ಹೊಸದಿಲ್ಲಿ: ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪೆನಿಯು ಭಾರತದ ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊ ಳಿಸುವ ಪ್ರಕ್ರಿಯೆಯಲ್ಲಿ ತೊಡಗುವವರಿಗೆ ಹಣಕಾಸು ನೆರವು ನೀಡುತ್ತಿದೆ ಹಾಗೂ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದೆ ಎಂದು ಆರ್‌ಎಸ್‌ಎಸ್ ಮುಖವಾಣಿ “ಆರ್ಗನೈಸರ್’ ವಾರ ಪತ್ರಿಕೆ ಗಂಭೀರ ಆರೋಪ ಮಾಡಿದೆ.
“ದೊಡ್ಡ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಕ್ಕೆ ಜನರನ್ನು ಮತಾಂತರಗೊಳಿಸುತ್ತಿರುವ ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್(ಎಬಿಎಂ)ಗೆ ಅಮೆಜಾನ್ ಹಣಕಾಸು ನೆರವು ನೀಡುತ್ತಿದೆ. ಮತಾಂತರಗೊಳಿಸುವ ದೊಡ್ಡ ಯೋಜನೆಗಾಗಿ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಎಬಿಎಂ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿರುವ ಸಾಧ್ಯತೆಯಿದೆ,’ ಎಂದು “ಅಮೇಜಿಂಗ್ ಕ್ರಾಸ್ ಕನೆಕನ್’ ಹೆಸರಿನಲ್ಲಿ ಆರ್ಗನೈಸರ್ ಪತ್ರಿಕೆ ಕವರ್ ಸ್ಟೋರಿ ಬರೆದಿದೆ.
“ಈಶಾನ್ಯ ಭಾರತದಲ್ಲಿ 25,000 ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿರುವುದಾಗಿ ಎಬಿಎಂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಅಮೆಜಾನ್ ಕಂಪೆನಿಯು “ಈಸ್ಟ್ ಇಂಡಿಯಾ ಕಂಪೆನಿ 2.0′ ಆಗಿದೆ,’ ಎಂದು ದೂರಿದೆ.
“ತನ್ನ ಪರವಾದ ನೀತಿಗಳನ್ನು ಸರಕಾರ ರೂಪಿಸುವ ನಿಟ್ಟಿನಲ್ಲಿ ಅಮೆಜಾನ್ ಕಂಪೆನಿಯು ಕೋಟ್ಯಂತರ ರೂ. ಲಂಚ ನೀಡಿದೆ,’ ಎಂದು ಆರ್‌ಎಸ್‌ಎಸ್ ಹಿಂದಿ ಸಾಪ್ತಾಹಿಕ “ಪಾಂಚಜನ್ಯ’ ಕಳೆದ ವರ್ಷ ಆರೋಪಿಸಿತ್ತು.
ಬಲವಂತದ ಮತಾಂತರ ಕುರಿತು ರಚಿಸಲಾದ ಆಯೋಗಗಳು ಮತ್ತು ವಿವಿಧ ಘಟನೆಗಳು, ಅಕ್ರಮ ಮತಾಂತರವು ಧಾರ್ಮಿಕ ಸ್ವಾತಂತ್ರ್ಯ, ರಾಷ್ಟ್ರೀಯ ಭದ್ರತೆಗೆ ಅಪಾಯ ಎಂಬುದನ್ನು ನಿರೂಪಿಸಿದೆ. ಇದರಿಂದ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡಲೇ ಕಾನೂನು ಜಾರಿಗೊಳಿಸಬೇಕು.
-ಸುರೇಂದ್ರ ಜೈನ್ ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ
Related Articles