Advertisement

ಮೋದಿ ಟೀಂಗೆ  ಕಿಶೋರ್‌?

06:00 AM Jul 14, 2018 | Team Udayavani |

ನವದೆಹಲಿ: ಘರ್‌ವಾಪ್ಸಿಗೆ ರಾಜಕೀಯ ಚಾಣಾಕ್ಷ ಪ್ರಶಾಂತ್‌ ಕಿಶೋರ್‌ ಸಜ್ಜಾಗುತ್ತಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ಅವರ ಜತೆ ಕೆಲಸ ಮಾಡಿದ್ದ ಪ್ರಶಾಂತ್‌, 2019ರಲ್ಲೂ ಮತ್ತೆ ಮೋದಿ ಅವರ ತಂಡಕ್ಕೇ ಮರಳಲಿದ್ದಾರೆ. ಈಗಾಗಲೇ ಮೂರ್ನಾಲ್ಕು ಬಾರಿ ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿರುವ ಪ್ರಶಾಂತ್‌ ಕಿಶೋರ್‌ ಸದ್ಯದಲ್ಲೇ ಅವರ ಪೂರ್ಣ ತಂಡದೊಂದಿಗೆ ಆಗಮಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. 2014ರಲ್ಲಿ ಮೋದಿ ಅವರ ಪರವಾಗಿ ತಂತ್ರಗಾರಿಕೆ ರೂಪಿಸಿದ್ದ ಅವರು, ನಂತರ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಜತೆಗೆ ಹೋಗಿದ್ದರು. ಅಲ್ಲಿ ಇವರ ತಂತ್ರಗಳು ಯಶಸ್ವಿಯಾಗಿದ್ದವು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next