Advertisement

ಈ ವರ್ಷ ಬೇಸಗೆ ರಜೆ ಇಲ್ಲ ?

11:59 PM Dec 14, 2020 | mahesh |

ಬೆಂಗಳೂರು: ಶಾಲಾರಂಭ ಸಂಬಂಧ ಸದ್ಯದಲ್ಲೇ ಸರಕಾರದ ತೀರ್ಮಾನ ಹೊರಬೀಳುವ ಸಾಧ್ಯತೆ ಇದ್ದು, ಇದರ ನಡುವೆ ಪ್ರಸಕ್ತ ಶೈಕ್ಷಣಿಕ ವರ್ಷ ಬೇಸಗೆ ರಜೆ ಕಡಿತಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

Advertisement

ಈ ಶೈಕ್ಷಣಿಕ ವರ್ಷ ಅಧಿಕೃತವಾಗಿ ಜನವರಿಯಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಜನವರಿಯಿಂದ ಜುಲೈ ಅವಧಿಯಲ್ಲಿ ಬಹುತೇಕ ಪಠ್ಯಗಳನ್ನು ಪೂರ್ಣಗೊಳಿಸಬೇಕಿದ್ದು, ಬೇಸಗೆ ರಜೆ ನೀಡದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸರಕಾರ ಈ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೊನಾದಿಂದ ಈ ವರ್ಷ ತರಗತಿಗಳು ನಡೆದಿಲ್ಲ. ವಿದ್ಯಾಗಮ ಸ್ಥಗಿತಗೊಂಡಿದೆ. ಪರಿಷ್ಕೃತ ರೂಪದಲ್ಲಿ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ, ಆದರೆ ನಿರ್ಧಾರ ಹೊರಬಿದ್ದಿಲ್ಲ. ಸರಕಾರಿ ಶಾಲಾ ಮಕ್ಕಳಿಗೆ ಸೀಮಿತ ಅವಧಿಯಲ್ಲಿ ಪಠ್ಯ ಪೂರ್ಣಗೊಳಿಸ ಬೇಕಿರುವುದರಿಂದ ಬೇಸಗೆ ರಜೆ ಕಡಿತ ಅನಿವಾರ್ಯ ಎಂದು ಅವರು ವಿವರ ನೀಡಿದ್ದಾರೆ.

ಕೆಲವು ದಿನವಾದರೂ ಬೇಸಗೆ ರಜೆ ಇರಲಿ
ಈ ವರ್ಷ ಪರಿಸ್ಥಿತಿ ಭಿನ್ನವಾಗಿರುವುದರಿಂದ ಹೊಂದಾಣಿಕೆ ಮಾಡಿಕೊಂಡು ತರಗತಿ ನಡೆಸಬೇಕಾಗುತ್ತದೆ. ಆದರೆ ವಿದ್ಯಾರ್ಥಿ ಗಳ ವಯೋಮಾನಕ್ಕೆ ತಕ್ಕಂತೆ ಬೋಧನೆ ಮಾಡಬೇಕಾಗುತ್ತದೆ. ಮಕ್ಕಳ ಬೌದ್ಧಿಕ, ಮಾನಸಿಕ ಸಾಮರ್ಥ್ಯ ವನ್ನು ಗಮನಿಸಬೇಕಾ ಗುತ್ತದೆ. ಈ ನಿಟ್ಟಿನಲ್ಲಿ ಬೇಸಗೆ ರಜೆ ಸಂಪೂರ್ಣ ಕಡಿತ ಸರಿಯಲ್ಲ. ಈ ವರ್ಷ ವಿಶೇಷ ಸಂದರ್ಭ ಇರು ವುದರಿಂದ ಕನಿಷ್ಠ 15ರಿಂದ 20 ದಿನವಾದರೂ ರಜೆ ನೀಡಬೇಕು ಎಂದು ಶಿಕ್ಷಕರ ಸಂಘದ ಆಗ್ರಹ.

ಇಂದಿನ ಪರಿಸ್ಥಿತಿಯನ್ನು ಪರಿಗಣಿಸಿ ಸರಕಾರ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಸಹಕಾರ ಇರುತ್ತದೆ. ಸರಕಾರದ ನಿರ್ದೇಶನಕ್ಕೆ ನಮ್ಮ ವಿರೋಧ ಇಲ್ಲ.
-ವಿ.ಎಂ. ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next