Advertisement

ಕಠ್ಮಂಡು: ನಕಲಿ ನೋಟುಗಳ ಪೂರೈಕೆದಾರನ ಹತ್ಯೆ

08:55 PM Sep 22, 2022 | Team Udayavani |

ಕಠ್ಮಂಡು: ಭಾರತದಲ್ಲಿ ನಕಲಿ ನೋಟುಗಳ ಅತಿದೊಡ್ಡ ಪೂರೈಕೆದಾರ, ಪಾಕಿಸ್ತಾನದ ಐಎಸ್‌ಐ ಏಜೆಂಟ್‌ ಲಾಲ್‌ ಮೊಹಮ್ಮದ್‌ ಅಲಿಯಾಸ್‌ ಮೊಹಮ್ಮದ್‌ ದರ್ಜಿ(55)ನನ್ನು ನೇಪಾಳದ ಕಠ್ಮಂಡುವಿನಲ್ಲಿ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ.

Advertisement

ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಲಾಲ್‌ ಮೊಹಮ್ಮದ್‌ ತನ್ನ ಐಷಾರಾಮಿ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ಹಿಂದಿನಿಂದ ಬಂದ ಇಬ್ಬರು ಬಂದೂಕುಧಾರಿಗಳು ಅವನ ಮೇಲೆ ಗುಂಡು ಹಾರಿಸುತ್ತಾರೆ. ಈ ವೇಳೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೂ ಆತನನ್ನು ಅಟ್ಟಾಡಿಸಿಕೊಂಡು ಅವನ ಹತ್ಯೆ ಮಾಡಲಾಗುತ್ತದೆ. ಇದೇ ವೇಳೆ ತಂದೆಯನ್ನು ಕಾಪಾಡಲು ಮಗಳು ಮೊದಲನೇ ಮಹಡಿಯಿಂದ ಕೆಳಕ್ಕೆ ಧುಮುಕಿ, ಬಳಿಗೆ ಬರುತ್ತಾಳೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುತ್ತಾನೆ.

ಲಾಲ್‌ ಮೊಹಮ್ಮದ್‌ ಇತರೆ ಐಎಸ್‌ಐ ಏಜೆಂಟ್‌ಗಳಿಗೆ ಆಶ್ರಯ ನೀಡುತ್ತಿದ್ದ. ನಕಲಿ ನೋಟುಗಳನ್ನು ಪಾಕಿಸ್ತಾನದಲ್ಲಿ ತಯಾರಿಸಿ, ಅದನ್ನು ಬಾಂಗ್ಲಾದೇಶ ಮತ್ತು ನೇಪಾಳ ಮೂಲಕ ಭಾರತಕ್ಕೆ ಸಾಗಿಸುವ ದಂಧೆಯಲ್ಲಿ ಈತ ತೊಡಗಿದ್ದನು. ಅಲ್ಲದೇ ಈತನಿಗೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಡಿ-ಕಂಪನಿಯ ನಂಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next