Advertisement

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

11:52 PM Sep 24, 2022 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ ನಾಯಕರು ಯಾವುದೇ ದಾಖಲೆಗಳಿಲ್ಲದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ವಿಪಕ್ಷವಾಗಿ ಕೆಲಸ ಮಾಡಲು ಅವರು ನಾಲಾಯಕ್‌ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತವನ್ನು ಬಲಗೊಳಿಸಲಾಗಿದೆ. ಸರಕಾರ ಭ್ರಷ್ಟಾಚಾರ ನಡೆಸಿದ ಬಗ್ಗೆ ದಾಖಲೆಗಳು ಇದ್ದರೆ ಸಲ್ಲಿಸಿ ತನಿಖೆಗೆ ಒತ್ತಾಯಿಸಲಿ. ವಿನಾಕಾರಣ ಆಧಾರರಹಿತ ಆರೋಪ ಸರಿಯಲ್ಲ. ಗುತ್ತಿಗೆದಾರರು ಪ್ರಧಾನಿಯವರಿಗೆ ಸಲ್ಲಿಸಿರುವ ಪತ್ರ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇಂತಹ ಕಾರ್ಯಗಳಿಂದಾಗಿಯೇ ಕಾಂಗ್ರೆಸ್‌ ಅಸಮರ್ಥ ವಿಪಕ್ಷವಾಗಿದೆ ಎಂದರು.

ಯುಪಿಎ ಸರಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಅರ್ಕಾವತಿ ಸಹಿತ ಹಲವು ಅವ್ಯವಹಾರಗಳು ನಡೆದಿವೆ. ಡಿ.ಕೆ.ಶಿವಕುಮಾರ್‌ ಮೇಲೆ ಸಾಕಷ್ಟು ದೂರುಗಳಿದ್ದು, ಅವರು ಜೈಲಿಗೂ ಹೋಗಿ ಬಂದಿದ್ದಾರೆ. ಇವರು ಯಾವ ನೈತಿಕತೆ ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಗಳ ಬಗ್ಗೆ ಅಪಪ್ರಚಾರವೇ ಕಾಂಗ್ರೆಸ್‌ಗೆ ಮುಳುವಾಗಲಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next