ಪುತ್ತೂರು: ತವರಿಗೆ ಬಂದಿದ್ದ ಮಹಿಳೆ ಮತ್ತು ಒಂದೂವರೆ ವರ್ಷದ ಮಗು ನಾಪತ್ತೆಯಾಗಿರುವ ಕುರಿತಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೆಟ್ಟಣಿಗೆ ಮುಟ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ನಿವಾಸಿ ಅಬ್ದುಲ್ ಲತೀಫ್ ಅವರ ಪುತ್ರಿ, ನೆಲ್ಯಾಡಿ ಅಲ್ತಾ ಅವರ ಪತ್ನಿ ಇರ್ಷಾನಾ(25) ಮತ್ತು ಒಂದೂವರೆ ವರ್ಷದ ಮಗು ಮಹಮ್ಮದ್ ಆದಿಲ್ ನಾಪತ್ತೆಯಾಗಿದ್ದಾರೆ.
ವಾರದ ಹಿಂದೆ ಇರ್ಷಾನಾ ಅವರು ಮಗುವಿ ನೊಂದಿಗೆ ಪುಳಿತ್ತಡಿಯ ತವರು ಮನೆಗೆ ಬಂದಿದ್ದರು. ಮೇ 20ರಂದು ಬೆಳಗ್ಗೆ ಆಕೆಯ ತಂದೆ ಮತ್ತು ತಾಯಿ ಕೇರಳದಲ್ಲಿ ನಡೆಯುವ ವಿವಾಹ ಸಮಾರಂಭಕ್ಕೆ ಹೋಗಿ ಸಂಜೆ ಮನೆಗೆ ಹಿಂದಿರುಗುವಾಗ ಇರ್ಷಾನಾ ಮತ್ತು ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಇರ್ಷಾನಾ ಅವರ ತಂದೆ ಅಬ್ದುಲ್ ಲತೀಫ್ ಅವರು ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.