ತೀರ್ಥಹಳ್ಳಿ: ವಿದ್ಯಾರ್ಥಿಗಳಿಗೆ ವಾರದ 6 ದಿನಗಳಲ್ಲೂ ಮೊಟ್ಟೆ ನೀಡಬೇಕೆಂದು ಸರ್ಕಾರ ಅದೇಶಿಸಿದ ಹಿನ್ನಲೆ ಪಟ್ಟಣದ ಸರ್ಕಾರಿ ಶಾಲೆಯೊಂದರಲ್ಲಿ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಆದರೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು 1 ಗಂಟೆಗೂ ಅಧಿಕ ಹೊತ್ತು ಮೊಟ್ಟೆಗಾಗಿ ತಟ್ಟೆ ಹಿಡಿದು ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಯಿತು.
ಹೌದು ತೀರ್ಥಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಅದರಲ್ಲೂ ಶಾಸಕ ಆರಗ ಜ್ಞಾನೇಂದ್ರ ಅವರು ದತ್ತು ಪಡೆದ ಶಾಲೆಯಲ್ಲಿ ಪೌಷ್ಟಿಕ ಆಹಾರವನ್ನು ನೀಡಲು ಉದ್ಘಾಟನಾ ಕಾರ್ಯಕ್ರಮ ಶೆ.25ರ ಬುಧವಾರ ಆಯೋಜನೆ ಮಾಡಲಾಗಿತ್ತು.
ಆದರೆ ಶಾಸಕರು ಹೊಸನಗರ ಕಾರ್ಯಕ್ರಮಕ್ಕೆ ಹೋಗಿದ್ದ ಕಾರಣ ಸಮಯದ ಅಭಾವದಿಂದ ಶಾಲೆಯ ಪೌಷ್ಟಿಕ ಆಹಾರದ ಉದ್ಘಾಟನೆ ಆಗಮಿಸಲಿಲ್ಲ. ಆದರೂ ಕೂಡ ಮಕ್ಕಳ ಬಗ್ಗೆ ವಿಶೇಷ ಕಾಳಜಿಯಿಂದ ದೂರವಾಣಿ ಮೂಲಕ ಶಾಸಕ ಕಾರ್ಯಕ್ರಮಕ್ಕೆ ಸಕಾಲಕ್ಕೆ ಬರಲು ಆಗುವುದಿಲ್ಲ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಕಾಯಿಸುವುದು ಬೇಡ. ನೀವು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಂತರ ಮಾಮೂಲಿ ಕಾರ್ಯಕ್ರಮದಂತೆ, ಪ್ರಾಸ್ತಾವಿಕ ನುಡಿ, ಭಾಷಣ ಎಂದು ಮಕ್ಕಳನ್ನು 1 ಗಂಟೆಗಳ ಕಾಲ ಕಾಯಿಸಲಾಯಿತು. 1 ಗಂಟೆಯ ಬದಲಾಗಿ 2 :15 ಕ್ಕೆ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಲಾಯಿತು.
ಸರಿ ಸುಮಾರು 1 ಗಂಟೆಗೂ ಅಧಿಕ ಕಾಲ ಮೊಟ್ಟೆಗಾಗಿ ಮಕ್ಕಳೆಲ್ಲರೂ ತಟ್ಟೆ ಹಿಡಿದು ಹಸಿವಿನಿಂದ ಕಾದು ಕುಳಿತಿದ್ದರು. ಈ ಸಮಯದಲ್ಲಿ ಭಾಷಣ ಬೇಕಾ ಎಂಬಂತೆ ಮಕ್ಕಳ ಮುಖದ ಭಾವನೆ ಹೇಳುತ್ತಿತ್ತು. ಇಂತಹ ಕಾರ್ಯಕ್ರಮದಲ್ಲಿ ಭಾಷಣ ಬೇಡ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿದೆ.