Advertisement
“ಆಂಗೋಲಾ ಯೂನಿಫ್ಲೋರ’ ಎಂಬ ವೈಜ್ಞಾನಿಕ ಹೆಸರುಳ್ಳ ಹೂಗಳನ್ನು ಅರಳಿಸುವ ಆರ್ಕಿಡ್ ಸಸ್ಯಗಳು, ತಮ್ಮ ಹೂವುಗಳಿಂದಾಗಿಯೇ ಜಗತøಸಿದ್ಧವಾಗಿವೆ. ಯಾಕಂದ್ರೆ, ಈ ಹೂವುಗಳ ಆಕಾರ, ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿಟ್ಟಂತೆ ಕಾಣಿಸುತ್ತದೆ. “ದೋಣಿ ಆರ್ಕಿಡ್’ ಎಂದು ಕರೆಯಲ್ಪಡುವ ಈ ಸಸ್ಯ, ವೆನೆಜುವೇಲಾ, ಕೊಲಂಬಿಯಾ, ಈಕ್ವೆಟಾರ್, ಬೊಲಿಯಾ ಮತ್ತು ಪೆರುವಿನ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಸಸ್ಯಶಾಸ್ತ್ರಜ್ಞರಾದ ಲೋಪೆಜ್ ಮತ್ತು ಆಂಟೋನಿಯೋ ಜಿಮೇನಜ್‌ರವರು 1777-1788ರವರೆಗೆ ಚಿಲಿ ಹಾಗೂ ಪೆರು ಪ್ರದೇಶಗಳಲ್ಲಿ ಅಧ್ಯಯನಕ್ಕಾಗಿ ಹೋಗಿದ್ದಾಗ, ಈ ಸಸ್ಯವನ್ನು ಮೊದಲ ಬಾರಿಗೆ ಗುರುತಿಸಿದರು. 1798ರವರೆಗೂ ಯಾವುದೇ ವರ್ಗೀಕರಣಕ್ಕೆ ಒಳಗಾಗದಿದ್ದ ಈ ಆರ್ಕಿಡ್ ಪ್ರಬೇಧಕ್ಕೆ, ಪೆರುವಿನ ಗಣಿ ವಿಭಾಗದ ಡೈರೆಕ್ಟರ್ ಜನರಲ್ ಆಗಿದ್ದ “ಫ್ರಾನ್ಸಿಸ್ಕೋ ಡಿ ಆಂಗುಲೋ’ ಗೌರವಾರ್ಥ ಅವರ ಹೆಸರನ್ನೇ ಇಡಲಾಯ್ತು. ಒಂದು ಕೊಂಬೆಗೆ ಒಂದೇ ಹೂವು
ಈ ಸಸ್ಯದ ಬೆಳವಣಿಗೆಗೆ ಅತಿ ಉಷ್ಣಾಂಶದ ಅಗತ್ಯ ಇರುವುದಿಲ್ಲ. ಶೀತ ಹವೆಯಿದ್ದರೂ ಸಾಕು, ಹುಲುಸಾಗಿ ಬೆಳೆಯುತ್ತದೆ. ಸರಾಸರಿ 18-24 ಇಂಚುಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಈ ಸಸ್ಯ, ಒಂದು ಮೀಟರ್‌ಗೂ ಜಾಸ್ತಿ ಉದ್ದವಿರುವ ತೆಳುವಾದ ಎಲೆಗಳನ್ನು ಹೊಂದಿರುತ್ತದೆ. ಇದರ ಗೆಡ್ಡೆಯ ಮೇಲೆ ಮೂರರಿಂದ ನಾಲ್ಕು ಎಲೆಗಳು ಬೆಳೆಯುತ್ತವೆ. ಈ ಜಾತಿಯ ಆರ್ಕಿಡ್‌ನ ಹೂಗಳು ವಿಶೇಷವಾದ ಸಂಕೀರ್ಣತೆ ಹೊಂದಿದ್ದು, ದೊಡ್ಡಗಾತ್ರದಲ್ಲಿ ಇರುತ್ತವೆ. ಬಿಳಿ ಮತ್ತು ಹಳದಿ ಬಣ್ಣದ ಹೂಗಳು, ನೋಡಲು ಮಗುವಿನಂತೆ ಕಾಣುವುದಲ್ಲದೆ, ದಾಲಿcನ್ನಿಯಂತೆ ಸುವಾಸನೆ ಬೀರುತ್ತವೆ. ಮೇಣದಂತ ರಚನೆಯುಳ್ಳ ಈ ಹೂವುಗಳು ಚಳಿಗಾಲ ಮತ್ತು ಬೇಸಿಗೆಯಲ್ಲಿ ಅರಳುತ್ತಿರುತ್ತವೆ. ಒಂದು ಕೊಂಬೆಗೆ ಒಂದೇ ಹೂವು ಅರಳುವುದು ವಾಡಿಕೆ.
Related Articles
Advertisement