ನವದೆಹಲಿ: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ತೆರೆ ಕಂಡ ನಂತರ ಭರ್ಜರಿ ದಾಖಲೆಗಳನ್ನು ಬರೆದಿದೆ. ಈಗಾಗಲೇ ಕೆಜಿಎಫ್ 2 ಚಿತ್ರ ಒಂದು ಸಾವಿರ ಕೋಟಿ ರೂಪಾಯಿ ಕ್ಲಬ್ ಗೆ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೂ ಜಾಗತಿಕವಾಗಿ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರರಂಗದ ನಾಲ್ಕನೇ ಸಿನಿಮಾವಾಗಿದೆ.
ಇದನ್ನೂ ಓದಿ:ಪ್ರಸ್ತುತ ಒಡೆದಾಳುವ ನೀತಿಯ ರಾಜಕಾರಣ ಸ್ವಾಗತಾರ್ಹವಲ್ಲ: ಸಿಎಂ ಮಮತಾ ಬ್ಯಾನರ್ಜಿ
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಜರಂಗಿ ಭಾಯಿಜಾನ್ ಮತ್ತು ಸೀಕ್ರೇಟ್ ಸೂಪರ್ ಸ್ಟಾರ್ ಚಿತ್ರಗಳ ದಾಖಲೆಗಳನ್ನು ಮುರಿದಿದೆ. ಭಜರಂಗಿ ಭಾಯಿಜಾನ್ ಜಾಗತಿಕವಾಗಿ 969 ಕೋಟಿ ರೂಪಾಯಿ ಗಳಿಸಿದ್ದು, ಸೀಕ್ರೆಟ್ ಸೂಪರ್ ಸ್ಟಾರ್ ಜಾಗತಿಕವಾಗಿ 977 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.
ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಭಾರತದಲ್ಲಿಯೇ 900 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಜಾಗತಿಕವಾಗಿ 1,000 ಕೋಟಿ ಗಳಿಕೆ ದಾಟಿ ದಾಖಲೆ ಬರೆದಿದೆ.
ತೆಲುಗಿನ ಆರ್ ಆರ್ ಆರ್ ಸಿನಿಮಾ ಭಾರತದ ಬಾಕ್ಸಾಫೀಸ್ ನಲ್ಲಿ 900 ಕೋಟಿ ರೂಪಾಯಿ ಗಳಿಸಿದ್ದು, ಜಾಗತಿಕವಾಗಿ 1,120 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರರಂಗದ ಹತ್ತು ಸಿನಿಮಾಗಳ ವಿವರ ಇಲ್ಲಿದೆ.
1)ದಂಗಲ್ 2,024 ಕೋಟಿ ರೂಪಾಯಿ
2) ಬಾಹುಬಲಿ 2 (ಎಲ್ಲಾ ಭಾಷೆ ಸೇರಿ) 1810 ಕೋಟಿ ರೂಪಾಯಿ
3)ಆರ್ ಆರ್ ಆರ್ (ಎಲ್ಲಾ ಭಾಷೆ ಸೇರಿ) 1,120 ಕೋಟಿ
4) ಕೆಜಿಎಫ್ ಚಾಪ್ಟರ್ 2 (ಎಲ್ಲಾ ಭಾಷೆ ಸೇರಿ) 1,032 ಕೋಟಿ
5) ಬಜರಂಗಿ ಭಾಯಿಜಾನ್ 910 ಕೋಟಿ ರೂಪಾಯಿ
6) ಸೀಕ್ರೆಟ್ ಸೂಪರ್ ಸ್ಟಾರ್ 858 ಕೋಟಿ
7) ಪಿಕೆ- 743 ಕೋಟಿ
8) 2.0- 648 ಕೋಟಿ ರೂಪಾಯಿ
9) ಸಂಜು 585 ಕೋಟಿ ರೂಪಾಯಿ
10) ಸುಲ್ತಾನ್ 584 ಕೋಟಿ ರೂಪಾಯಿ