Advertisement
ಐಸಿಸ್ ಹೆಚ್ಚಿನ ಸಂದರ್ಭಗಳಲ್ಲಿ ದಾಳಿಗೆ ಯುವಕರನ್ನೇ ಬಳಸುತ್ತದೆ. ಆದರೆ, ಲಾಸ್ ವೇಗಾಸ್‌ನ ದಾಳಿಕೋರನ ವಯಸ್ಸು 60. ಇನ್ನು ಘಟನೆ ನಡೆದ ಕೆಲವು ಗಂಟೆಗಳ ಅನಂತರ ಐಸಿಸ್‌ನ ಸುದ್ದಿ ಸಂಸ್ಥೆ “ಆಮಕ್’ 3 ಬಾರಿ ಹೇಳಿಕೆ ಬಿಡುಗಡೆ ಮಾಡಿತ್ತು. ಮೂರನೇ ದಾಳಿಯಲ್ಲಿ ಅಮೆರಿಕದ ವ್ಯಕ್ತಿ ಎಂದು ಹೇಳಿಕೊಂಡಿತ್ತು. ಇತ್ತೀಚೆಗೆ ಫಿಲಿಪ್ಪೀನ್ಸ್‌ನ ಕ್ಯಾಸಿನೋ ಮೇಲೆ ನಡೆದಿದ್ದ ಬಲು ದೊಡ್ಡ ದಾಳಿಗೂ ಕಾರಣ ತಾನೇ ಎಂದು ಸಂಘಟನೆ ಹೇಳಿಕೊಂಡಿತ್ತು. ನಿಜ ಏನೆಂದರೆ ಬಹುಕೋಟಿ ಮೊತ್ತದ ಸಾಲ ಅದರ ಮೇಲಿತ್ತು. ಅದನ್ನು ತಪ್ಪಿಸಲು ಉಗ್ರರು ದಾಳಿ ನಡೆಸಿದ್ದಾರೆ ಎಂದು ಕ್ಯಾಸಿನೋ ಆಡಳಿತ ಮಂಡಳಿ ಹೇಳಿಕೊಂಡಿತ್ತು.
ಸಂಗೀತ ಕಾರ್ಯಕ್ರಮದಲ್ಲಿ 60 ಮಂದಿ ಯನ್ನು ಹತ್ಯೆ ಮಾಡಿದ ಸ್ಟೀಫನ್ ಪೆಡಾಕ್ ತಂದೆ ಬೆಂಜಮಿನ್ ಹಾಸ್ಕಿನ್ಸ್ ಪೆಡಾಕ್ ಬ್ಯಾಂಕ್ ದರೋಡೆಕೋರನೆಂಬ ಮಾಹಿತಿ ಹೊರ ಬಿದ್ದಿದೆ. 1959 ಮತ್ತು 1960ರಲ್ಲಿ ಆತ ಫೀನಿಕ್ಸ್‌ನಲ್ಲಿರುವ ಬ್ಯಾಂಕ್‌ಗಳ ಶಾಖೆ ಗಳಿಗೆ ನುಗ್ಗಿ 25 ಸಾವಿರ ಅಮೆರಿಕನ್ ಡಾಲರ್ ದೋಚಿದ್ದ. ಇದಕ್ಕಾಗಿ ಆತನಿಗೆ 20 ವರ್ಷ ಶಿಕ್ಷೆಯೂ ಆಯಿತು. 1968ರಲ್ಲಿ ಜೈ ಲಿಂದ ಪರಾರಿಯಾಗಿದ್ದ. 1969ರಲ್ಲಿ ಎಫ್ಬಿಐ ಆತನನ್ನು ಮೋಸ್ಟ್ ವಾಂಟೆಡ್ ಲಿಸ್ಟ್‌ಗೆ ಸೇರಿಸಿತ್ತು. ಇನ್ನು ದಾಳಿಕೋರ ಪೆಡಾಕ್ 1980ರಿಂದ 3 ವರ್ಷ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಯಲ್ಲಿ ಲೆಕ್ಕಾಧಿಕಾರಿ ಯಾಗಿದ್ದ. ಆತ ಹೇರಳವಾಗಿ ದುಡ್ಡು ಸಂಪಾ ದನೆ ಮಾಡಿದ್ದ. ಈತನಿಗೆ ಜೂಜು ಎಂದರೆ ಪಂಚಪ್ರಾಣ. ಅದಕ್ಕಾ ಗಿಯೇ ಅಮೆ ರಿಕದ ಜೂಜಿನ ರಾಜ ಧಾನಿಗೆ ಸಮೀಪವೇ ಮನೆ ಮಾಡಿಕೊಂಡಿದ್ದ.