Advertisement

ಶೀಘ್ರವೇ ನೀರಾವರಿ ಕಾಮಗಾರಿಗಳು ಆರಂಭ

09:04 AM Jul 26, 2020 | Suhan S |

ಗೋಕಾಕ: ನೀರಾವರಿ ಹಾಗೂ ರಸ್ತೆ ಕಾಮಗಾರಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯ ಮಾಡಲಾಗುತ್ತಿದ್ದು, ಇಡೀ ಗೋಕಾಕ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲೋಕೋಪಯೋಗಿ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗಾಗಿ 6 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರ- ಕಮ್‌- ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂ. ಕಾಮಗಾರಿಗಳು ಗೋಕಾಕ ಮತಕ್ಷೇತ್ರಕ್ಕೆ ಮಂಜೂರಾಗಿದ್ದು ಒಂದೆರಡು ದಿನಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದೆಂದು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಶಿಂಗಳಾಪುರ ಹಾಗೂ ಠಕ್ಕೆಯಲ್ಲಿ 35 ಲಕ್ಷ, ಶಿಂದಿಕುರಬೇಟ 30 ಲಕ್ಷ, ಧುಪದಾಳ 25 ಲಕ್ಷ, ಮಮದಾಪುರ 35 ಲಕ್ಷ, ಮಕ್ಕಳಗೇರಿ 20 ಲಕ್ಷ, ಹೂಲಿಕಟ್ಟಿ 20 ಲಕ್ಷ, ಅಕ್ಕತಂಗೇರಹಾಳ 20 ಲಕ್ಷ, ಅಂಕಲಗಿ 40 ಲಕ್ಷ, ಕುಂದರಗಿ 40 ಲಕ್ಷ ರೂ.ಗಳಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದಲ್ಲದೆ ಸಣ್ಣ ನೀರಾವರಿ ಇಲಾಖೆಯಿಂದ ಬೆಣಚಿನಮರಡಿ (ಕೊ) 1.80 ಕೋಟಿ, ಗುಜನಟ್ಟಿ 1.50 ಕೋಟಿ, ಕೈತನಾಳ ಹೊಸೂರ 2 ಕೋಟಿ, ಅಕ್ಕತಂಗೇರಹಾಳ 2 ಕೋಟಿ, ಸುಲದಾಳ 2ಕೋಟಿ, ದಾಸನಟ್ಟಿ 2 ಕೋಟಿ, ಹಿರೇನಂದಿ 1.50 ಕೋಟಿ, ಮಕ್ಕಳಗೇರಿ 2 ಕೋಟಿ ರೂ.ಗಳಲ್ಲಿ ಬಾಂದಾರ-ಕಮ್‌-ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next