Advertisement
ಕಳೆದ ಮೂರು ವರ್ಷಗಳ ತೀವ್ರ ವಿರೋಧ, ಕುಟ್ಟಪ್ಪ ಹತ್ಯೆ, ಮಡಿಕೇರಿ ಗಲಭೆ, ಮರುವರ್ಷ ಮೈಸೂರಿನ ರವಿ ಮಾಕಳಿ ಹತ್ಯೆ, ಒಡೆದ ಮನಸ್ಸುಗಳ ನಡುವೆ ಕೂಡಾ ಟಿಪ್ಪು ಜಯಂತಿ ನಡೆಸಿಯೇ ಸಿದ್ಧ ಎಂದು ಮುಖ್ಯಮಂತ್ರಿಗಳು ಶಪಥ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಕಾಳಜಿ ಇಲ್ಲದ ನಡೆಗಳಿಗೆ ಜನಾಕ್ರೋಶ ಉಂಟಾದರೂ ಉದ್ಧಟತನ ಪ್ರದರ್ಶನ ಮಾಡುವುದಕ್ಕೆ ನಮ್ಮ ಮುಖ್ಯಮಂತ್ರಿಗಳನ್ನಲ್ಲದೆ ಬೇರೆ ಉದಾಹರಣೆಗಳನ್ನು ಕೊಡಬಹುದು ಎಂದು ಅನಿಸು ತ್ತಿಲ್ಲ. ರಾಜ್ಯ ಸರ್ಕಾರದ ಕ್ರಮ ಮತ್ತು ಮುಖ್ಯಮಂತ್ರಿಗಳ ವರ್ತನೆ ಗಳನ್ನು ನೋಡಿದರೆ ಪ್ರಜಾಪ್ರಭುತ್ವದ ಮೇಲಿರುವ ಖ್ಯಾತ ವ್ಯಾಖ್ಯಾನ ಮಕಾಡೆ ಮಲಗಿದಂತೆ ಭಾಸವಾಗುತ್ತಿದೆ. ಸರ್ಕಾರ ಪ್ರಜೆಗಳ ವಿರೋಧದ ನಡು ವೆಯೂ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಪ್ರಜಾಪ್ರಭುತ್ವ ದಲ್ಲಿ ಚಳವಳಿಗಳು ಜಾತಿ ಆಧಾರಿತವಾಗಿ ನಡೆಯಬಾರದು. ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವೂ ಆಗಬಾರದು. ವಿಚಿತ್ರ ವೆಂದರೆ ಸಿದ್ದರಾಮಯ್ಯ ಸರಕಾರದಲ್ಲಿ ಚಳವಳಿಗಳು, ಪ್ರತಿಭಟನೆಗಳು ಅನಿವಾರ್ಯವಾಗಿ ಜಾತಿ ಸಮೂಹಗಳಿಂದ, ಜಾತಿ ಸಂಘಟನೆಗಳಿಂದ ನಡೆಯುತ್ತಿವೆ! ಚಿತ್ರದುರ್ಗದ ಓಬವ್ವನ ವಂಶಸ್ಥರು, ಮದಕರಿ ನಾಯಕನ ವಂಶಸ್ಥರು, ಕೊಡವರು, ಕೆನರಾ ಕ್ರಿಶ್ಚಿಯನ್ನರು, ಮಂಡಯಂ ಅಯ್ಯಂಗಾರರೆಲ್ಲರೂ ಜಾತಿ ವೇದಿಕೆಗಳ ಮೂಲಕ ಸರಕಾರದ ಕ್ರಮವನ್ನು ಟೀಕಿಸಲಾರಂಭಿಸಿದ್ದಾರೆ! ಹಾಗಾದರೆ ರಾಜ್ಯದಲ್ಲಿ ಉಳಿದಿರುವ ಡೆಮಾಕ್ರಸಿಯೆಷ್ಟು? ಜನರನ್ನು ಜಾತಿವಾರು ವಿಂಗಡಿಸಿ, ಅವರ ಆಶಯಕ್ಕೆ ವಿರುದ್ಧ ವಾಗಿ ಟಿಪ್ಪು ಜಯಂತಿ ಆಚರಣೆ ಮಾಡುವ ಸಿದ್ದರಾಮಯ್ಯ ನವರದ್ದು ಪ್ರಜಾಪ್ರಭುತ್ವ ವಿರೋಧಿ ಕ್ರಮವಲ್ಲವೇ?
Related Articles
Advertisement
ಶ್ರೀರಂಗಪಟ್ಟಣದ ಸಮೀಪ ಇರುವ ಗಂಜಾಂ ಎಂಬಲ್ಲಿ ಟಿಪ್ಪುವಿನ ಬೇಸಿಗೆ ಅರಮನೆ ಎನ್ನುವ ಕಟ್ಟಡವೊಂದಿದೆ. ಪ್ರತೀ ಬೇಸಿಗೆಯಲ್ಲಿ ಟಿಪ್ಪು ಪರಿವಾರ ಸಮೇತನಾಗಿ ಅಲ್ಲಿ ವಾಸ ಮಾಡುತ್ತಿದ್ದನಂತೆ. ಒಂದು ದಿನ ಟಿಪ್ಪುವಿನ ಪತ್ನಿಯರಲ್ಲಿ ಒಬ್ಟಾಕೆ ತನಗೆ ಬೆಳಗ್ಗೆ ಎ¨ªಾಕ್ಷಣ ದೂರದಲ್ಲಿ ಆಂಜನೇಯನ ಮೂರ್ತಿ ಕಾಣುತ್ತಿದೆಯೆಂದೂ ಇದರಿಂದ ತನ್ನ ನಮಾಜಿನ ಏಕಾಕ್ರತೆಗೆ ಭಂಗವಾಗುತ್ತಿದೆಯೆಂದೂ ತಿಳಿಸಿದಳಂತೆ. ಇದರಿಂದ ಕ್ರೋಧ ಗೊಂಡ ಟಿಪ್ಪು ಆ ದಿನವೇ ಹಿಂದುಗಳ ಆ ದೇವಸ್ಥಾನವನ್ನು ಮಸೀದಿ ಮಾಡುವಂತೆ ಆದೇಶ ನೀಡಿದ. ಒಂದೇ ದಿನದಲ್ಲಿ ಮೂಡಲ ಆಂಜನೆಯ ದೇವಸ್ಥಾನ ಮಸೀದಿಯಾಗಿ ಬದಲಾ ಯಿತು. ಇದು ಕಟ್ಟುಕಥೆ ಅನ್ನುವವರು ಇರಬಹುದು. ಆದರೆ ನಿಚ್ಚಳ ವಾಗಿ ದೇವಸ್ಥಾನದ ಕುರುಹುಗಳಿರುವುದಕ್ಕೆ ಏನನ್ನೋಣ?
ಸ್ವಾತಂತ್ರ್ಯ ನಂತರದ ಸೆಕ್ಯುಲರ್ ಸರಕಾರಗಳು ಅದನ್ನು ಪುರಾತನ ಸ್ಮಾರಕ ಎಂದು ಘೋಷಣೆ ಮಾಡಿ ಕೈತೊಳೆದು ಕೊಂಡಿತು. ಆದರೆ ಇಂದಿಗೂ ಶ್ರೀರಂಗಪಟ್ಟಣದ ಸುತ್ತಮುತ್ತಲ ಜನರ ಪಾಲಿಗೆ ಅದಿಂದೂ ಮೂಡಲ ಆಂಜನೇಯನ ಗುಡಿಯೇ. ಪೂರ್ವದ ಕಡೆಗೆ ಆಗಸಕ್ಕೆ ಮುಖ ಮಾಡಿ ನಿಂತ ಹನುಮಂತ ಟಿಪ್ಪುವಿನ ಕ್ರೌರ್ಯಕ್ಕೆ ಬಲಿಯಾದ. ಸರಕಾರ ಅದನ್ನು ಪುರಾತಣ್ತೀ ಇಲಾಖೆಯ ಸುಪರ್ದಿಗೊಪ್ಪಿಸಿದರೂ ಮುಸಲ್ಮಾನ ಸಂಘಟನೆಗಳು ಮತ್ತು ಟಿಪ್ಪು ಅಭಿಮಾನಿ ಸಂಘ ಗಳು ಅದನ್ನು ಹಾಗೇ ಇಡಲು ಬಿಡಲಿಲ್ಲ. ಅದನ್ನು ಮದರಸವ ನ್ನಾಗಿ ಮಾರ್ಪಾಡು ಮಾಡಿದರು. ಇಂದು ಆ ಕಟ್ಟಡವನ್ನು ಸಾಕಷ್ಟು ಮಾರ್ಪಾಡು ಮಾಡಲಾಗಿದೆಯಾದರೂ ದೇವಸ್ಥಾನದ ಲಕ್ಷಣಗಳನ್ನು ಸಂಪೂರ್ಣ ಮುಚ್ಚಿ ಹಾಕಲು ಸಾಧ್ಯವಾಗಿಲ್ಲ. ಹೊಯ್ಸಳ ಶೈಲಿಯನ್ನು ಹೋಲುವ ನಕ್ಷತ್ರಾಕಾರದ ತಳಹದಿ ಈ ದೇವಸ್ಥಾನ ಅತಿ ಪ್ರಾಚೀನವಾದುದೆಂಬುದನ್ನು ಹೇಳುತ್ತದೆ. ಎರಡು ಮಾಳಿಗೆಯ ಈಗಿನ ಕಟ್ಟಡದ ಕೆಳಭಾಗ ಮದರಸವಾ ದರೆ ಮೇಲಿನ ವಿಶಾಲ ಕೊಠಡಿ ನಮಾಜ್ ಕೋಣೆ. ಸುತ್ತಲ ಪೌಳಿಯಲ್ಲಾಲ್ಲೂ ಸಣ್ಣ ಮತ್ತು ದೊಡ್ಡ ಗೋರಿಗಳಿವೆ. ಈಗ್ಗೆ ಆರು ತಿಂಗಳ ಹಿಂದಿಗಿಂತಲೂ ಈಗ ಗೋರಿಗಳ ಸಂಖ್ಯೆ ಹೆಚ್ಚಾಗಿದೆ. ಪೌಳಿಗಳ ಸುತ್ತಲೂ ಕಲ್ಲಿನ ಮಂಟಪಗಳಿವೆ. ಕೆಲವು ಕಂಬಗಳ ಲ್ಲಿದ್ದ ಬರಹಗಳನ್ನು ಕೆತ್ತಿ ತೆಗೆದ ಕುರುಹುಗಳಿವೆ. ಹಿಂದೂ ವಾಸ್ತು ಪದ್ಧತಿಯ ಪ್ರಾಥಮಿಕ ತಿಳಿವಳಿಕೆ ಇರುವ ಯಾರಿಗೇ ಆದರೂ ಇದು ತ್ರಿಕುಟಾಚಲ ದೇವಸ್ಥಾನ ಎಂಬುದು ಸುಲಭವಾಗಿ ತಿಳಿಯುತ್ತವೆ. ಸುತ್ತಲೂ ಇರುವ ಕಲ್ಲಿನ ಕಂಬಗಳಲ್ಲಿ ಕಮಲ ಮತ್ತು ಇನ್ನಿತರ ಹೂವುಗಳ ಉಬ್ಬು ಚಿತ್ರಗಳಿವೆ. ಕೆಲವು ಅಸ್ಪಷ್ಟ ಮುಖಗಳೂ ಕಾಣಿಸುತ್ತವೆ. ಇವನ್ನೆಲ್ಲಾ ಸಾಕಷ್ಟು ಉಜ್ಜಿ ತೆಗೆಯಲಾದ ಕುರುಹುಗಳಿವೆ. ಗರುಢಸ್ತಂಭ ಇದ್ದ ಜಾಗದಲ್ಲಿ ದೊಡ್ಡ ಗೋರಿಯನ್ನು ಕಟ್ಟಲಾಗಿದೆ. ಪ್ರಸಾದ ತಯಾರಿಸುವ ಕೋಣೆಯನ್ನು ಇಂದು ದನದ ಮಾಂಸ ತಯಾರಿಸುವ ಕೋಣೆಯಾಗಿ ಮಾಡಲಾಗಿದೆ. ಕಟ್ಟಡದೊಳಗೆ ಪ್ರವೇಶಿಸುತ್ತಿ ದ್ದಂತೆ ಬಲಭಾಗದಲ್ಲಿರುವ ಕೋಣೆ ಮುಲ್ಲಾ ಮೌಲ್ವಿಗಳ ಶಯ ನಾಗೃಹವಾಗಿದೆ. ಅಗತ್ಯ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಕಟ್ಟಡಕ್ಕೆ ಬಣ್ಣ ಬಳಿಯಲಾಗುತ್ತದೆ. ಬಣ್ಣ ಬಳಿಯುವ ಮೊದಲು ಹಳೆಯ ಬಣ್ಣವನ್ನು ಕಿತ್ತು ತೆಗೆಯುವ ನೆಪದಲ್ಲಿ ಗೋಡೆಗಳನ್ನು ಉಜ್ಜಲಾ ಗುತ್ತದೆ. ಉಜ್ಜುತ್ತಾ ಉಜ್ಜುತ್ತಾ ಇತಿಹಾಸ ಸವೆದು ಹೋಗುತ್ತದೆ. ಕಟ್ಟಡದ ಎಡಭಾಗದಲ್ಲಿ ಸುಂದರವಾದ ಪುಷ್ಕರಿಣಿಯಿದೆ. ಅದಕ್ಕೆ ಇಳಿಯಲು ಮೆಟ್ಟಿಲುಗಳಿವೆ. ಒಂದು ಕಾಲದಲ್ಲಿ ವಿಜೃಂಭಣೆ ಯಿಂದ ತೆಪ್ಪೋತ್ಸವ ನಡೆಯುತ್ತಿದ್ದ ಪುಷ್ಕರಿಣಿ ಯನ್ನು ಶುದ್ಧ ಮಾಡದೆ ಎಷ್ಟೋ ವರ್ಷಗಳು ಕಳೆದು ಹೋಗಿವೆ. ಕಲ್ಲಿನ ಚೌಕಟ್ಟಿನಲ್ಲಿ ಕಟ್ಟಿದ ಒಂದು ಬಾವಿಯೂ ಇದೆ. ಒಂದು ದೇವಸ್ಥಾನದಲ್ಲಿ ಏನೇನಿರಬೇಕೋ ಅವೆಲ್ಲವೂ ಅಲ್ಲಿದೆ. ಒಂದು ದೇವಸ್ಥಾನ ಹೇಗಿರುತ್ತದೋ ಆ ಮದರಸ/ ಮಸೀದಿ ಹಾಗೆಯೇ ಇದೆ. ಮದರಸವೊಂದರಲ್ಲಿ ಏನೇನಿರುವುದಿಲ್ಲವೋ ಅವೆಲ್ಲವೂ ಅದರ ಪ್ರಾಂಗಣದಲ್ಲಿದೆ. ಆದರೂ ಅದು ದೇವಸ್ಥಾನವಲ್ಲ!
ಕೆಲವು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಕೇಂದ್ರ ಸರಕಾರದ ಮಹತ್ತಾಕಾಂಕ್ಷೆಯ ತುಷ್ಟೀಕರಣ ಯೋಜನೆ ಟಿಪ್ಪು ವಿಶ್ವವಿದ್ಯಾಲಯ ಪ್ರಾರಂಭಿಸಲಾಗುತ್ತದೆ ಎಂದಾಗ ಈ ಕಟ್ಟಡ ಚರ್ಚೆಗೆ ಗ್ರಾಸವಾಗಿತ್ತು. ಆ ಸಮಯದಲ್ಲಿ ನಾನು ವಿ.ವಿ ವಿರುದ್ಧದ ಆಂದೋಲನದಲ್ಲಿ ಈ ಕಟ್ಟಡವನ್ನು ಪ್ರಸ್ತಾಪಿಸಿದ್ದೆ. ಅಲ್ಲಿಗೆ ಭೇಟಿಯನ್ನೂ ಕೊಟ್ಟಿದ್ದೆ. ಆ ಭೇಟಿಯ ನಂತರ ಮದರಸದಲ್ಲಿ ಚಟುವಟಿಕೆಗಳು ತೀವ್ರಗೊಂಡವು ಎಂದು ನಂತರ ನನಗೆ ತಿಳಿಯಿತು. ದೇಶದ ನಾನಾ ಭಾಗಗಳಿಂದ ಈ ಮದರಸಕ್ಕೆ ಓದಲು ಮಕ್ಕಳು ಬರುತ್ತಾರೆ. ಉತ್ತರ ಪ್ರದೇಶ, ಬಿಹಾರ್ ಕಡೆಯವರೇ ಹೆಚ್ಚು ಎಂದು ಮದರಸದ ಸಹಾಯಕನೆ ನನ್ನಲ್ಲಿ ಹೇಳಿದ್ದ.
ನಾನು ಭೇಟಿ ನೀಡಿದ ಸಮಯದಲ್ಲಿ ಪ್ರಾಂಗಣದಲ್ಲಿದ್ದ ಬಾವಿ ಕಟ್ಟೆಯಲ್ಲಿ ಹಲವು ಭಿತ್ತಿ ಪತ್ರಗಳನ್ನು ಅಂಟಿಸಲಾಗಿತ್ತು. ಇವೇನು ಎಂದು ಕೇಳಿದಾಗ ಅವು ಉತ್ತರ ಪ್ರದೇಶದ ಬರ್ಹಾನ್‌ಪುರದಲ್ಲಿ ನಡೆಯುವ ಉರೂಸ್ ಹಬ್ಬದ್ದು ಎಂದು ಆತ ಹೇಳಿದ. ಎಲ್ಲಿಯ ಬರ್ಹಾನ್‌ಪುರ? ಎಲ್ಲಿಯ ಶ್ರೀರಂಗಪಟ್ಟಣ? ಶ್ರೀರಂಗಪಟ್ಟಣದಲ್ಲಿ ಆಗಾಗ್ಗೆ ಕೋಮು ಬೆಂಕಿ ಹೊತ್ತಿಕೊಳ್ಳುವ ಬರ್ಹಾನ್‌ಪುರದ ಭಿತ್ತಿ ಪತ್ರಗಳಿವೆ ಅಂದರೆ ಮದರಸಗಳಲ್ಲಿ ಏನು ಕಲಿಸಲಾಗುತ್ತದೆ? ಬರ್ಹಾನ್‌ಪುರದ ಮತಾಂಧರಿಗೂ ಇಲ್ಲಿಗೂ ಏನು ಸಂಬಂಧ? ಅಂಥವರನ್ನು ಬಗಲಲ್ಲಿ ಕಟ್ಟಿಕೊಂಡ ಸರಕಾರ ಏನನ್ನು ಸಾಧಿಸಲು ಹೊರಟಿದೆ? ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಎಂದು ತೊಡೆತಟ್ಟುವ ಮುಖ್ಯಮಂತ್ರಿಗೂ ಮೂಡಲ ಆಂಜನೆಯನನ್ನು ಕೆಡವಿ ಮಸೀದಿ ಮಾಡಿದ ಟಿಪ್ಪುವಿಗೂ ದಟ್ಟವಾದ ಹೋಲಿಕೆಗಳು ಕಾಣಿಸುತ್ತಿವೆ.
ಮೂಡಲ ಆಂಜನೇಯ ಸ್ವಾಮಿ ಮಾತ್ರವಲ್ಲ, ಭಾಗಮಂಡ ಲದ ಮುರಿದ ಎರಡು ಕಲ್ಲಿನ ಆನೆಗಳು, ಕೊಡಗಿನಲ್ಲಿ ಇನ್ನೂ ಜೀರ್ಣಾವಸ್ಥೆಯಲ್ಲಿರುವ ದೇವಸ್ಥಾನಗಳ ಐತಿಹ್ಯಗಳೆಲ್ಲವೂ ಟಿಪ್ಪುವಿನ ಇತಿಹಾಸವನ್ನು ಹೇಳುತ್ತಿವೆ. ಕೊಡಗಿನಲ್ಲಿ ಮತಾಂತರ ವಾದ ಕೊಡವ ಮಾಪಿಳ್ಳೆಗಳು ಇಂದಿಗೂ ತಮ್ಮ ಪೂರ್ವಜರು ಕೊಡವರು ಎಂದೇ ಹೇಳುತ್ತಾರೆ. ಕೊಡಗಿನ ನಾಪೋಕ್ಲು ಮತ್ತು ಮಲಾಬಾರ್ ಕೋಟೆಗಳಲ್ಲಿರುವ ಮದ್ದುಗುಂಡುಗಳು ಹೇಳು ವುದು ಎಂಥಾ ಇತಿಹಾಸ. ಯುದ್ಧಾಕಾಂಕ್ಷಿ ಅರಸನಿಗೆ ಅಸಹಿಷ್ಣುತೆ ಇದ್ದರೆ ಅತ ಜನಾನುರಾಗಿಯಾಗಿರಲು ಸಾಧ್ಯವಿಲ್ಲ. ಆದರೆ ಟಿಪ್ಪುವಿಗೆ ಮತೀಯ ಅಸಹಿಷ್ಣುತೆಯಿತ್ತು. ಆತ ಜನಾನುರಾಗಿ ಹೇಗಾಗಬಲ್ಲ? ಜನಾನುರಾಗಿ ಅರಸನ ಅನುಯಾಯಿಗಳೂ ಇಂದು ಅಸಹಿಷ್ಣುತೆಯನ್ನು ಹೊತ್ತುಕೊಂಡು ಆತನ ಅಚರಣೆಗೆ ಮುಂದಾಗಿದ್ದಾರೆ. ಹಿಂಸಾಚಾರದ ಮೂಲಕವಾದರೂ ಜನ್ಮ ದಿನಾಚರಣೆ ನಡೆಯಬೇಕು ಎನ್ನುವ ಮನೋಭಾವ ಒಬ್ಬ ಸಜ್ಜನ ಅರಸನ ಬಗ್ಗೆ ಮೂಡಲು ಎಂದಾದರೂ ಸಾಧ್ಯವೇ?
ಟಿಪ್ಪು ಜಯಂತಿ ವಿರೋಧಿಸಿದ ತಕ್ಷಣ ಕಾಂಗ್ರೆಸಿಗರು ಧುತ್ತನೆ ಎದ್ದು ನಮ್ಮನ್ನು ಕೋಮುವಾದಿಗಳು ಎಂದು ಜರಿಯುತ್ತಾರೆ, ಒಬ್ಬ ಮತಾಂಧನನ್ನು, ಕ್ರೂರಿಯನ್ನು, ಕನ್ನಡ ವಿರೋಧಿಯನ್ನು, ಅತ್ಯಾಚಾರಿಯನ್ನು ಸಮರ್ಥನೆ ಮಾಡಿ ಆತನ ಹಬ್ಬ ಮಾಡುವ ಪ್ರಸಂಗ ಬಂದಾಗ ಅದನ್ನು ಸಮರ್ಥಿಸಿ ಸೆಕ್ಯುಲರ್ ಎಂದು ಹಣೆಪಟ್ಟಿ ಕಟ್ಟಿಕೊಳ್ಳುವುದಕ್ಕಿಂತ ಇತಿಹಾಸದ ಸತ್ಯವನ್ನು ಮುಂದಿಟ್ಟು ಇಂತಹ ಐತಿಹಾಸಿಕ ಕಪ್ಪು ಚುಕ್ಕೆಗಳನ್ನು ವಿರೋಧಿಸಿ ಕೋಮುವಾದಿ ಎಂದು ಕರೆಸಿಕೊಳ್ಳುವುದರಲ್ಲಿ ಒಂದು ರೀತಿ ಹೆಮ್ಮೆ ಇದೆ. ಕೇವಲ ಓಟ್ ಬ್ಯಾಂಕಿಗೋಸ್ಕರ ರಾಜ್ಯವನ್ನು ಮೂರೂ ವರ್ಷಗಳಿಂದ ಕೋಮುದಳ್ಳುರಿಯಲ್ಲಿ ಬೇಯಿಸುತ್ತಿರುವ ಸಿದ್ದರಾಮಯ್ಯನವರೆ ನೀವು ಟಿಪ್ಪು ಜಯಂತಿ ಮಾಡಿದ್ದರ ಪರಿಣಾಮ ನಾವು ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ, ನಾಡಿನಲ್ಲಿ ಐಸಿಸ್ ಸ್ಲಿಪರ್ ಸೆಲ್‌ಗಳು ನಿಧಾನವಾಗಿ ತಲೆ ಎತ್ತುತ್ತಿವೆ. ರಾಷ್ಟ್ರದ ಹಿತದೃಷ್ಟಿಯಿಂದ, ನಾಡಿನ ಆಂತರಿಕ ಭದ್ರತೆ ದೃಷ್ಟಿಯಿಂದ ಇನ್ನಾದರೂ ಓಲೈಕೆ ರಾಜಕಾರಣ ನಿಲ್ಲಿಸಿ ಆತ್ಮ ವಿಮರ್ಶೆ ಮಾಡಿಕೊಳ್ಳಿ. ನಾವೇನು ಮುಸಲ್ಮಾನರ ವಿರೋಧಿಗಳಲ್ಲ ಸಾಧ್ಯವಾದರೆ ಸರ್ಕಾರವೇ ಮುಂದೆ ನಿಂತು ಸಂತ ಶಿಶುನಾಳ ಶರೀಫಜ್ಜನ ಜಯಂತಿ ಮಾಡಲಿ, ಇಡಿ ಕನ್ನಡ ಕುಲವೆ ಹೆಮ್ಮೆಯಿಂದ ಹಬ್ಬ ಆಚರಣೆ ಮಾಡುತ್ತದೆ. ಡಾ.ಅಬ್ದುಲ… ಕಲಾಂ ಅವರ ಜನ್ಮ ಜಯಂತಿ ಮಾಡಲಿ ಬೇಕಾದರೆ ಮನೆ ಮನೆಗೆ ಕಲಾಂ ರ ಬದುಕಿನ ಪ್ರೇರಣೆಯ ಕತೆಯನ್ನು ತಲುಪಿಸುವ ಕೆಲಸ ನಾವು ಮಾಡುತ್ತೇವೆ. ಎಲ್ಲರೂ ಸಂಭ್ರಮಿಸುವವರ ಜಯಂತಿ ಮಾಡುವುದನ್ನು ಬಿಟ್ಟು ಕನ್ನಡ ವಿರೋಧಿ, ಮತಾಂಧನ ಜಯಂತಿ ಮಾಡುವುದು ಸರಿಯೇ?
ಸಿ.ಟಿ. ರವಿ, ಶಾಸಕರು, ಚಿಕ್ಕಮಗಳೂರು ಹಾಗೂ ರಾಜ್ಯ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ