ಕೋಲ್ಕತಾ: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿಯವರ ಪತ್ನಿ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ.
ಸದ್ಯದಲ್ಲೇ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ವದಂತಿಗಳು ಹರಿದಾಡತೊಡಗಿವೆ.
ಇತ್ತೀಚೆಗೆ, ಕೋಲ್ಕತಾಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಂಗೂಲಿ ನಿವಾಸಕ್ಕೆ ತೆರಳಿ ರಾತ್ರಿ ಭೋಜನ ಸ್ವೀಕರಿಸಿ, ಗಂಗೂಲಿ, ಡೋನಾ ಹಾಗೂ ಅವರ ಕುಟುಂಬ ಸದಸ್ಯರ ಜೊತೆಗೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ:ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಮೃತದೇಹ ಪತ್ತೆ!
Related Articles
ಈ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಡೋನಾ, “ಸದ್ಯಕ್ಕಂತೂ ಯಾವುದೇ ಆಫರ್ ಬಂದಿಲ್ಲ. ಅಂಥ ಪ್ರಸ್ತಾಪ ಬಂದರೆ ಖಂಡಿತವಾಗಿಯೂ ನಾನೇ ಖುದ್ದಾಗಿ ಮಾಧ್ಯಮಗಳಿಗೆ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.