ಕೋಲ್ಕತ್ತಾ : ಪಶ್ಚಿಮ ಬಂಗಾಳದ ಚುನಾವಣೆ ದಿನಕ್ಕೊಂದು ಹೊಸ ತಿರುವು ಕಂಡುಕೊಳ್ಳುತ್ತಿದೆ. ನಂದಿಗ್ರಾಮ್ ನ ಬಿರುಲಿಯಾ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ.
ಬ್ಯಾನರ್ಜಿ ಅವರ ಎಡಗಾಲಿಗೆ ಗಾಯವಾಗಿದ್ದು ಅವರನ್ನು ಕೋಲ್ಕತ್ತಾದ ಎಸ್ ಎಸ್ ಕೆ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಮತಾ ಬ್ಯಾನರ್ಜಿ ಇದನ್ನು ದಾಳಿ ಎಂದು ಬಣ್ಣಿಸಿದ್ದು, ಈ ಘಟನೆ ಒಂದು ಪಿತೂರಿ ಎಂದು ಆರೋಪಿಸಿದ್ದರು, ಆದರೇ, ಈಗ ಈ ಘಟನೆ ಹೊಸ ತಿರುವನ್ನು ಪಡೆದುಕೊಂಡಿದೆ.
ಓದಿ : ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿದ ಎಂಟರ ಹರೆಯದ ಬಾಲಕ ದಾರುಣ ಬಲಿ!
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು, ಮಮತಾ ಬ್ಯಾನರ್ಜಿ ಅವರು ಹೇಳಿದ ಹಾಗೆ ಘಟನೆ ಸಂಭವಿಸಿಲ್ಲ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎನ್ ಐ ಗೆ ಹೇಳಿಕೊಂಡಿರುವುದು, ಈಗ ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆಯಲ್ಲಿ ರಾಜಕೀಯ ಹೈ ಡ್ರಾಮ ನಡೆಯುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿದೆ.
ಮಮತಾ ಬ್ಯಾನರ್ಜಿ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದ್ದ ಸ್ಥಳದಲ್ಲಿದ್ದ ವಿದ್ಯಾರ್ಥಿ ಸುಮನ್ ಮೈಥಿ, ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಲ್ಲಿಗೆ ಬಂದಾಗ ಅವರನ್ನು ನೋಡಲು ಅಪಾರ ಜನಸಮೂಹವು ಸೇರಿತ್ತು, ಅವರನ್ನು ನೋಡಲು ಜನರು ಸುತ್ತುವರೆದು ನಿಂತರು. ಈ ಸಮಯದಲ್ಲಿ ಯಾರೂ ಅವರನ್ನು ತಳ್ಳಲಿಲ್ಲ. ಅವರ ಕಾರು ಕೂಡ ನಿಧಾನವಾಗಿ ಚಲಿಸುತ್ತಿತ್ತು ಎಂದು ಸುಮನ್ ತಿಳಿಸಿದ್ದಾರೆ.
ಮತ್ತೊಬ್ಬ ಪ್ರತ್ಯಕ್ಷದರ್ಶಿ ಚಿತ್ತರಂಜನ್ ದಾಸ್, “ನಾನು ಅಲ್ಲಿದ್ದೆ, ಅವರು (ಮಮತಾ ಬ್ಯಾನರ್ಜಿ) ತನ್ನ ಕಾರಿನಲ್ಲಿ ಕುಳಿತಿದ್ದರು, ಆದರೆ ಬಾಗಿಲು ತೆರೆದಿತ್ತು” ಎಂದು ಹೇಳಿದರು. ಯಾರೂ ತಳ್ಳಲಿಲ್ಲ. ಆ ಸಮಯದಲ್ಲಿ ಬಾಗಿಲಿನ ಬಳಿ ಯಾರೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಓದಿ : ಟ್ರಕ್ – ಸ್ಕಾರ್ಪಿಯೋ ವಾಹನದ ಮಧ್ಯೆ ಭೀಕರ ಅಪಘಾತ: ಎಂಟು ಮಂದಿ ದುರ್ಮರಣ, ಮೂವರಿಗೆ ಗಾಯ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಕಾರಿನ ಬಳಿ ನಿಂತಾಗ 4 ರಿಂದ 5 ಜನರು ಅವರನ್ನು ತಳ್ಳಿದರು ಮತ್ತು ಅವರ ಕಾಲಿಗೆ ಗಾಯವಾಯಿತು ಎಂದು ಹೇಳಿದರು. ಘಟನೆ ನಡೆದ ಸಮಯದಲ್ಲಿ ಸ್ಥಳೀಯ ಪೊಲೀಸರು ಇರಲಿಲ್ಲ ಎಂದು ಮಮತಾ ಆರೋಪಿಸಿದ್ದರು. ಇದು ಅವರ ವಿರುದ್ಧದ ಪಿತೂರಿ ಮತ್ತು ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದರು.
ಸದ್ಯ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಎಸ್ ಎಸ್ ಕೆ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾನರ್ಜಿಗೆ ಚಿಕಿತ್ಸೆ ನೀಡಲು ಐವರು ಹಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಓದಿ : ಶಿವರಾತ್ರಿ ಮಹಿಮೆ! ಬೇಟೆಗಾಗಿ ಜಾಗರಣೆ ಮಾಡಿದ ಬೇಡನಿಗೆ ಒಲಿದ ಶಿವ