Advertisement

ಅಸ್ಸಾಂನಲ್ಲಿ ಐಸಿಸ್‌ ಸಂಘಟನೆ ಧ್ವಜ ಪತ್ತೆ

06:00 AM May 05, 2018 | Team Udayavani |

ನಲ್ಬರಿ(ಅಸ್ಸಾಂ): ಇಲ್ಲಿಯ ಕೊಯ್‌ಹಟಿ ಪ್ರದೇಶದ ಮರವೊಂದರಲ್ಲಿ “ಐಸಿಸ್‌ ಸೇರಿ'(ಜಾಯಿನ್‌ ಐಸಿಸ್‌) ಎಂದು ಬರೆಯಲಾಗಿರುವ ಧ್ವಜವೊಂದು ಪತ್ತೆಯಾಗಿದೆ. ಕಪ್ಪು ಬಣ್ಣದ ಧ್ವಜದ ಮೇಲೆ ಜಾಯ್ನ ಐಸಿಸ್‌ ಎಂಬ ಬರಹದ ಜೊತೆ ಅರೇಬಿಕ್‌ನ ಕೆಲ ಅಕ್ಷರಗಳನ್ನೂ ಬರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿಯ ಸ್ಥಳೀಯರು ಧ್ವಜವನ್ನು ಗುರುತಿಸಿ ನಮ್ಮ ಗಮನಕ್ಕೆ ತಂದರು. ಧ್ವಜವನ್ನು ಮರದಿಂದ ತೆಗೆದಿದ್ದೇವೆ. ಈ ಕುರಿತು ತನಿಖೆಯನ್ನೂ ಆರಂಭಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next