Advertisement

ಪೈಲಟ್‌ ರಾವಣ: ನಡೆಯಲಿದೆ ರಿಸರ್ಚ್‌

10:53 PM Nov 15, 2021 | Team Udayavani |

ಕೊಲಂಬೊ: ರಾವಣನೇ ಜಗತ್ತಿನ ಮೊದಲ ಪೈಲಟ್‌ ಎಂದು ದ್ವೀಪ ರಾಷ್ಟ್ರ ಶ್ರೀಲಂಕಾದ ಸರ್ಕಾರ ಕಳೆದ ವರ್ಷವೇ ಹೇಳಿಕೊಂಡಿತ್ತು. ಅದನ್ನು ಪುಷ್ಟೀಕರಿಸಲು ಸಂಶೋಧನೆ ನಡೆಸಲು ತಂಡವನ್ನೂ ರಚಿಸಿತ್ತು. ಸದ್ಯದ ಬೆಳವಣಿಗೆ ಏನೆಂದರೆ, ಶೀಘ್ರದಲ್ಲಿಯೇ ಅದು ತನ್ನ ಕೆಲಸ ಮುಂದುವರಿಸಲಿದೆ.

Advertisement

ರಾವಣನೇ ಜಗತ್ತಿನ ಮೊದಲ ಪೈಲಟ್‌. ಆತನ ಕಾಲದಲ್ಲಿ ಲಂಕೆಯಲ್ಲಿ ವಿಮಾನ ನಿಲ್ದಾಣಗಳಿದ್ದವು ಎಂದು ಲಂಕಾ ನಾಗರಿಕರು ನಂಬಿದ್ದಾರೆ. ಈ ಚರಿತ್ರೆ ಖಚಿತಪಡಿಸಿಕೊಳ್ಳಲು, ಇತಿಹಾಸ ಕಾಲದಲ್ಲಿ ಹೊಂದಿದ್ದ ತಾಂತ್ರಿಕ ಶಕ್ತಿಯನ್ನು ಅರಿಯಲು ಪ್ರಯತ್ನ ಮುಂದುವರಿಸಲಿದ್ದಾರೆ. ಈ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೂ ಆಹ್ವಾನ ನೀಡಲಾಗಿದೆ.

ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ಧನತುಂಗೆ ಲಂಕಾದಾದ್ಯಂತ ಸಾಕ್ಷ್ಯಗಳಿಗಾಗಿ ಹುಡುಕಾಡಿದ್ದಾರೆ! ಅವರಿಗೆ ರಾವಣ ಹಾಗೂ ವಿಮಾನ ಕಾಲ್ಪನಿಕ ಸಂಗತಿಗಳಲ್ಲ ಎಂದು ಖಚಿತವೂ ಆಗಿದೆಯಂತೆ. ಅವರು ಹೇಳುವ ಪ್ರಕಾರ, ಆಗಿನ ಕಾಲದ ವಿಮಾನಗಳು, ನಿಲ್ದಾಣಗಳು ಈಗಿನ ಕಾಲದಂತೆ ಇರದಿರಬಹುದು. ಆದರೆ ಶ್ರೀಲಂಕಾ ಮತ್ತು ಭಾರತೀಯರ ಬಳಿ ಆ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನವಂತೂ ಇತ್ತು ಎನ್ನುತ್ತಾರೆ.

ಇದನ್ನೂ ಓದಿ:ಕಿರಿಯರ ವಿಶ್ವಕಪ್‌ ಹಾಕಿ: ಭಾರತಕ್ಕೆ ಲಾಲ್ರೆಮ್ಸಿಯಾಮಿ ನಾಯಕಿ

ಪುಷ್ಪಕ ವಿಮಾನದ ಮಾಲಿಕ ಬ್ರಹ್ಮ!
ಶ್ರೀಲಂಕನ್ನರು ಮೊದಲು ವಿಮಾನ ಓಡಿಸಿದ್ದು ರಾವಣ ಎಂದಿದ್ದರೂ ಭಾರತೀಯ ಪುರಾಣಗಳು ಅದನ್ನು ಸಮರ್ಥಿಸುವುದಿಲ್ಲ. ಪುಷ್ಪಕ ವಿಮಾನ ಮೊದಲು ಇದ್ದಿದ್ದು ಬ್ರಹ್ಮನ ಬಳಿ. ಅನಂತರ ಅದು ವಂಶಪರಂಪರೆಯಾಗಿ ಕುಬೇರನಿಗೆ ಹೋಯಿತು. ಈತ ಇದ್ದಿದ್ದು ಮೊದಲು ಲಂಕೆಯಲ್ಲೇ. ತನ್ನ ಮಲತಾಯಿಯ ಮಗನಾದ ಕುಬೇರನಿಂದ ರಾವಣ ಆ ವಿಮಾನವನ್ನು ಬಲಾತ್ಕಾರವಾಗಿ ಕಿತ್ತುಕೊಂಡ. ರಾವಣ ಮೂಲತಃ ಉತ್ತರ ಭಾರತೀಯ. ರಾವಣನ ನಿಧನದ ನಂತರ ವಿಮಾನ ವಿಭೀಷಣನ ಪಾಲಾಯಿತು ಎನ್ನುತ್ತದೆ ವಾಲ್ಮೀಕಿ ರಾಮಾಯಣ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next