Advertisement

ಸುರಕ್ಷತಾ ಚೀಲ, ಹೆಲ್ಮೆಟ್‌ ಅಗತ್ಯ ..!

04:34 PM Oct 27, 2021 | Team Udayavani |

ನವದೆಹಲಿ: ನೀವು ಸ್ಕೂಟರ್‌, ಬೈಕ್‌ಗಳಲ್ಲಿ ಮಕ್ಕಳನ್ನೂ ಕೂರಿಸಿ ಕೊಂಡು ಪ್ರಯಾಣಿಸುತ್ತೀರಾ? ಹಾಗಿದ್ದರೆ ಇಲ್ಲಿ ಕೇಳಿ. ಮೋಟಾರು ಬೈಕ್‌ಗಳಲ್ಲಿ ಪ್ರಯಾಣಿ ಸುವ ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ಹೊಸ ನಿಯಮವೊಂ ದನ್ನು ಜಾರಿ ಮಾಡಲು ಚಿಂತನೆ ನಡೆಸಿದೆ.

Advertisement

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಕುರಿತ ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಸಾರ್ವಜನಿಕ ರಿಂದ ಅಭಿಪ್ರಾಯಗಳನ್ನು ಕೋರಿದೆ. 30 ದಿನ ಗಳೊಳಗಾಗಿ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿದೆ.

9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನ ದಲ್ಲಿ ಕೂರಿಸಿಕೊಂಡು ಹೋಗುವವರಿಗೆ ಈ ನಿಯಮ ಅನ್ವಯವಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಮಕ್ಕಳನ್ನು ಸುರಕ್ಷತಾ ಚೀಲ (ಸೇಪ್ಟಿ ಹಾರ್ನೆಸ್‌)ಗಳಲ್ಲೇ ಕುಳ್ಳಿರಿಸಿಕೊಂಡು ಕರೆದೊಯ್ಯಬೇಕು ಹಾಗೂ ಆ ಚೀಲದ ಬೆಲ್ಟ್ ಅನ್ನು ಚಾಲಕನ ದೇಹಕ್ಕೆ ಅಳವಡಿಸಿರಬೇಕು ಎಂದು ಕರಡು ನಿಯಮದಲ್ಲಿ ಉಲ್ಲೇ ಖೀಸಲಾಗಿದೆ. ಮಕ್ಕಳನ್ನು ಅಪಾಯದಿಂದ ರಕ್ಷಿಸುವ ನಿಟ್ಟಿ ನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:- ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ

ಸುರಕ್ಷತಾ ಚೀಲ ಹೇಗಿರಬೇಕು?: ಸುರಕ್ಷತಾ ಚೀಲವು ಹಗುರವಾ ಗಿದ್ದು, ವಾಟರ್‌ಪ್ರೂಫ್ ಮತ್ತು ಬಾಳಿಕೆ ಬರುವಂಥದ್ದಾಗಿರಬೇಕು. ಅಲ್ಲದೆ, ಅದನ್ನು ಸುಲಭವಾಗಿ ಹೊಂದಾಣಿಕೆ (ಅಡೆjಸ್ಟ್‌) ಮಾಡಲು ಸಾಧ್ಯವಾಗಬೇಕು. ಅದನ್ನು ಅಧಿಕ ಸಾಂದ್ರತೆ ಯುಳ್ಳ ಫೋಮ್‌ನೊಂದಿಗೆ ಗಟ್ಟಿಯಾದ ನೈಲಾನ್‌ ಅಥವಾ ಮಲ್ಟಿಫಿಲಮೆಂಟ್ ನೈಲಾನ್‌ನಿಂದ ನಿರ್ಮಿ ಸಿರ ಬೇಕು. 30 ಕೆಜಿಯಷ್ಟು ತೂಕ ವನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನೂ ಅದು ಹೊಂದಿರಬೇಕು.

Advertisement

ಹೊಸ ಪ್ರಸ್ತಾಪಗಳೇನು?

 9 ತಿಂಗಳಿಂದ 4 ವರ್ಷಗಳ ವಯೋಮಾನದ ಮಕ್ಕಳು ಕುಳಿತಿದ್ದರೆ, ಮೋಟಾರ್‌ಸೈಕಲ್‌ನ ವೇಗವು ಗಂಟೆಗೆ 40 ಕಿ.ಮೀ. ಮೀರಬಾರದು.

 ಹಿಂಬದಿ ಸವಾರರಾಗಿ ಕುಳಿತುಕೊಳ್ಳುವ ಮಕ್ಕಳು ಕ್ರ್ಯಾಶ್‌ ಹೆಲ್ಮೆಟ್‌ ಅಥವಾ ಬೈಸಿಕಲ್‌ ಹೆಲ್ಮೆಟ್‌ = ಧರಿಸಿರಬೇಕು

 ಮಗುವನ್ನು ಚಾಲಕನೊಂದಿಗೆ ಬೆಸೆದಿರುವಂತೆ ಮಾಡಲು ಸುರಕ್ಷತಾ ಚೀಲವನ್ನು ಬಳಸಬೇಕು. ಆ ಚೀಲದಲ್ಲಿ ಮಗುವನ್ನು ಕೂರಿಸಿ, ಅದರ ಬೆಲ್ಟ್ ಅನ್ನು ಚಾಲಕನ ಸೊಂಟಕ್ಕೆ ಕಟ್ಟಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next