Advertisement

ಬಿಗ್ ಬಾಸ್ 13ರ ಸೀಸನ್ ಗೆ ಸಲ್ಮಾನ್ ಸಂಭಾವನೆ ಮೊತ್ತ 403 ಕೋಟಿ ರೂಪಾಯಿ!

09:04 AM Jun 27, 2019 | Team Udayavani |

ಮುಂಬೈ: ಹಿಂದಿಯ ವಿವಾದಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ಮತ್ತೊಮ್ಮೆ ಪ್ರಾರಂಭವಾಗಲಿದ್ದು, ಪಿಂಕ್ ವಿಲ್ಲಾ ವರದಿ ಪ್ರಕಾರ, ಸೀಸನ್ 13ರ ಶೋ ನಡೆಸಿಕೊಡಲಿರುವ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾಲ್ ಪಡೆಯುವ ಸಂಭಾವನೆ 403 ಕೋಟಿ ರೂಪಾಯಿ ಎನ್ನಲಾಗಿದೆ!

Advertisement

ಬಿಗ್ ಬಾಸ್ 13ನೇ ಸೀಸನ್ ನ 26 ಎಸಿಸೋಡ್ ಗಳಿಗೆ ಸಲ್ಮಾನ್ ಖಾನ್ 403 ಕೋಟಿ ರೂಪಾಯಿ ಬೃಹತ್ ಮೊತ್ತದ ಸಂಭಾವನೆ ಪಡೆಯಲಿದ್ದು, ಒಂದು ವಾರದ ಎಪಿಸೋಡ್ ಗೆ ಖಾನ್ ಬರೋಬ್ಬರಿ 31 ಕೋಟಿ ರೂಪಾಯಿ ಪಡೆದಂತಾಗಿದೆ ಎಂದು ವರದಿ ತಿಳಿಸಿದೆ.

ಭಾರತೀಯ ಮಾಧ್ಯಮಗಳ ವರದಿ ಪ್ರಕಾರ, ಕಳೆದ ವರ್ಷದ ಬಿಗ್ ಬಾಸ್ ನ ಪ್ರತಿ ಎಪಿಸೋಡ್ ಗೆ ಸಲ್ಮಾನ್ ಖಾನ್ 12ರಿಂದ 14 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಹೇಳಿದೆ.

ಈ ವರ್ಷ ಹಿಂದಿ ಅವತರಣಿಕೆಯ ಬಿಗ್ ಬಾಸ್ 13 ಸೆಪ್ಟೆಂಬರ್ 29ರಿಂದ ಪ್ರಸಾರವಾಗಲಿದ್ದು, ಬಹುತೇಕ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಎಂಟ್ರಿ ಪಡೆಯಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಕೆಲವು ವರದಿಗಳ ಪ್ರಕಾರ ಬಿಗ್ ಬಾಸ್ 13ರಲ್ಲಿ ನಟರಾದ ಜಯ್ ಭಾನುಶಾಲಿ, ಮಹಿ ವಿಜಿ, ನವಜ್ಯೋತ್ ಗುರುದತ್ ಜಾಗೀ ಸೆಲೆಬ್ರಿಟಿಗಳಾದ ಕರಣ್ ಪಟೇಲ್, ಝಾರೀನ್ ಖಾನ್, ರಾಜ್ ಪಾಲ್ ಯಾದವ್ ಹೆಸರು ಕೇಳಿಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next