Advertisement

ಒಂದ್ಸಲ ಮಾತಾಡಲು ಸಾಧ್ಯವಾ?

08:07 PM Aug 26, 2019 | mahesh |

ನಿನ್ನ ಪ್ರೀತಿಯ ಕಡಲಲಿ ಬಿದ್ದಿದ್ದು ಒಂದು ವಿಸ್ಮಯವೇ ಸರಿ. ಅಂದು ಸಂಜೆ ಕಾಲೇಜು ಮುಗಿಸಿ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಬಾನಂಗಳದಲಿ ನೇಸರ, ಬಂಗಾರದ ಬಣ್ಣ ಬಳಿಯುತ್ತಾ ಮನೆಕಡೆಗೆ ಮುಖಮಾಡುತ್ತಿದ್ದ. ನನ್ನ ಮುಂದೆ ಹುಡುಗಿಯರ ಗುಂಪೊಂದು ಹಾಸ್ಯ ಮಾಡುತ್ತಾ ಮುಂದೆ ಸಾಗುತ್ತಿದ್ದಂತೆ ‘ಓ ಚೋಟಿ ‘ಎಂಬ ಅಶರೀರವಾಣಿಯೊಂದು ಕೇಳಿಸಿತು. ತಕ್ಷಣವೇ ನೀನು ತಿರುಗಿ ನೋಡಿದೆಯಲ್ಲ; ಆಗಾವನು ಉತ್ತರ ಕೊಡಬೇಕೆಂದು ಗೊತ್ತಾಗದೆ ನಾನು ಕಕ್ಕಾಬಿಕ್ಕಿಯಾಗಿ ನಿಂತದ್ದು ನಿಜ. ಆನಂತರದಲ್ಲಿ, ಯಾವುದೋ ಮೋಡಿಗೆ ಒಳಗಾದವನಂತೆ, ಭಯದಿಂದಲೇ ನಿನ್ನ ಹೆಜ್ಜೆ ಗುರುತಿನ ಮೇಲೆ ಹೆಜ್ಜೆಯನ್ನ ಇಡುತ್ತಾ ನಿನ್ನ ಕೆಂಪು ಬಣ್ಣದ ಉಡುಗೆ ಕೆಂಪು ಗೋಡೆಯೊಳಗೆ ಮಾಯವಾಗುವವರೆಗೂ ನನಗರಿವಿಲ್ಲದಂತೆ ನಿನ್ನ ಹಿಂದೆ ಬಂದು ಬಿಟ್ಟಿದ್ದೆ . ಆಮೇಲೆ ಗೊತ್ತಾಯ್ತು, ಆ ಕೆಂಪು ಗೋಡೆ ಹಾಸ್ಟೆಲ್‌ ಅಂತಾ. . ಅದೇನೋ ‘ಲವ್‌ ಅಟ್‌ ಫ‌ಸ್ಟ್‌ ಸೈಟ್‌ ‘ಅಂತಾರಲ್ಲ, ಅದು ಆ ಕ್ಷಣ ಆಗಿತ್ತು ಅನ್ಸುತ್ತೆ …

Advertisement

ಬಾಲಂಗೋಚಿಯಿಲ್ಲದ ಗಾಳಿಪಟದಂತೆ, ಗೊತ್ತು ಗುರಿಯಿಲ್ಲದ ನನ್ನ ಜೀವನದಲ್ಲಿ ಗಾಳಿಪಟದ ದಾರ ಯಾರೋ ಹಿಡಿದು ಎಳದಂತಾಗಿತ್ತು. ರಾತ್ರಿಯೆಲ್ಲಾ ನಿಂದೇ ಧ್ಯಾನ. ಅಂದಿನಿಂದ ನನ್‌° ನಾನು ಮರೆತರೂ ಕ್ಯಾಂಪಸ್ನಲ್ಲಿ ನಿನ್ನ ಕಣ್ಣುಗಳು ನನ್ನನ್ನ ಸದಾ ಎಚ್ಚರಗೋಳಿಸುತಿದ್ದವು. ಎಂದೂ ಹುಡುಗೀರನ್ನ ಕಣ್ಣೆತ್ತಿ ನೋಡಿಲ್ಲ ಎಂದವನಿಗೆ ಪ್ರತಿಸಾರಿ ನಿನ್ನ ಕಂಡಾಗಲೂ ನಿನ್ನ ಕಣ್ಣೋಟಕ್ಕೆ, ಕಲ್ಲಿನಂತೆ ಇದ್ದ ಹೃದಯ ಮಂಜುಗಡ್ಡೆಯಂತೆ ಕರಗತೊಡಗಿತು ಅಂದ್ರೆ ನಿನ್‌ ಕಣ್ಣುಗಳು ಎಂಥ ಪವರ್ಫುಲ್‌ ಇರಬೋದು

ಲೆಕ್ಕಹಾಕು !
ಅಂದಿನಿಂದ ಇಂದಿನವರೆಗೂ ನನ್ನ ಹೃದಯದ ತುಂಬಾ ನೀನೆ ತುಂಬಿರುವೆ. ನಿನ್ನನ್ನ ಭೇಟಿ ಮಾಡಲು ಪ್ರಯತ್ನಿಸಿದರೂ ಪ್ರತಿ ಬಾರಿಯೂ ಸೋಲೇ ಜೊತೆಯಾಗುತ್ತಿದೆ. ತಿರುಗಿ ಬೀಳುವ ಮನಸ್ಸಿಗೆ ತುಂಬಾ ದಿನಾ ಸಮಾಧಾನ ಹೇಳಲಾರೆ. ಮನಸ್ಸಿನದು ಒಂದೇ ಹಠ, ಎಷ್ಟೋಸಲ ತಿಳಿ ಹೇಳಿದರೂ ಕೇಳಲ್ಲೊಲ್ಲದು. ನನ್ನ ಹುಚ್ಚು ಬವಣೆಗೊಂದು ದಾರಿ ತೋರಿಸುವೆಯ ಓ ಚೋಟಿ …….

ಬಾಬುಪ್ರಸಾದ್‌. ಎ

Advertisement

Udayavani is now on Telegram. Click here to join our channel and stay updated with the latest news.

Next