Advertisement

ಐಎಸ್‌ಎಲ್‌: ಬೆಂಗಳೂರು ಎಫ್ ಸಿ ಫೈನಲ್‌ ಪ್ರವೇಶ

12:30 AM Mar 12, 2019 | Team Udayavani |

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಎಸ್‌ಎಲ್‌ 2ನೇ ಲೆಗ್‌ ಸೆಮಿಫೈನಲ್‌ ಪಂದ್ಯದಲ್ಲಿ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡದ ವಿರುದ್ಧ ಸುನೀಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್ಸಿ 3-0 ಗೋಲುಗಳ ಅಂತರದ ಗೆಲುವು ಸಾಧಿಸಿ ಸತತ 2ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿತು (ಒಟ್ಟಾರೆ ಗೋಲಿನ ಸರಾಸರಿ 4-2). ಕಳೆದ ವರ್ಷ ಚೆಟ್ರಿ ಪಡೆ ರನ್ನರ್‌ಅಪ್‌ ಆಗಿತ್ತು. ಮಾ. 17ರಂದು ಮುಂಬಯಿಯಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. 

Advertisement

ಮಂಗಳವಾರ ಮುಂಬೈ-ಗೋವಾ ನಡುವೆ 2ನೇ ಲೆಗ್‌ ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ಇಲ್ಲಿನ ವಿಜೇತರನ್ನು ಬೆಂಗಳೂರು ಎಫ್ಸಿ ಫೈನಲ್‌ನಲ್ಲಿ ಎದುರಿಸಲಿದೆ.

ಮೊದಲ ಲೆಗ್‌ ಸೆಮಿಫೈನಲ್‌ನಲ್ಲಿ ಬೆಂಗಳೂರು ಎಫ್ಸಿ ವಿರುದ್ಧ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತ್ತು. ಹೀಗಾಗಿ 2ನೇ ಲೆಗ್‌ ಸೆಮಿಫೈನಲ್‌ ಪಂದ್ಯದಲ್ಲಿ ಬೆಂಗಳೂರು ತಂಡದ ಮೇಲೆ ಒತ್ತಡ ಹೆಚ್ಚಿತ್ತು. ಪಂದ್ಯ ಆರಂಭವಾಗಿ 71 ನಿಮಿಷದ ತನಕ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗಿರಲಿಲ್ಲ.  ಇದರಿಂದ ಬೆಂಗಳೂರು ಹೆಚ್ಚು ಆತಂಕಕ್ಕೆ ಒಳಗಾಗಿತ್ತು.

ಪಂದ್ಯ ಕೊನೆಗೊಳ್ಳಲು 24 ನಿಮಿಷ ಬಾಕಿ ಇದೆ ಎನ್ನುವಷ್ಟರಲ್ಲಿ ಬೆಂಗಳೂರು ಎಫ್ಸಿ ಮೂರು ಗೋಲು ಸಿಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next