ಹೈದರಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ. ದ್ವಿಶತಕ ವೀರ ಶುಭ್ಮನ್ ಗಿಲ್ ಬ್ಯಾಟಿಂಗ್ ಸಾಹಸದಿಂದ ಭಾರತ ತಂಡವು 350 ರನ್ ಗಳ ಬೃಹತ್ ಗುರಿ ನೀಡಿತ್ತು.
ಶುಭ್ಮನ್ ಗಿಲ್ ಅವರು ದ್ವಿಶತಕದ ಕ್ಲಬ್ ಸೇರಿದ ಮತ್ತೋರ್ವ ಭಾರತೀಯರಾದರು. ಪಂದ್ಯ ಮುಗಿದ ಬಳಿಕ ದ್ವಿಶತಕ ವೀರರಾದ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ವೇಳೆ ಇಶಾನ್ ಕಿಶನ್ ಗೆ ರೋಹಿತ್, ಹಿಂದಿನ ಪಂದ್ಯದಲ್ಲಿ ನೀನು ದ್ವಿಶತಕ ಗಳಿಸಿದರೂ ನಂತರ ಮೂರು ಪಂದ್ಯದಲ್ಲಿ ಯಾಕೆ ಆಡಲಿಲ್ಲ ಎಂದು ಛೇಡಿಸಿದರು.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಇಶಾನ್ ಕಿಶನ್, ‘ಅಣ್ಣಾ, ಕ್ಯಾಪ್ಟನ್ ನೀವೆ ಅಲ್ವಾ’ ಎಂದರು.
Related Articles
ಅಲ್ಲದೆ ಈ ವೇಳೆ ಮಾತನಾಡಿದ ಗಿಲ್, ಇಶಾನ್ ಕಿಶನ್ ಜೊತೆಗಿನ ತಮ್ಮ ಹೋಟೆಲ್ ಕೋಣೆಯಲ್ಲಿ ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲ. ಇಶಾನ್ ವಿಡಿಯೋ, ಹಾಡುಗಳನ್ನು ಕೇಳುತ್ತಾ ಇರುತ್ತಾನೆ ಎಂದರು.