Advertisement
ಬೆಂಗಳೂರು ಮೂಲದ ಸ್ಟಾರ್ಟಪ್ ಗ್ಯಾಲಕ್ಟಸ್ ಫನ್‌ವೇರ್ ಟೆಕ್ನಾಲಜಿ ಪ್ರೈವೇಟ್ ಲಿ.ನಲ್ಲಿ 2019ರಲ್ಲಿ ಹೂಡಿಕೆ ಮಾಡಿದ್ದಾರೆ. ಆ ಕಂಪನಿಯ ಕ್ರೀಡಾಆ್ಯಪ್ “ಮೊಬೈಲ್ ಪ್ರೀಮಿಯರ್ ಲೀಗ್’ನ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಎಂಪಿಎಲ್ ಭಾರತ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕನಾಗಿರುವುದರಿಂದ ಕೊಹ್ಲಿ ಸ್ವಹಿತಾಸಕ್ತಿ ಸಂಘರ್ಷದ ಸಮಸ್ಯೆ ಎದುರಿಸುತ್ತಿದ್ದಾರೆಂದು ಮೂಲಗಳು ಹೇಳಿವೆ.
Related Articles
Advertisement
ಸ್ವಹಿತಾಸಕ್ತಿ ಅನ್ವಯಿಸಲ್ಲ: ಕಾರ್ನರ್ ಸ್ಪೋರ್ಟ್ ಸಿಇಒ ಅಮಿತ್ ಅರುಣ್ ಸಜ್ಡೆ ಪ್ರಕಾರ, ಕೊಹ್ಲಿಗೆ ಯಾವುದೇ ಸ್ವಹಿತಾಸಕ್ತಿ ಸಮ ಸ್ಯೆಯಿಲ್ಲ. ಅವರು ಯಾವ ಕಂಪನಿಯಲ್ಲಿ ಹೂಡಿಕೆ ಮಾಡುವುದಕ್ಕೆ ಬೇಕಾದರೂ ಸ್ವತಂತ್ರರು. ಸಜ್ಡೆ ಲೆಕ್ಕಾಚಾರದಲ್ಲಿ ನೋಡಿದಾಗ ಕೊಹ್ಲಿಗೆ ಹೂಡಿಕೆ ಮಾಡುವುದಕ್ಕೆ ಅಧಿಕಾರವಿದೆ. ಆದರೆ ಸ್ವಹಿತಾಸಕ್ತಿ ನಿಯಮಗಳ ಪ್ರಕಾರ ನೋಡಿದರೆ, ಬಿಸಿಸಿಐ ಕಿಟ್ ಪ್ರಾಯೋಜಕ ಕಂಪನಿಗೆ ತಾನೇ ಜಾಹೀರಾತು ನೀಡುವುದು, ಅದರ ಮೂಲ ಕಂಪನಿಯಲ್ಲಿ ಷೇರು ಹೊಂದಿರುವುದು ಸ್ವಹಿತಾಸಕ್ತಿ ಸಂಘರ್ಷವೆನಿಸಿಕೊಳ್ಳುತ್ತದೆ. ಇಲ್ಲಿ ಕೊಹ್ಲಿ ತನ್ನ ಕಂಪನಿಯನ್ನು ಬೆಳೆಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಜೀವ ಪಡೆದುಕೊಳ್ಳುವ ಸಾಧ್ಯತೆಯಿದೆ.
ಗಂಗೂಲಿಗೂ ಸಮಸ್ಯೆ: ಬಿಸಿಸಿಐ ಅಧ್ಯಕ್ಷ ಗಂಗೂಲಿ ಮೈ11ಸರ್ಕಲ್ ಬೆಟ್ಟಿಂಗ್ ಆ್ಯಪ್‌ಗೆ ಜಾಹೀರಾತುದಾರ. ಇನ್ನೊಂದುಕಡೆ ಡ್ರೀಮ್11 ಆ್ಯಪ್ ಐಪಿಎಲ್‌ಗೆ ಶೀರ್ಷಿಕೆ ಪ್ರಾಯೋಜಕ! ಇದು ಸ್ವಹಿತಾಸಕ್ತಿ ಎಂಬ ಆರೋಪಗಳು ಕೇಳಿಬಂದಿವೆ.