Advertisement

ಶೋಷಿತ ಸಮುದಾಯ ಡಿಜೆ ಹಾಕುವುದು ತಪ್ಪೇ ?

11:30 PM Dec 31, 2021 | Team Udayavani |

ಮಂಗಳೂರು: ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾ. ಪಂ.ನ ಬಾರಿಕೆರೆ ಕೊರಗರ ಕಾಲನಿಯಲ್ಲಿ ಕಳೆದ ಸೋಮವಾರ ರಾತ್ರಿ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್‌ ಲಾಠಿ ಚಾರ್ಜ್‌ ಪ್ರಕರಣ ಶುಕ್ರವಾರ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೊನಾವಣೆ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಅಹವಾಲು ಸ್ವೀಕಾರ ಸಭೆಯಲ್ಲಿ ಪ್ರತಿಧ್ವನಿಸಿತು.

Advertisement

ಪೊಲೀಸರು ನಡೆಸಿದ ಲಾಠಿ ಪ್ರಹಾರ ಅಮಾನವೀಯ ಹಾಗೂ ಖಂಡ ನೀಯ. ಶೋಷಿತ ಸಮುದಾಯ ತಮ್ಮ ಮನೆಯ ಕಾರ್ಯಕ್ರಮದಲ್ಲಿ ಡಿಜೆ ಬಳಸು ವುದು ತಪ್ಪೇ ಎಂದು ದಲಿತ ನಾಯಕ ಶೇಖರ್‌ ಪ್ರಶ್ನೆ ಮಾಡಿದರು.

ಸಮಾಜ ಕಲ್ಯಾಣ ಸಚಿವರು ಕೊರಗ ಕುಟುಂಬದ ಸಂತ್ರಸ್ತರ ಮನೆಗೆ ತೆರಳಿ ನಿಮ್ಮ ಜತೆ ನಾವಿದ್ದೇವೆ ಎನ್ನುತ್ತಾರೆ. ಮತ್ತೂಂದೆಡೆ ಅದೇ ಮದುಮಗ ಸೇರಿ ಏಳು ಜನರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಇದು ವಿಪರ್ಯಾಸ ಎಂದವರು ಅಸಮಾ ಧಾನ ವ್ಯಕ್ತಪಡಿಸಿದರು.

ಪ್ರಕರಣದ ಬಗ್ಗೆ ತಪ್ಪಿತಸ್ಥ ಪೊಲೀಸ ರನ್ನು ಅಮಾನತು ಮಾಡುವುದು ಮಾತ್ರ ವಲ್ಲ, ಅವರ ವಿರುದ್ಧ ಕ್ರಿಮಿ ನಲ್‌ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವಂತೆ ಅವರು ಜಿಲ್ಲಾ ಎಸ್‌ಪಿ ಅವರನ್ನು ಒತ್ತಾಯಿಸಿದರು.

ಸಮಸ್ಯೆ ಬಗೆಹರಿಸಲು ಆಗ್ರಹ
ಡಿಸಿ ಮನ್ನಾ ಜಾಗ ಕುರಿತಂತೆ ಸಾಕಷ್ಟು ಹೋರಾಟ ನಡೆಸಿದರೂ ಇನ್ನೂ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. 1980ರ ಬಳಿಕ ಜಿಲ್ಲೆಯಲ್ಲಿ ದಲಿತರಿಗೆ ಡಿಸಿ ಮನ್ನಾ ಭೂಮಿ ಮಂಜೂರಾಗಿಲ್ಲ. ಹೊರ ರಾಜ್ಯ, ಜಿಲ್ಲೆಗಳಿಂದ ಬಂದವರು ಅಕ್ರಮವಾಗಿ ಇಲ್ಲಿನ ಭೂಮಿಯಲ್ಲಿ ನೆಲೆಸಿರುವಾಗ ಇಲ್ಲಿನ ದಲಿತರಿಗೆ ಅವರಿಗಾಗಿ ಮೀಸಲಿಟ್ಟ ಜಾಗವನ್ನು ಹಂಚಿಕೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ದಲಿತ ಮುಖಂಡ ಎಸ್‌.ಪಿ. ಆನಂದ ಪ್ರಶ್ನಿಸಿದರು.

Advertisement

ಇದನ್ನೂ ಓದಿ:ಶೀಘ್ರ ಬಿಜೆಪಿ, ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಸೇರ್ಪಡೆ: ಸತೀಶ ಜಾರಕಿಹೊಳಿ

ಅಂಬೇಡ್ಕರ್‌ ನಿಗಮದಡಿ ದಲಿತರಿಗೆ
ಸ್ವ ಉದ್ಯೋಗಕ್ಕಾಗಿ ನೀಡಲಾಗುವ ಸಾಲ ಯೋಜನೆ ಪ್ರಸಕ್ತ ಆಯಾ ಕ್ಷೇತ್ರದ ಶಾಸಕರ ಮೂಲಕ ಮಂಜೂರಾಗು ತ್ತಿರುವುದರಿಂದ ಯಾವುದೋ ನಿರ್ದಿಷ್ಟ ಪಕ್ಷಗಳ ಕಾರ್ಯಕರ್ತರಿಗೆ ಮಾತ್ರ ದೊರೆಯುತ್ತಿದೆ. ಹಿಂದೆ ಜಿಲ್ಲಾಧಿಕಾರಿ ಮೂಲಕ ಹಂಚಿಕೆಯಾಗುತ್ತಿದ್ದು, ಅದೇ ರೀತಿ ಮುಂದುವರಿಸಬೇಕು. ಜಿಲ್ಲೆಯ ಮೂಲಗಳಿಂದ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ದಲಿತ ಸಮುದಾಯದ ಮಕ್ಕಳಿಗಾಗಿ ಇರುವ ಹಾಸ್ಟೆಲ್‌ಗ‌ಳಲ್ಲಿ ಮೂಲಭೂತ ಸೌಕ ರ್ಯವನ್ನು ಒದಗಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕೆಂದ‌ರು. ನಾಯಕರಾದ ವಿಶ್ವನಾಥ್‌, ಡಿ.ಎಸ್‌. ಪ್ರಸನ್ನ ಹಾಗೂ ಇತ ರರು ತಮ್ಮ ಅಹವಾಲುಗಳನ್ನು ಮಂಡಿಸಿದರು.

ಪರಿಶೀಲನೆಯ ಬಳಿಕ ಬಿ ರಿಪೋರ್ಟ್‌
ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕೆಲವೊಂದು ಪ್ರಕರಣಗಳು ಮೇಲ್ವರ್ಗದವರ ಒತ್ತಡ ಹಾಗೂ ಹಣದ ಆಮಿಷದಿಂದ ಪೊಲೀಸರಿಂದ “ಬಿ’ ರಿಪೋರ್ಟ್‌ ಆಗಿ ಪರಿವರ್ತಿಸಲಾಗುತ್ತಿದೆ ಎಂದು ದಲಿತ ನಾಯಕರು ಆರೋಪಿಸಿದರು.

ಠಾಣಾ ಮಟ್ಟದಿಂದ ವರಿಷ್ಠಾಧಿಕಾರಿ ಮಟ್ಟದಲ್ಲಿಯೂ ಪರಿಶೀಲನೆ ನಡೆಸಿ ಬಳಿಕ ಐಜಿಗೆ ವರದಿ ಸಲ್ಲಿಕೆಯಾದ ಬಳಿಕವೇ ಬಿ ರಿಪೋರ್ಟ್‌ ಮಾಡಲಾಗುತ್ತದೆ. ಹಾಗಾಗಿ ಅಂತಹ ಯಾವುದೇ ರೀತಿಯ ಒತ್ತಡ, ಆಮಿಷಕ್ಕೆ ಬಲಿಯಾಗುವ ಪ್ರಶ್ನೆಯೇ ಬರುವುದಿಲ್ಲ. ಅಂತಹ ಅನುಮಾನವಿದ್ದಾಗಲೂ ಸಂತ್ರಸ್ತರಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವಿರುತ್ತದೆ. ನ್ಯಾಯಾಲಯ ತನಿಖೆಗೆ ಆದೇಶ ನೀಡುವ ಅವಕಾಶವೂ ಇರುವುದರಿಂದ ಅಂತಹ ಅನುಮಾನ ಬೇಡ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next