Advertisement

ಸಿದ್ದರಾಮಯ್ಯ ಒಳ ಮೀಸಲಾತಿ ಪರವೋ, ವಿರುದ್ಧವೋ?

04:34 PM Jan 09, 2023 | Team Udayavani |

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಲಂಬಾಣಿ ಹಾಗೂ ಬೋವಿ ಸಮುದಾಯದವರಿಗೆ ಒಳ ಮೀಸಲಾತಿ ಬೇಡ ಎಂದು ಸಿಎಂ ಆಗಿದ್ದ ವೇಳೆಯಲ್ಲಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ತಡೆ ಹಿಡಿಯಲಾಗಿತ್ತು

Advertisement

ಎಂದು ಹೇಳಿಕೆ ನೀಡಿರುವ ಕ್ರಮವನ್ನು ದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್‌ ಖಂಡಿಸಿದರು.

ನಗರದ ನಚಿಕೇತ ನಿಲಯದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆ ಮುಂಭಾಗದಲ್ಲಿ ಮಾತನಾಡಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈಗ ಅದೇ ಸಮುದಾಯಗಳಿಗೆ ಒಳ ಮೀಸಲಾತಿ ಬೇಕು ಎನ್ನುತ್ತಿದ್ದು, ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸಿ ರಾಜಕೀಯ ಮಾಡಲು ಹೊರಟಿರುವುದು ನಿಮಗೆ ಶೋಭೆ ತರುತ್ತದೆಯೇ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರೇ ನೀವು ಒಳ ಮೀಸಲಾತಿ ಪರವೇ ಅಥವಾ ವಿರುದ್ಧವೇ ಎಂದು ಸ್ಪಷ್ಟಪಡಿಸಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.

ಹೇಳಿಕೆ ಖಂಡನೀಯ: ಮುಂದಿನ ವಿಧಾನ ವಿಧಾನಸಭೆ ಚುನಾವಣೆಗೆ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆಗೆ ಆಗಮಿಸುತ್ತಿರುವ ತಾವು, ತಾಲೂಕಿನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ 50 ಸಾವಿರ ಮತಗಳಿದ್ದು, ಈ ರೀತಿಯ ಹೇಳಿಕೆಯನ್ನು ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಅರಿವಿಲ್ಲದೆ ಮಾತನಾಡುತ್ತಿದ್ದಾರೆ: ಜ.10ರಂದು ಒಳ ಮೀಸಲಾತಿ ಬೇಡ ಎನ್ನುವ ಇತರೆ ಉಪಜಾತಿಗಳು ಬೆಂಗಳೂರಿನ ಸಮಾವೇಶದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿ ಬೇಡ ಎನ್ನುತ್ತಿವೆ. ಅದರ ಬಗ್ಗೆ ಮಾಹಿತಿ ಇಲ್ಲದವರು ವಿರೋಧ ಮಾಡುತ್ತಿದ್ದಾರೆ. ಇದು ಸಾಮಾಜಿಕ ನ್ಯಾಯದ ವಿರುದ್ಧ ಹೋರಾಟ ವಾಗಿದೆ. ನ್ಯಾ.ಸದಾಶಿವ ಆಯೋಗದ ವರದಿಯ ವಿರುದ್ಧ ಮಾಡುವ ಹೋರಾಟ ಬಗ್ಗೆ ಅರಿವಿಗೆ ಬರಬೇಕಿದೆ ಎಂದು ಹೇಳಿದರು.

ಅರಿವಿಗೆ ಬರಬೇಕಿದೆ: ನ್ಯಾ.ಸದಾಶಿವ ಆಯೋಗದ ವರದಿ 101 ಜಾತಿಗಳಿಗೂ ಮೀಸಲಾತಿ ಜನ ಸಂಖ್ಯೆಗೆ ಅನುಗುಣವಾಗಿ ನೀಡುವುದಾಗಿದೆ. ಆದರೆ, ಇದನ್ನು ಅರಿಯದೆ ಸದಾಶಿವ ಆಯೋಗದ ವರದಿಯ ವಿರುದ್ಧ ಮಾಡುವ ಹೋರಾಟ ಬಗ್ಗೆ ಅರಿವಿಗೆ ಬರಬೇಕಿದೆ ಎಂದು ಹೇಳಿದರು.

ಸಮಿತಿಯ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಪದಾ ಧಿಕಾರಿಗಳಾದ ರೋಜಾರಪಲ್ಲಿ ವೆಂಕಟರಮಣ, ಸಂಪತ್‌ಕುಮಾರ್‌, ಸಿ.ಈರಪ್ಪ, ಗೋವಿಂದರಾಜು, ಕೆಜಿಎಫ್‌ ಶ್ರೀಧರ್‌, ಬಂಗಾರ ಪೇಟೆ ದೇಶಿಹಳ್ಳಿ ಶ್ರೀನಿವಾಸ್‌, ಕೋಲಾರ ಯಲ್ಲಪ್ಪ,ಬಂಗಾರಪೇಟೆ ನಗರ ಘಟಕ ಸಂಚಾಲಕ ಕನ್ನಯ್ಯ,ಜಗನ್‌ ಮಂಜುನಾಥ ಇತರರು ಇದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next