Advertisement

ಐಸಿಸ್‌ ದಾಳಿ: 39 ಸಾವು : ಅಫ್ಘಾನಿಸ್ಥಾನದ ಜಲಾಲಾಬಾದ್‌ ಜೈಲಿಗೆ ನುಗ್ಗಿದ ಉಗ್ರರು

03:07 AM Aug 04, 2020 | Hari Prasad |

ಕಾಬೂಲ್‌: ಪೂರ್ವ ಅಫ್ಘಾನಿಸ್ಥಾನದ ನಂಗರ್‌ಹಾರ್‌ ಜೈಲಿನ ಮೇಲೆ ರವಿವಾರ ರಾತ್ರೋರಾತ್ರಿ ಇಸ್ಲಾಮಿಕ್‌ ಸ್ಟೇಟ್ ‌(ಐಸಿಸ್‌) ಉಗ್ರರು ದಾಳಿ ನಡೆಸಿದ್ದಾರೆ.

Advertisement

ಬರೋಬ್ಬರಿ 20 ಗಂಟೆ ನಡೆದ ಕಾಳಗ ಸೋಮವಾರ ಮುಕ್ತಾಯವಾಗಿದೆ.

ಈ ಘರ್ಷಣೆಯಲ್ಲಿ 39 ಮಂದಿ ಅಸುನೀಗಿದ್ದಾರೆ ಮತ್ತು 50ಕ್ಕೂ ಹೆಚ್ಚು ಅಧಿಕ ಮಂದಿಗೆ ಗಾಯಗಳಾಗಿವೆ.

ಅನೇಕ ಐಸಿಸ್‌ ಉಗ್ರರೂ ಇದ್ದಂತಹ ಜೈಲಿನ ಮೇಲೆ ರವಿವಾರ ರಾತ್ರಿ ದಾಳಿ ನಡೆದಿದೆ. ಐಸಿಸ್‌ನ ಆತ್ಮಾಹುತಿ ದಾಳಿಕೋರನು ಸ್ಫೋಟಕಗಳನ್ನು ತುಂಬಿದ ವಾಹನವೊಂದನ್ನು ಜೈಲಿನ ಪ್ರವೇಶ ದ್ವಾರದೊಳಕ್ಕೆ ನುಗ್ಗಿಸಿದ್ದಾನೆ.
ಜತೆಗೆ ಇತರ ಉಗ್ರರು ಏಕಾಏಕಿ ಗುಂಡಿನ ಮಳೆಗರೆಯಲು ಆರಂಭಿಸಿದ್ದಾರೆ. ಈ ವೇಳೆ ಜೈಲಿನೊಳಗಿನ ಭದ್ರತಾ ಸಿಬಂದಿಯೂ ಪ್ರತಿದಾಳಿ ನಡೆಸಿದ್ದು, ಐವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಈ ದಾಳಿಯಲ್ಲಿ ಕೈದಿಗಳು, ನಾಗರಿಕರು, ಭದ್ರತಾ ಸಿಬ್ಬಂದಿ ಸೇರಿದಂತೆ 21 ಮಂದಿ ಮೃತಪಟ್ಟಿದ್ದಾರೆ ಎಂದು ನಂಗರ್‌ಹಾರ್‌ ಪ್ರಾಂತ್ಯದ ಗವರ್ನರ್‌ ವಕ್ತಾರ ಅತಾವುಲ್ಲಾ ಖೋಗ್ಯಾನಿ ತಿಳಿಸಿದ್ದಾರೆ.

Advertisement

ಕಾಬೂಲ್‌ನಿಂದ 115 ಕಿ.ಮೀ. ದೂರದ ನಂಗರ್‌ಹಾರ್‌ ಪ್ರಾಂತ್ಯದ ಜಲಾಲಾಬಾದ್‌ನ ಜೈಲಿನಲ್ಲಿ ಈ ಘಟನೆ ನಡೆದಿದೆ. ಅಫ್ಘಾನ್‌ನಲ್ಲಿರುವ ಐಎಸ್‌ ಖೊರಾ ಸಾನ್‌ ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯ ಉದ್ದೇಶವೇನೆಂದು ತಿಳಿದುಬಂದಿಲ್ಲ. ಆದರೆ, ಘರ್ಷಣೆ ವೇಳೆ ಕೆಲವು ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಜೈಲಲ್ಲಿ 1,500ರಷ್ಟು ಕೈದಿಗಳಿದ್ದು, ಆ ಪೈಕಿ ನೂರಾರು ಮಂದಿ ಐಸಿಸ್‌ ಉಗ್ರರೇ ಆಗಿದ್ದಾರೆ.

ಅಫ್ಘಾನ್‌ ಗುಪ್ತಚರ ಸಂಸ್ಥೆಯು ಖೊರಾಸಾನ್‌ನ ಹಿರಿಯ ಕಮಾಂಡರ್‌ನನ್ನು ಹತ್ಯೆಗೈದ ಮಾರನೇ ದಿನವೇ ಈ ದಾಳಿ ನಡೆದಿದೆ. ಇದೇ ವೇಳೆ ಜೈಲಿನ ಮೇಲೆ ದಾಳಿ ಪ್ರಕರಣದಲ್ಲಿ ತನ್ನ ಕೈವಾಡ ಇಲ್ಲವೆಂದು ತಾಲಿಬಾನ್‌ ಉಗ್ರ ಸಂಘಟನೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next