಲ್ ಖುರೇಶಿಯನ್ನು ಆಯ್ಕೆ ಮಾಡಿದ್ದೇವೆ. ನಮ್ಮ ಬಾಹುಳ್ಯವನ್ನು ಇನ್ನಷ್ಟು ವಿಸ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿವೆ.

ಬಾಗ್ದಾದಿ ಹತ್ಯೆ ಯ ನಂತರ ಐಸಿಸ್ ನಲ್ಲಿ ಅಂತಃಕಲಹ ನಡೆಯಲಿದೆ ಎಂದು ಅಮೆರಿಕಾ ಅಂದಾಜಿಸಿತ್ತು. ಆದರೇ ಐಸಿಸ್ ಸಮಲೋಚನಾ ಮಂಡಳಿ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಆ ಮೂಲಕ ಇನ್ನಷ್ಟು  ಮಾರಕವಾಗಿ ಪರಿಣಮಿಸಿದೆ. 2011ರಲ್ಲಿ ಇದ್ದ ಸ್ಥಿತಿಗಿಂತಲೂ ಇನ್ನು ಪ್ರಬಲತೆಯನ್ನು ಹೆಚ್ಚಿಸಿಕೊಂಡಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next