Advertisement

ಏನ್ಲಾ ಅಮಾಸೆ.., ಸನ್‌ ಆಫ್ ರಾಜಾಹುಲಿ ಕ್ಯಾಬಿನೆಟ್‌ ಎಂಟ್ರಿ ಆಯ್ತಾರಾ….

11:26 AM May 15, 2022 | Team Udayavani |

ಅಮಾಸೆ: ನಮ್‌ಸ್ಕಾರ ಸಾ….

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಎಲ್‌ಗೋಗೂಮಾ ಸಾ.. ಇದಾನ್‌ ಸೌದಾಗಂಟಾ ಹೋಗ್‌ ಬರೂಮಾ ಅಂತಾ ಒಂಟೋಗಿದ್ನಿ

ಚೇರ್ಮನ್ರು: ಏನ್ಲಾ ಇದಾನ್‌ಸೌದಾ ವಿಸ್ಯ

ಅಮಾಸೆ: ಕ್ಯಾಬಿನೆಟ್‌ ಫ‌ುಲ್‌ ರೀಸಪಲ್ಲು, ಬುದ್ವಂತ ಬಸಣ್ಣ ಚೇಂಜ್‌ ಅಂತೆಲ್ಲಾ ಪುಂಗ್‌ತಿದ್ರು. ಅವ್ರು ಡೆಲ್ಲಿಗೋಗ್‌ ಬಂದ್‌ಮ್ಯಾಕೆ ಟುಸ್‌ ಆಗವ್ರೆ

Advertisement

ಚೇರ್ಮನ್ರು: ಅದ್ಯಾಕ್ಲಾ ಅಂಗಾಯ್ತು

ಅಮಾಸೆ: ಬಸಣ್ಣೋರು ಡೆಲ್ಲಿಗಂಟಾ ಹೋದೇಟ್ಗೆ ಲೋಕಲ್‌ ಬಾಡೀಸ್‌ ಎಲೆಕ್ಸನ್‌ ಮಾಡ್ಬೇಕು ಅಂತಾ ಕೋಲ್ಟಾ ಹೇಳ್‌ಬುಡ್ತು. ಮಾರ್ನೇ ವತ್ತಾರೇಕೆ ನೋಡುದ್ರೆ ಕೌನ್ಸಿಲ್‌, ರಾಜ್‌ಸಭಾ ಎಲೆಕ್ಸನ್‌ ಅನೌನ್ಸ್‌ ಆಗೋಯ್ತು. ಹೆಡ್‌ ಮಾಸ್ಟ್ರೆ ಅಮಿತ್‌ ಶಾ ಸಾಹೇಬ್ರು ಜಾವ್‌ ಜಾಕೆ ಎಲೆಕ್ಸನ್‌ ವರ್ಕ್‌ ಪ್ರಿಪೇರ್‌ ಕರೋ ಅಂತೇಳ್‌ ಬುಟ್ರಂತೆ.

ಚೇರ್ಮನ್ರು: ಅಂಗಾರೆ ರೀಸಪಲ್ಲು ಇಲ್ವಾ

ಅಮಾಸೆ:ಡೆಲ್ಲಿ ಸೇ ಮೆಸೇಜ್‌ ಆಯಾ ತೋ ಹೈ, ನಹಿ ತೋ ಅಬ್‌ ನಹಿ ಅಂತಾ ಇಸ್ಟೇಟ್‌ ಇನ್‌ ಚಾರ್ಜು ಹೇಳವ್ರೆ. ಪಾಕಿಸ್ತಾನ್‌ ಪ್ರಾಬ್ಲಿಮ್ಮು ಸಾಲೋ ಮಾಡ್ಬೋದು ನಿಮ್‌ ಕರ್‍ನಾಟ್ಕಾ ಪ್ರಾಬ್ಲಿಂ ಸಾಲೋ ನಹಿ ಹೋತಾ ಅಂತಾ ನಡ್ಡಾಜಿ ಹೇಳವ್ರಂತೆ

ಚೇರ್ಮನ್ರು: ಸನ್‌ ಆಫ್ ರಾಜಾಹುಲಿ ವಿಜಯೇಂದ್ರ ಬಾಹುಬಲಿ ಟು ಡೇಸ್‌ನಾಗೆ ಕ್ಯಾಬಿನೆಟ್‌ ಆಯ್ತದೆ ಅಂತಿದ್ರು

ಅಮಾಸೆ: ಮೊದ್ಲು ಅಂಗೇಯಾ ಇತ್ತು. ಆಮ್ಯಾಗೆ ದಬ್ಟಾಕೋತು. ಆದ್ರೂ ರಾಜಾಹುಲಿ ಹೋಪ್‌ ಇಟ್‌ ಕಂಡವ್ರೆ. ಡೋಂಟ್‌ ವರಿ ಮೈ ಸನ್‌ ಅಂತಾ ಹೇಳವ್ರಂತೆ. ಎಂಎಲ್ಸಿ ಲಿಸ್ಟ್‌ನಾಗೂ ವಿಜಯೇಂದ್ರಣ್ಣೋರ್ಧು ಹೆಸ್ರು ಐತಂತೆ. ಆಮ್ಯಾಕೆ ಮಿನಿಸ್ಟ್ರೆ ಗ್ಯಾರಂಟಿ ಅಂತೆ. ಇಷ್ಟಾದ್ರೆ ರಾಜಾಹುಲಿ ಖುಸ್‌, ಬುದ್ವಂತ ಬಸಣ್ಣ ಉಸ್‌.

ಚೇರ್ಮನ್ರು: ಅದೇನ್ಲಾ ಊರ್‌ಗೊಬ್ಳೆ ಸಾಂಗ್‌ ರಮ್ಯಾ ಮೇಡಂ ರಾಂಗ್‌ ಆಗವ್ರೆ

ಅಮಾಸೆ: ಡಿಕೆ ಸಿವ್‌ಕುಮಾರಣ್ಣೋರು ಡಾಕ್ಟ್ರು ಅಸ್ವತ್ಥಣ್ಣೋರು ಮಿಡ್‌ನೈಟ್‌ನಾಗೆ ಎಂಬಿ ಪಾಟೀಲ್‌ ಸಾವ್‌ಕಾರ್ರು ಮೀಟ್‌ ಮಾಡವ್ರೆ ಅಂತಾ ಮಾಂಜಾ ಕೊಟ್ರಾ. ಅದ್ಕೆ ಪಾಟೀಲ್‌ ಸಾವ್‌ಕಾರ್ರು ರಾಂಗ್‌ ಆಗೋದ್ರು, ಅದ್ಕೆ ರಮ್ಯ ಮೇಡಂ ಗುಮ್ಮಿದ್ರು. ಆಮ್ಯಾಕೆ ಫ‌ುಲ್‌ ಡಿಶುಂ ಡಿಶುಂ

ಚೇರ್ಮನ್ರು: ಅಲ್ಲೆಲ್ಲೋ ಸಿವ್‌ಕುಮಾರು- ಪಾಟೀಲು ಜತ್‌ ಜತ್ಗೆ ನಗ್ತಾವ್ರೆ

ಅಮಾಸೆ: ಇಲ್‌ ಬೆಂಕಿ ಆಗೈತೆ, ಅಲ್‌ ವಗೆ ಕಾಣ್‌ ಸ್ತಿಲ್ಲಾಂತ ಡವ್‌ ಮಾಡವ್ರೆ. ಸೋನಿಯಾ ಮೇಡಂನೋರು ಯೇ ಕ್ಯಾ ಹೈ ಅಂತಾ ಗುರಾಯ್ಸಿದ್ರಂತೆ. ಅದ್ಕೆ ವಿ ಆರ್‌ ಕ್ಲೋಸ್‌ ಫ್ರೆಂಡ್ಸ್‌ ಅಂತಾ ಫೋಸ್‌ ಕೊಟ್ಟವ್ರೆ

ಚೇರ್ಮನ್ರು: ಅಂಗಾರೆ ಇನ್ನರ್‌ ಇಸ್ಟೋರಿ ಬ್ಯಾರೆ ಐತೆ

ಅಮಾಸೆ: ಹೌದೇಳಿ ಬೇಜಾನ್‌ ಐತೆ. ಸಿದ್ರಾಮಣ್ಣೋರ್‌ ಗ್ಯಾಂಗ್‌ ಡಿಕೆ ಸಿವ್‌ಕುಮಾರ್‌ ಗ್ಯಾಂಗ್‌ ಅಂತಾ ಕಿತ್ತೋಗೈತೆ, ಡೆಲ್ಲಿನೋರು ಪ್ಯಾಚ್‌ ಹಾಕ್ತಾವ್ರೆ. ಎಲೆಕ್ಸನ್‌ ಹತ್ರ ಬರಿ¤ದ್ದಂಗೆ ಫೈಟಿಂಗ್‌ ಸುರು

ಚೇರ್ಮನ್ರು: ಹೋಗ್ಲಿ ಬುಡ್ಲ ಇವ್ರದ್‌ ಇದ್ದದ್ದೇ. ನಮ್‌ ತೆನೆ ಪಾಲ್ಟಿ ಎಂಗೈತ್ಲಾ

ಅಮಾಸೆ: ಇಬ್ರಾಹಿಂ ಸಾಬ್ರು ಬಂದ್ಮೇಕೆ ಫ‌ುಲ್‌ ಘಮ್ಲು. ಜನ್ತಾ ಜಲ್ದಾರೆ ರಥೋತ್ಸವ ಸಕ್ಸಸ್‌ ಆಗೈತೆ ಅಂತಾ ಕುಮಾರಣ್ಣೋರು ಫ‌ುಲ್‌ ಖುಸ್‌ ಆಗವ್ರೆ. ದೊಡ್‌ ಗೌಡ್ರು ಡಬಲ್‌ ಖುಸ್‌. ರೇವಣ್ಣೋರು ಎಲ್ಲಾ ನನ್‌ ಲಿಂಬೂ ಖದರ್‌ ಅಂತಾ ಕಣ್‌ ಮಿಟಿಕಿಸ್ತಾವ್ರೆ

ಚೇರ್ಮನ್ರು:ಕೈ ಪಾಲ್ಟಿನಾಗೆ ಯಾಕ್ಲಾ ಯಾವ್ದೂ ನೆಟ್‌ ಗಿಲ್ಲಾ

ಅಮಾಸೆ: ಅದೊಂತರಾ ಕಿಸ್ಸಾ ಕುರ್ಚಿಕಾ ಅಂಗಾಗೈತೆ. ಸಿದ್ರಾಮಣ್ಣೋರು ಸಿಎಂ ಡ್ರೀಂನಾಗವ್ರೆ, ಸಿವ್‌ ಕುಮಾರಣ್ಣೋರು ನಾನೇನ್‌ ಕಮ್ಮಿ ಅಂತಾವ್ರೆ, ಇವ್ರ್ ಅಬ್ರದಾಗೆ ಖರ್ಗೆ ಸಾಹೇಬ್ರು ಕಳ್ದೋಗವ್ರೆ. ಪರಮೇಸ್ವರ್‌ ಸಾಹೇಬ್ರು ವೆರಿ ಬ್ಯಾಡ್‌ ಅಂತಾ ಸುಮ್ಕಾಗವ್ರೆ. ಇವಾಗ್‌ ಇವಾಗಾ ಹರಿಪ್ರಸಾದಣ್ಣೋರು ಒನ್‌ ಚಾನ್ಸ್‌ ಸಿಗ್ಬೋದಾ ಅಂತಾ ಟೇಂ ಕಾಯ್ತಾವ್ರೆ. ಏನೇನ್‌ ಆಯ್ತದೋ ನೋಡುಮಾ. ನನ್‌ ಹೆಂಡ್ರು ಗುಡ್ಡೆ ಬಾಡ್‌ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ…..

ಎಸ್‌.ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next