Advertisement

ಬಗ್ಧಾದಿ ಖಲೀಫ‌ನೆಂದು ಘೋಷಿಸಿಕೊಂಡಿದ್ದ ಮಸೀದಿ ಐಸಿಸ್‌ನಿಂದ ಸ್ಫೋಟ

12:19 PM Jun 22, 2017 | udayavani editorial |

ಬಗ್ಧಾದ್‌ : ಐಸಿಸ್‌ ಉಗ್ರರು ನಿನ್ನೆ ಬುಧವಾರ ಮೊಸೂಲ್‌ನ ಗ್ರ್ಯಾಂಡ್‌ ಅಲ್‌ ನೂರಿ ಮಸೀದಿಯನ್ನು ಹಾಗೂ ಅದರ ಮಿನಾರ್‌ಗಳನ್ನು ಸ್ಫೋಟಿಸಿರುವುದಾಗಿ ಇರಾಕ್‌ ಸೇನಾ ಹೇಳಿಕೆಯೊಂದು ತಿಳಿಸಿದೆ. 

Advertisement

ಇದೇ ಮಸೀದಿಯಲ್ಲಿ 2014ರಲ್ಲಿ ಐಸಿಸ್‌ ಪರಮೋಚ್ಚ ನಾಯಕ ಅಬು ಬಕ್‌ರ್‌ ಅಲ್‌ ಬಗ್ಧಾದಿಯು ತನ್ನನ್ನು ತಾನು ಖಲೀಫ‌ ನೆಂದು ಘೋಷಿಸಿಕೊಂಡಿದ್ದ. ಆತ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಅದೊಂದೇ ಬಾರಿ.

ಸಮರತ್ರಸ್ತ ಮೊಸೂಲ್‌ ನಗರದಿಂದ ಪಲಾಯನ ಮಾಡುವ ಸಿದ್ಧತೆಯಲ್ಲಿರುವ ಐಸಿಸ್‌ ಉಗ್ರರು ಹತಾಶೆಯ ಕ್ರಮವಾಗಿ ಮಸೀದಿಯನ್ನು ಸ್ಫೋಟಿಸಿದ್ದಾರೆ ಎಂದು ಇರಾಕ್‌ ಸೇನೆಯ ಜಂಟಿ ಕಾರ್ಯಾಚರಣೆ ಕಮಾಂಡ್‌ ವಕ್ತಾರ ಯಾಹ್ಯಾ ರಸೂಲ್‌ ಅವರು ರುಡಾವ್‌ ಟಿವಿಗೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next