ಹೊಸ ಸಿನಿಮಾಗಳು ಆರಂಭವಾಗುತ್ತಿದ್ದಂತೆ ಆ ಸಿನಿಮಾ ಮೂಲಕ ಹೊಸ ಪ್ರತಿಭೆಗಳು ಕೂಡಾ ಎಂಟ್ರಿಕೊಡುತ್ತಿರುತ್ತಾರೆ. ನಾಯಕ, ನಾಯಕಿ, ತಾಂತ್ರಿಕ ವರ್ಗ … ಹೀಗೆ ಕನಸು ಕಟ್ಟಿಕೊಂಡು ಬರುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಈಗ ಇಶಾನ ಎಂಬ ನವನಟಿಯೊಬ್ಬಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ.
ಗೌಸ್ ಪೀರ್ ನಿರ್ದೇಶನದ ಹೊಸ ಚಿತ್ರದಲ್ಲಿ ಇಶಾನ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಶಾನ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೂ ನಾಯಕಿಯಾಗಿದ್ದಾರೆ. ತಮಿಳಿನ “ರೇಟ್ಲ’ ಎಂಬ ಸಿನಿಮಾದ ಇಬ್ಬರು ನಾಯಕಿಯರ ಪೈಕಿ ಇಶಾನ ಕೂಡ ಒಬ್ಬರು. ಸಿನಿಮಾಗೆ ಪ್ರಭುದೇವ ಹೀರೋ. ಉಳಿದಂತೆ ತೆಲುಗಿನ “ಕರ್ಮ’ ಎಂಬ ಸಿನಿಮಾದಲ್ಲೂ ಇಶಾನ ನಟಿಸುತ್ತಿದ್ದಾರೆ. ಈಗ ಇಶಾನ, ಕನ್ನಡದ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇಶಾನ ಮೂಲತಃ ಉತ್ತರ ಕರ್ನಾಟಕದ ಹುಡುಗಿ. ತಂದೆ ಡಾಕ್ಟರ್. ಬೆಂಗಳೂರಲ್ಲೇ ನೆಲೆಸಿರುವ ಇಶಾನ, ಬಿ ಕಾಂ, ಎಂಬಿಎ ಮುಗಿಸಿದ್ದಾರೆ. ಕಾಲೇಜ್ ದಿನಗಳಲ್ಲೇ ಸಿನಿಮಾ ಅವಕಾಶ ಬಂದರೂ, ಎಜುಕೇಷನ್ ಮುಗಿಸುವ ಹಂಬಲ ಇಶಾನ ಅವರಿಗಿತ್ತು. ಒಬ್ಬ ನಾಯಕಿಗೆ ಏನೆಲ್ಲಾ ಅರ್ಹತೆ ಇರಬೇಕು ಅದೆಲ್ಲವನ್ನೂ ಅರಿತು ಇಶಾನ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರಂತೆ.