Advertisement

ಈ ಬಾರಿ ಡಿಗ್ರಿ ಕೋರ್ಸ್ ಪ್ರವೇಶ ಆಫ್ ಲೈನಾ ಅಥವಾ ಆನ್‌ ಲೈನಾ? ಗೊಂದಲದಲ್ಲಿ ವಿದ್ಯಾರ್ಥಿಗಳು

10:19 PM May 29, 2024 | Team Udayavani |

ಗಂಗಾವತಿ: ಪದವಿ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ರಾಜ್ಯ ವ್ಯಾಪಿ ಸರಕಾರಿ ಮಹಾವಿದ್ಯಾಲಯಗಳಲ್ಲಿ ಗೊಂದಲವುಂಟಾಗಿದ್ದು ಪಿಯುಸಿ ದ್ವಿತಿಯ ಫಲಿತಾಂಶ ಪ್ರಕಟಗೊಂಡು ಒಂದುವರೆ ತಿಂಗಳು ಕಳೆದರೂ ಸರಕಾರ ಈ ಭಾರಿ ಆನ್‌ಲೈನ್ ಅಥವಾ ಆಫ್ ಲೈನ್ ಪ್ರವೇಶ ನೀಡುವ ಕುರಿತು ಮಹಾವಿದ್ಯಾಲಯಗಳಿಗೆ ಯಾವುದೇ ಸುತ್ತೋಲೆ ರವಾನಿಸಿಲ್ಲ ಎನ್ನಲಾಗುತ್ತಿದೆ. ಆದರೂ ಖಾಸಗಿ ಸಂಸ್ಥೆಗಳ ಪದವಿ ಕಾಲೇಜುಗಳಲ್ಲಿ ಆಫ್‌ಲೈನ್ ನಲ್ಲಿ ಪ್ರವೇಶ ನೀಡಿ ವಿದ್ಯಾರ್ಥಿಗಳಿಂದ ಪೀಜು ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಲಾಗುತ್ತಿದೆ. ನೂತನವಾಗಿ ಆರಂಭವಾಗಿರುವ ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಆಫ್‌ಲೈನ್ ನಲ್ಲಿ ಪ್ರವೇಶ ನೀಡಲು ವಿದ್ಯಾರ್ಥಿಗಳಿಂದ ಅಗತ್ಯ ದಾಖಲೆಗಳನ್ನು ಪಡೆಯುವಂತೆ ಕುಲಪತಿಗಳು ಮೌಖಿಕ ಆದೇಶ ನೀಡಿದ್ದಾರೆನ್ನಲಾಗುತ್ತಿದೆ.

Advertisement

ವಿದ್ಯಾರ್ಥಿಗಳ ಭವಿಷ್ಯ ಜೀವನ ನಿರ್ಧರಿಸುವ ಪದವಿ ಕೋಸ್ ಗಳ ಪ್ರವೇಶಕ್ಕೆ ಕಳೆದೆರಡು ವರ್ಷಗಳಿಂದ ಯುಯುಸಿಎಂಎಸ್ ವೆಬ್‌ಸೈಟ್ ನಲ್ಲಿ ರಾಜ್ಯದ ಇಷ್ಟಪಡುವ ಮತ್ತು ತಮಗೆ ಬೇಕಾಗುವ ಕೋರ್ಸ್ಗಳಿಗೆ ದಾಖಲಾತಿಗಳೊಂದಿಗೆ ಆನ್‌ಲೈನ್ ಮೂಲಕ ಪ್ರವೇಶ ನೀಡಲಾಗುತ್ತಿತ್ತು. ಇದೀಗ 2024-25 ನೇ ಸಾಲಿನ ಶೈಕ್ಷಣ ಕ ವರ್ಷ ಆರಂಭವಾಗುವ ಸಮಯ ಹತ್ತಿರ ಬಂದರೂ ಪದವಿ ಕೋಸ್‌ಗಳಿಗೆ ಪ್ರವೇಶ ನೀಡುವ ಕುರಿತು ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಇದುವರೆಗೂ ಯಾವುದೇ ಆದೇಶ ಮಾಡಿಲ್ಲ. ಆದರೂ ಖಾಸಗಿ ಕಾಲೇಜುಗಳ ಮಾತ್ರ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳಿಂದ ಆಫ್‌ಲೈನ್ ನಲ್ಲಿ ಅಗತ್ಯ ದಾಖಲೆ ಮತ್ತು ಕಳೆದ ವರ್ಷ ಇದ್ದ ಶುಲ್ಕವನ್ನು ಪಡೆಯುತ್ತಿರುವ ಮಾಹಿತಿ ಇದೆ. ಪ್ರವೇಶ ಕುರಿತು ಆಯಾ ಕಾಲೇಜಿನ ಪ್ರಾಚಾರ್ಯರು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿದರೂ ಸ್ಪಷ್ಟ ಆದೇಶ ಕೊಡುತ್ತಿಲ್ಲ. ವೃತ್ತಿಪರ ಕೋರ್ಸ್ಗಳ ಮಾಹಿತಿ ಪಡೆಯಲು ಇರುವ ಟೋಲ್ ಫ್ರೀ ಸಂಪರ್ಕವೂ ರಾಜ್ಯದ ವಿದ್ಯಾರ್ಥಿಗಳಿಲ್ಲ.

ಖಾಸಗಿ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲಿ ಆರೋಪ: ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡು ಒಂದುವರೆ ತಿಂಗಳು ಗತಿಸಿದರೂ ಪದವಿ ಕೋರ್ಸ್ ಪ್ರವೇಶದ ಕುರಿತು ಸರಕಾರಿ ಮಹಾವಿದ್ಯಾಲಯಗಳಲ್ಲಿ ಗೊಂದಲವಿದ್ದು ಖಾಸಗಿ ಕಾಲೇಜುಗಳಲ್ಲಿ ಮಾತ್ರ ಸಿಕ್ಕಪಟ್ಟೆ ಅಧಿಕ ಅಂದಾಜು ಶುಲ್ಕದೊಂದಿಗೆ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಕೆಲ ಸರಕಾರಿ ಮಹಾವಿದ್ಯಾಲಯಗಳಲ್ಲಿಯೂ ಪ್ರವೇಶ ಅರ್ಜಿ ಪಡೆಯಲು ಅನಧಿಕೃತವಾಗಿ ಹಣ ವಸೂಲಿ ಮಾತುಗಳು ಕೇಳಿ ಬರುತ್ತಿವೆ. ಬಡವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಕಾರಿ ಮಹಾವಿದ್ಯಾಲಯಗಳಲ್ಲಿ ಓದುವ ಇಷ್ಟದೊಂದಿಗೆ ಪ್ರವೇಶ ಪಡೆಯಲು ಆಗಮಿಸಿದರೆ ಕಾಲೇಜಿನಲ್ಲಿ ಮಾತ್ರ ಪ್ರವೇಶದ ಕುರಿತು ಸ್ಪಷ್ಟತೆ ನೀಡುತ್ತಿಲ್ಲ.

ಪಿಯುಸಿ ಫಲಿತಾಂಶ ಪ್ರಕಟವಾಗಿ ಒಂದುವರೆ ತಿಂಗಳು ಕಳೆದರೂ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಸರಕಾರಿ ಮಹಾವಿದ್ಯಾಲಯಗಳಲ್ಲಿ ಗೊಂದಲವಿದೆ. ಆನ್‌ಲೈನ್ ಅಥವಾ ಆಫ್‌ಲೈನ್ ಪ್ರವೇಶ ಕೊಡುವ ಕುರಿತು ಗೊಂದಲವಿದ್ದು ವಿದ್ಯಾರ್ಥಿಗಳ ಶೈಕ್ಷಣ ಕ ವರ್ಷಕ್ಕೆ ತೊಂದರೆಯಾಗಿದೆ. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಪದವಿಕೋರ್ಸ್ ಪ್ರವೇಶದ ನಂತರ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಹಾಕಿಕೊಳ್ಳಲು ಇದರಿಂದ ತೊಂದರೆಯಾಗಿದೆ. ಕೆಲವು ಕಾಲೇಜುಗಳಲ್ಲಿ ಹಣ ಪಡೆದು ಪ್ರವೇಶ ಅರ್ಜಿಗಳನ್ನು ಮಾತ್ರ ನೀಡುತ್ತಿದ್ದು ,ಪ್ರವೇಶ ನೀಡಿದ್ದರ ಕುರಿತು ನಂತರ ತಿಳಿಸಲಾಗುತ್ತೆದೆ ಎಂದು ಹೇಳುತ್ತಿದ್ದಾರೆ. ಸರಕಾರ ಕೂಡಲೇ ಮಧ್ಯೆ ಪ್ರವೇಶ ಮಾಡಿ ಪದವಿಕೋರ್ಸ್ ಪ್ರವೇಶದ ಗೊಂದಲ ತೆರೆ ಹಾಕಬೇಕು.
-ನಾಗರಾಜ ಪದವಿ ಪ್ರವೇಶ ಅರ್ಜಿ ಪಡೆದ ವಿದ್ಯಾರ್ಥಿ. ಗಂಗಾವತಿ

ಆನ್‌ಲೈನ್ ಆಫ್‌ಲೈನ್ ಪ್ರವೇಶ ಕುರಿತು ಇನ್ನೂ ಇಲಾಖೆ ಸ್ಪಷ್ಟತೆ ನೀಡಿಲ್ಲ .ಆದರೂ ಪ್ರವೇಶ ಅರ್ಜಿ ವಿತರಣೆ ಮಾಡಲಾಗುತ್ತಿದ್ದು ವಿದ್ಯಾರ್ಥಿಗಳು ಪದವಿ ವಿವಿಧ ಕೋರ್ಸ್ಗಳಿಗೆ ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸರಕಾರದ ಸುತ್ತೋಲೆ ನಂತರ ಶುಲ್ಕದ ರಸೀದಿ ಪಡೆದು ಪ್ರವೇಶ ಅಂತಿಮಗೊಳಿಸಲಾಗುತ್ತಿದೆ. ಕಾಲೇಜುಗಳು ಆಫಿಲೇಶನ್ ಪಡೆಯಲು ಮೇ.೩೦ ಕೊನೆಯ ದಿನವಿದೆ. ಶೀಘ್ರ ಪ್ರವೇಶ ಕುರಿತು ಇಲಾಖೆ ನಿರ್ದೇಶನ ಬರುವ ನಿರೀಕ್ಷೆ ಇದೆ.
-ಡಾ ಜಾಜಿ ದೇವೆಂದ್ರಪ್ಪ ಪ್ರಭಾರಿ ಪ್ರಾಚಾರ್ಯ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯ ಗಂಗಾವತಿ

Advertisement

– ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next