Advertisement

ಐಸಿಸ್‌ನಲ್ಲಿದ್ದಾರೆ ಭಾರತ ಮೂಲದ 66 ಉಗ್ರರು

01:40 AM Dec 18, 2021 | Team Udayavani |

ವಾಷಿಂಗ್ಟನ್‌: ಜಾಗತಿಕ ಉಗ್ರ ಸಂಘಟನೆ ಐಸಿಸ್‌ನಲ್ಲಿ ಕನಿಷ್ಠ 66 ಮಂದಿ ಭಾರತ ಮೂಲದವರಿದ್ದಾರೆ.
ಅಮೆರಿಕದ ವಿದೇಶಾಂಗ ಸಚಿವಾಲ ಯದ 2020ನೇ ಸಾಲಿನ “ದೇಶಗಳಲ್ಲಿ ಭಯೋತ್ಪಾದಕತೆ’ ಎಂಬ ವರದಿಯಲ್ಲಿ ಇಂಥ ಒಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಲಾಗಿದೆ.

Advertisement

ರಾಷ್ಟ್ರೀಯ ತನಿಖಾ ಸಂಸ್ಥೆ ಯ(ಎನ್‌ಐಎ) ಈಗಾಗಲೇ 34 ಪ್ರಕರಣಗಳ ಬಗ್ಗೆ ಪರಿ ಶೀಲನೆ ನಡೆಸಿದ್ದು, ಕೇರಳ ಮತ್ತು ಪಶ್ಚಿಮ ಬಂಗಾಲದಿಂದ 160 ಮಂದಿ ಯನ್ನು ಬಂಧಿಸಿದೆ. ಈ ಪೈಕಿ 10 ಮಂದಿ ಅಲ್‌ಸೇರಿದವರು. ಒಟ್ಟಾರೆ 66 ಭಾರತೀಯರು ಐಸಿಸ್‌ನಲ್ಲಿ ಸಕ್ರಿಯರಾಗಿದ್ದಾರೆ ಎಂದು ವರದಿ ಹೇಳಿದೆ. ಜತೆಗೆ ಉಗ್ರ ನಿಗ್ರಹಕ್ಕಾಗಿ ಭಾರತದ ಎನ್‌ಐಎ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಕೈಗೊಳ್ಳುತ್ತಿರುವ ಕ್ರಮಗಳನ್ನು ವರದಿಯಲ್ಲಿ ಮುಕ್ತಕಂಠದಿಂದ ಶ್ಲಾ ಸಲಾಗಿದೆ.

ಕೋಲ್ಕತಾ ಪೊಲೀಸ್‌ ಇಲಾಖೆಯ ಉಗ್ರ ನಿಗ್ರಹ ಪಡೆ ಮೇ 29ರಂದು ಬಾಂಗ್ಲಾ ಉಗ್ರ ಸಂಘಟನೆ ಜಮಾತ್‌-ಉಲ್‌- ಮುಜಾಹಿದೀನ್‌ನ ಎರಡನೇ ಅತ್ಯುಚ್ಚ ನಾಯಕನನ್ನು ಬಂಧಿಸಿದೆ. ಆತ 2013ರಲ್ಲಿ ಬಿಹಾರದ ಬೋಧ್‌ಗಯಾ ಬಾಂಬ್‌ ಸ್ಫೋಟಕ್ಕೆ ಕಾರಣನಾಗಿದ್ದಾನೆ ಎಂದು ವರದಿಯಲ್ಲಿಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಭಾರತದ ಎಲ್ಲ ನಗರಗಳ ನಡುವೆ ಸೌಂದರ್ಯ ಸ್ಪರ್ಧೆ ನಡೆಯಲಿ: ಪ್ರಧಾನಿ ಮೋದಿ

ಕ್ರಮ ಕೈಗೊಳ್ಳದ ಪಾಕ್‌: ಜೈಶ್‌ ಸೇರಿ ಪಾಕಿಸ್ಥಾನ‌ಲ್ಲಿರುವ ಭಯೋತ್ಪಾದಕ ಸಂಘಟನೆಗಳು ಇನ್ನೂ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ. ಅವುಗಳನ್ನು ಮಟ್ಟ ಹಾಕುವಲ್ಲಿ ಪಾಕ್‌ ಸರಕಾರ ಕೈಗೊಂಡ ಕ್ರಮಗಳು ಏನೇನೂ ಸಾಲದು ಎಂದೂ ಅಮೆರಿಕದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಮುಂಬಯಿ ದಾಳಿಯ ರೂವಾರಿ, ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿರುವ ಮಸೂದ್‌ ಅಜರ್‌, ಆತನ ನಿಕಟವರ್ತಿ ಸಾಜಿದ್‌ ಮಿರ್‌ ಇನ್ನೂ ಪಾಕಿಸ್ಥಾನ‌ಲ್ಲಿ ಮುಕ್ತವಾಗಿ ವಿಹರಿಸುತ್ತಿದ್ದಾರೆ. ಅವರ ವಿರುದ್ಧ ಪಾಕ್‌ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಟೀಕಿಸಲಾಗಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next