Advertisement
ಶೈಕ್ಷಣಿಕ ಸಾಲ ಮಾಡಿ, ಬಿ.ಇ. ಸೇರಿಕೊಂಡೆ. ಈಗ ಕೊನೆಯ ಸೆಮಿಸ್ಟರ್ ಜುಲೈಗೆ ಮುಗಿಯಲಿದೆ. ಕೈ ತುಂಬಾ ಸಂಬಳ ಕಂಡು, ನನ್ನ ಕಾಲಿನ ಮೇಲೆ ನಾನು ನಿಲ್ಲೋಣ ಎನ್ನುವ ದಿನಗಳಲ್ಲೇ ಈ ಕೊರೊನಾ ಸಿಡಿಲು ಬಡಿದಿದೆ. ಕಂಪನಿಗಳಲ್ಲಿ ಅನೇಕರು ಉದ್ಯೋಗ ಕಳಕೊಳ್ಳುತ್ತಿದ್ದಾರೆ. ಅಮೆರಿಕದ ಆಸರೆಯಲ್ಲಿದ್ದ ಕಂಪನಿಗಳೂ ತೀವ್ರ ಸಂಕಷ್ಟದಲ್ಲಿವೆ. ಇನ್ನು ನಮ್ಮ ಭವಿಷ್ಯದ ಕಥೆ ಏನು?
● ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ತಜ್ಞ ಜ್ಯೋತಿ ನಾರಾಯಣ್, ಮೈಸೂರು
ನನಗೆ 1 ವರ್ಷದ ಪುಟ್ಟ ಮಗಳು ಇದ್ದಾಳೆ. ಸಣ್ಣ ಮಕ್ಕಳಿಗೆ ವೈರಸ್ ಬೇಗ ತಗುಲುತ್ತದೆಂಬ ಕೆಲವು ಸುದ್ದಿ ಕೇಳಿ ಆತಂಕಗೊಂಡೆ. ಇದು ನಿಜವೇ?
Related Articles
Advertisement
ಮೊದಲನೆಯದಾಗಿ, ನೀವು ಗಾಬರಿಗೊಳ್ಳುವ ಅಗತ್ಯವಿಲ್ಲ. ಮಕ್ಕಳಿಗೆ ರೋನಿರೋಧಕ ಶಕ್ತಿ ಗರ್ಭಿಣಿಯರಲ್ಲಿ ಕೊನೆಯ ತ್ತೈಮಾಸಿಕದಲ್ಲಿ ಮಾಸದ ಮೂಲಕ ಈ ರೋಗನಿರೋಧಕ ಶಕ್ತಿ ಬರುತ್ತೆ. ಇದಕ್ಕೆ “ಪ್ಯಾಸಿವ್ ಆ್ಯಂಟಿಬಾಡಿ’ ಎಂದು ಹೇಳುತ್ತೇವೆ. ಇದಾದ ನಂತರ ಹೆರಿಗೆಯಾಗಿ ಒಂದು ಗಂಟೆಯೊಳಗೆ, ತಾಯಿ ಎದೆಹಾಲು ಕುಡಿಸಿದಾಗ, ಮತ್ತಷ್ಟು “ಪ್ಯಾಸಿವ್ ಆ್ಯಂಟಿಬಾಡಿ’ ಮಗುವಿಗೆ ಹೋಗುತ್ತೆ. ಇದು ಮಗುವಿಗೆ ಸಹಜವಾಗಿ ಸೃಷ್ಟಿಯಲ್ಲಿರುವ ವರದಾನ. ಇನ್ನು ಮಗು ಹುಟ್ಟಿದ ತಕ್ಷಣ, ಒಂದೂವರೆ ತಿಂಗಳು, ಎರಡೂವರೆ ತಿಂಗಳು… ಹೀಗೆ ಕೆಲವು ಅವಧಿಗಳಲ್ಲಿ ಲಸಿಕೆಗಳನ್ನು ಕೊಡಿಸುವುದರಿಂದ, ಮಗುವಿನಲ್ಲಿನ ರೋಗನಿರೋಧಕ ಶಕ್ತಿ ಇನ್ನಷ್ಟು ಉತ್ಪತ್ತಿಯಾಗುತ್ತದೆ. ಇದನ್ನು “ಆ್ಯಕ್ಟಿವ್ ಆ್ಯಂಟಿಬಾಡಿ’ ಎಂದು ಕರೆಯುತ್ತೇವೆ. ಒಂದು ವರ್ಷದ ಮಕ್ಕಳಿಗೆ ಕಾಯಿಲೆಗಳು ತಗುಲುವ ಸಾಧ್ಯತೆ ಇರುತ್ತೆ. ಈ ಚಿಕ್ಕಮಕ್ಕಳು ಮನೆಯಿಂದ ಆಚೆ ಹೋಗದೆ, ತಾಯಿಯ ಜೊತೆಗೇ ಇದ್ದರೆ, ಸುರಕ್ಷಿತ. ಮಗು ಹುಟ್ಟಿದ 1 ಗಂಟೆಯೊಳಗಾಗಿ, 6 ತಿಂಗಳವರೆಗೆ ಮಗುವಿಗೆ ಬರೀ ತಾಯಿಯ ಎದೆಹಾಲು ಕೊಡಬೇಕು. 6 ತಿಂಗಳ ನಂತರ 2 ವರ್ಷದ ವರೆಗೆ ಮನೆಯಲ್ಲಿಯೇ ತಯಾರಿಸಿದ ಪೂರಕ ಆಹಾರದ ಜೊತೆಗೆ, ತಾಯಿಯ ಎದೆಹಾಲು ಕೊಡಬೇಕು. ಇದರಿಂದ ಆಹಾರದಲ್ಲಿನ ಸಸಾರಜನಕ ಮಗುವಿನಲ್ಲಿ ರೋಗನಿರೋಧ ಶಕ್ತಿ ಹೆಚ್ಚುವಂತೆ ಮಾಡುತ್ತೆ. 5 ವರ್ಷದೊಳಗಿನ ಮಕ್ಕಳಿಗೆ ಸಹಜವಾಗಿ ವರ್ಷದಲ್ಲಿ 7-8 ಸಲ ವೈರಾಣು ಸೋಂಕುಗಳ ಕಾಯಿಲೆಗಳು ಬರುತ್ತವೆ. ಇದಕ್ಕೆ ಹೆದರಬೇಕಾಗಿಲ್ಲ. ಇದು ಕೂಡ ಪ್ರಕೃತಿ ನಿಯಮ. ಹೀಗೆ ವೈರಾಣುಗಳು ತಗುಲಿದಾಗ, ಮಗುವಿನೊಳಗಿನ ರೋಗನಿರೋಧಕ ಘಟಕಗಳಿಗೆ ಟ್ರೈನಿಂಗ್ ಸಿಕ್ಕಂತಾಗುತ್ತೆ. ಅವು ಹೋರಾಡುವುದನ್ನು ಕಲಿಯುತ್ತವೆ. ಪ್ರತಿ ಸಲ ಇನ್ಫ್ ಕ್ಷನ್ ಆದಾಗ, ರೋಗನಿರೋಧಕ ಶಕ್ತಿ ಉತ್ಪಾದಿಸುವ ಗ್ರಂಥಿಗಳು ಪ್ರಬಲವೇ ಆಗುತ್ತವೆ. ಇದರಿಂದ ಮಗುವಿಗೆತೊಂದರೆಯಿಲ್ಲ. ಕೊರೊನಾ ವೈರಸ್ ಇರುವ ಈ ಸನ್ನಿವೇಶದಲ್ಲಿ ಶಿಶುಗಳನ್ನು ಆದಷ್ಟು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು. ಎದೆಹಾಲು ಕುಡಿಸುತ್ತಿರಬೇಕು.
ಮನೆಯಲ್ಲಿ ಯಾರಿಗೇ ಕೆಮ್ಮು- ಜ್ವರ ಬಂದರೆ, ಆ ವ್ಯಕ್ತಿ ಜೊತೆ ಮಗು ಸಂಪರ್ಕ ಇಟ್ಟುಕೊಳ್ಳಬಾರದು. ಕೋವಿಡ್ – 19 ಬಾರದಂತೆ ತಡೆಯಲು ಮುಂಚಿತ ಲಸಿಕೆ ಇಲ್ಲ. ಸ್ವಚ್ಛತೆ ಕಾಪಾಡಿಕೊಳ್ಳುವುದೇ ಇಲ್ಲಿ ಮುಖ್ಯ.
● ಡಾ. ಆಶಾ ಬೆನಕಪ್ಪ, ಮಕ್ಕಳ ತಜ್ಞೆ ಶಿವ, ಚಿತ್ರದುರ್ಗ
ಬಡವರಿಗೆ, ಸಂಕಷ್ಟದಲ್ಲಿರುವವರಿಗೆ ಉಚಿತ ಹಾಲು ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಸರ್ಕಾರ ಯೋಜಿಸಿದ ರೀತಿಯಲ್ಲಿ ಅದು ಸಮರ್ಪಕವಾಗಿ
ತಲುಪುತ್ತಿಲ್ಲ. ಅನೇಕ ಕಡೆಗಳಲ್ಲಿ ಸ್ವಂತ ಮನೆ ಇರುವವರು, ಧನಿಕರಿಗೆ ಈ ಹಾಲು ಹೋಗುತ್ತಿದೆ. ಬಡವರಿಗೆ ಸಿಗುತ್ತಿಲ್ಲ. ಇದನ್ನು ಯಾರಿಗೆ ಹೇಳುವುದು? ಬಡವರು, ಕಾರ್ಮಿಕರು, ನಿರಾಶ್ರಿತರನ್ನು ಗುರುತಿಸಿ ಪ್ರತಿದಿನ ಹಾಲು ವಿತರಣೆ ಮಾಡಲಾಗುತ್ತಿದೆ. ಗುಂಪು ಸೇರ ಬಾರದು ಎಂಬ ಕಾರಣಕ್ಕೆ ಮನೆ ಮನೆಗೆ ತೆರಳಿ ಹಾಲು ಕೊಡ ಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಸಮಾಜ ಕಲ್ಯಾಣ, ಕಾರ್ಮಿಕ, ಶಿಕ್ಷಣ ಹಾಗೂ ಎಪಿಎಂಸಿ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಎಲ್ಲರೂ ಸೇರಿ ವ್ಯವಸ್ಥಿತವಾಗಿ ವಿತರಣೆ ಮಾಡುತ್ತಿದ್ದಾರೆ. ಹಾಲು
ತಲುಪದ ಬಡವರು ಸಮಿತಿ ಯವರನ್ನು ಸಂಪರ್ಕಿಸಿದರೆ ಖಂಡಿತವಾಗಿ ಕೊಡಲಾಗುತ್ತದೆ.
● ಡಾ. ಕೃಷ್ಣಪ್ಪ, ಉಪನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಚಿತ್ರದುರ್ಗ ಮಣಿಕಂಠ ಹಿರೇಮಠ, ಚವಡಾಪೂರ, ಬಾಗಲಕೋಟೆ
ನಮ್ಮ ಉತ್ತರ ಕರ್ನಾಟಕ ಭಾಗದ ಜನರು ಕಲ್ಲಗಂಡಿ, ತರಕಾರಿಗಳನ್ನು ಅಪಾರವಾಗಿ ಬೆಳೆದಿದ್ದಾರೆ. ಈಗ ಅವೆಲ್ಲ ವ್ಯಾಪಾರವಿಲ್ಲದೆ ಕೊಳೆತು ಹೋಗುತ್ತಿವೆ.
ನಾವು ಜೀವನ ನಡೆಸುವುದು ಹೇಗೆ? “ಉದಯವಾಣಿ’ಯು ರೈತರಿಗೆ ನೆರವಾಗಲೆಂದೇ, “ರೈತ ಸೇತು’ ಆರಂಭಿಸಿದೆ. ಪತ್ರಿಕೆಯ ಪ್ರತಿ ಜಿಲ್ಲಾಪುಟಗಳಲ್ಲಿ ಇದು ಮೂಡಿಬರುತ್ತದೆ. ಬಾಗಲಕೋಟೆ ಜಿಲ್ಲೆಯ ರೈತಸೇತು ವಾಟ್ಸಾಪ್ ಸಂಖ್ಯೆ- 9611883932. ಇಲ್ಲಿಗೆ ನಿಮ್ಮ ಬೆಳೆ ವಿವರ ದಾಖಲಿಸಿ, ಗ್ರಾಹಕರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಲಾಕ್ ಡೌನ್ ಅವಧಿಯಲ್ಲಿ ಏನೇ ಸಮಸ್ಯೆ, ಸಂದೇಹಗಳಿದ್ದರೆ ಉದಯವಾಣಿ ಮೂಲಕ ತಜ್ಞರಿಂದ ಉತ್ತರ ಪಡೆಯಲು ನಮಗೆ ವಾಟ್ಸ್‌ಆ್ಯಪ್ ಮಾಡಿ. ಕಳುಹಿಸಬೇಕಾದ ವಾಟ್ಸ್ ಆ್ಯಪ್ ಸಂಖ್ಯೆ 8861196369