Advertisement

ಕನ್ನಡ ಧ್ವಜಕ್ಕೆ ಕೇಂದ್ರದ ಅನುಮತಿ ಇಲ್ಲ?​​​​​​​

06:00 AM Mar 10, 2018 | Team Udayavani |

ನವದೆಹಲಿ/ಬೆಂಗಳೂರು: ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಬೇರೆ ಯಾವ ರಾಜ್ಯಕ್ಕೂ ಸ್ವಂತ
ಧ್ವಜ ಹೊಂದುವ ಅಧಿಕಾರವಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Advertisement

ಸಂವಿಧಾನದಲ್ಲಿ ಇಂಥ ಅವಕಾಶವನ್ನೇ ನೀಡಿಲ್ಲ ಎಂದಿರುವ ಅವರು,ಈಗ ಕರ್ನಾಟಕಕ್ಕೆ ಅಧಿಕೃತ ಮಾನ್ಯತೆ ಕೊಟ್ಟರೆ, ನಾಳೆ ಉಳದ ರಾಜ್ಯಗಳು ಹಾಗೂ ಜಿಲ್ಲೆಗಳೂ ಪ್ರತ್ಯೇಕ ಧ್ವಜಕ್ಕೆ ಬೇಡಿಕೆ ಮಂಡಿಸಬಹುದು. ಆಗ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಬಹುದು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಧ್ವಜ ಸಂಹಿತೆ ಪ್ರಕಾರ, ಭಾರತಕ್ಕೆ ಇರುವುದು ಕೇವಲ ಮೂರು ವರ್ಣಗಳ ಧ್ವಜ ಮಾತ್ರ. ಇದಕ್ಕೆ ಹೊರತಾಗಿ ಬೇರೆ ಯಾವುದೇ ಧ್ವಜಗಳಿಗೂ ಮಾನ್ಯತೆ ಇಲ್ಲ. ಇದನ್ನು ಸಂವಿಧಾನದಲ್ಲಿಯೇ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಜಮ್ಮು- ಕಾಶ್ಮೀ ರಕ್ಕೆ ವಿಶೇಷ ಸ್ಥಾನಮಾನ ಇರುವುದರಿಂದ ಅದಕ್ಕೆ ಪ್ರತ್ಯೇಕ ಧ್ವಜವಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಇನ್ನು ಕೇಂದ್ರ ಗೃಹ ಇಲಾಖೆಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ತ್ರಿವರ್ಣ ಧ್ವಜಕ್ಕೆ ಹೊರತಾಗಿ
ಬೇರಾವುದೇ ಧ್ವಜಕ್ಕೆ ಆಸ್ಪದವಿಲ್ಲ. ಅಲ್ಲದೆ, ಕರ್ನಾಟಕದಿಂದ ಇನ್ನೂ ಪ್ರಸ್ತಾಪವೂ ಬಂದಿಲ್ಲ. ಇಂಥ ಸಂದರ್ಭದಲ್ಲಿ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ. ನಮ್ಮದು ಒಂದು ದೇಶ,ಒಂದೇ ಧ್ವಜ ಸಂಸ್ಕೃತಿಯುಳ್ಳ ದೇಶ ಎಂದಿರುವ ಅವರು,ಕರ್ನಾಟಕದಲ್ಲಿ ಈಗಾಗಲೇ ಒಂದು ಧ್ವಜವಿದೆ. ಅದು ಸರ್ಕಾರದ್ದಲ್ಲ,ಕೇವಲ ಜನರ ಭಾವನಾತ್ಮಕ ಧ್ವಜ. ಇದನ್ನು ಸ್ವಾತಂತ್ರೊéàತ್ಸವ ಅಥವಾ ಗಣರಾಜ್ಯೋತ್ಸವ ಸಂದರ್ಭಗ ಳಲ್ಲಿ ಹಾರಿಸುವಂತಿಲ್ಲ. ಆ ರಾಜ್ಯದ ಸ್ಥಾಪನೆ ದಿನ ಮಾತ್ರ ಹಾರಾಟಕ್ಕೆ ಬಳಕೆ ಮಾಡಿಕೊಳ್ಳ ಬಹುದು ಎಂದಿದ್ದಾರೆ.

ನಾಡಧ್ವಜವೇ ಬೇರೆ, ಕನ್ನಡ ಬಾವುಟವೇ ಬೇರೆ.ಸರ್ಕಾರ ಈಗ ಸಿದ್ಧಪಡಿಸಿರುವುದು ನಾಡಧ್ವಜ. ರಾಷ್ಟ್ರಧ್ವಜ ಮಾದರಿಯಲ್ಲೇ ನಾಡಧ್ವಜ ರೂಪಿಸಿದ್ದೇವೆ. ಇದಕ್ಕೆ ಕೇಂದ್ರ ಅನುಮೋದನೆ ನೀಡಬೇಕಷ್ಟೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next