Advertisement

ದೇಗುಲದ ಅವ್ಯವಹಾರ: ಆರೋಪ

02:48 PM Nov 11, 2021 | Team Udayavani |

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಸುಮಾರು 500-600 ವರ್ಷಗಳ ಇತಿಹಾಸವಿರುವ ಶ್ರೀರಾಮ ಮಂದಿರ ದೇವಸ್ಥಾನದಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರೈತ ಮುಖಂಡ ಕಿರಂಗೂರು ಮೋಹನ್‌ ಕುಮಾರ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

Advertisement

ದೇವಾಲಯಕ್ಕೆ ರಾಜ್ಯದ ವಿವಿಧೆಡೆಗಳಿಂದ ಮನೆದೇವರ ಕುಟುಂಬಗಳಿವೆ. ರಾಜ್ಯ, ಹೊರ ರಾಜ್ಯಗಳಿಂದ ಬರುವ ಹಾಗೂ ವಿದೇಶದಲ್ಲೂ ಕೂಡ ಭಕ್ತರನ್ನು ಹೊಂದಿರುವ ಈ ದೇವಾಲಯವು ಅದರದೇ ಆದ ಬೆಲೆಬಾಳುವ ಜಮೀನು ಸರ್ವೆ ನಂ.1088, 649 ಹಾಗೂ ದೇವಾಲಯದ ಸುತ್ತ ತೆಂಗು, ಅಡಕೆ ಇನ್ನೂ ಕೆಲವು ಆದಾಯ ಬರುವ ಮರಗಿಡಗಳಿವೆ. ಭಕ್ತಾದಿಗಳು ದೇವರ ಹೆಸರಿನಲ್ಲಿ ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ, ನಗದನ್ನು ನೀಡುತ್ತಾರೆ.

ಅಕ್ರಮ ಖಾಸಗಿ ಟ್ರಸ್ಟ್‌ನಿಂದ ಅವ್ಯವಹಾರ: ಖಾಸಗಿ ಟ್ರಸ್ಟ್‌ ಮಾಡಿಕೊಂಡಿರುವವರು ಅಕ್ರಮ ಕೂಟ ಕಟ್ಟಿಕೊಂಡು ಇದನ್ನೆಲ್ಲ ದೋಚುತ್ತಿದ್ದಾರೆ. ಲೆಕ್ಕವಿಲ್ಲದೇ ಸರ್ಕಾರದ ಖಜಾನೆಗೆ ನಷ್ಟವುಂಟು ಮಾಡುತ್ತಿದ್ದಾರೆ. ಈ ಹಣದಲ್ಲೇ ಖಾಸಗಿ ಟ್ರಸ್ಟ್‌ ಮಾಡಿಕೊಂಡಿರುವವರು ಬಡ್ಡಿ, ಚೀಟಿ ಇನ್ನಿತರ ಅಕ್ರಮ ವ್ಯವಹಾರ ನಡೆಸುತ್ತಾ ಬಂದಿರುತ್ತಾರೆ. ಬರುವ ಭಕ್ತಾದಿಗಳಲ್ಲಿ ತಮ್ಮ ಹಿತಕಾಯುವವರಿಗೆ ಮಾತ್ರ ಕಾಣಿಕೆ ಕೈಯಲ್ಲಿ ನೀಡುವವರಿಗೆ ಪ್ರವೇಶ ಕಲ್ಪಿಸುತ್ತಾರೆ. ಸ್ಥಳೀಯರಿಗೆ ಅವಕಾಶ ನಿರಾಕರಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಸ್ಥಳೀಯರಿಗೆ ಬೆದರಿಕೆ: ಕಾಣಿಕೆ ರೂಪದಲ್ಲಿ ದೇವಾಲಯದ ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ರೂ. ಹಣವನ್ನು ಭಕ್ತಾದಿಗಳಿಂದ ಪೀಕುತ್ತಾರೆ. ಅದನ್ನು ತಮ್ಮ ಸ್ವಂತ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಭಕ್ತಾದಿಗಳು ಹಾಗೂ ದೇವಾಲಯದ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡುವ ಭಕ್ತಾದಿಗಳಿಗೆ ಬೆದರಿಕೆ ಹಾಕಿ ಹೊರ ಹಾಕುತ್ತಾರೆ. ಸ್ಥಳೀಯರು ದೇವಾಲಯಕ್ಕೆ ಹೋಗುವುದಕ್ಕೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.

ಖಾಸಗಿ ವ್ಯಕ್ತಿಗಳಿಂದ ದುರ್ಬಳಕೆ: ಶ್ರೀರಾಮ ದೇವಸ್ಥಾನದ ಹೆಸರಿನಲ್ಲಿರುವ ಸರ್ವೆ ನಂ.1088, 649ರ ಜಮೀನಿನ ಆದಾಯವನ್ನು ಲಪಟಾಯಿಸಿ ದ್ದಾರೆ. ತಮ್ಮ ಹೆಸರಿಗೆ ಜಮೀನನ್ನು ಮಾಡಿಸಿಕೊಳ್ಳಲು ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಖಾಸಗಿ ಟ್ರಸ್ಟ್‌ ವ್ಯಕ್ತಿಗಳು, ಕೆಲವು ಅಧಿ ಕಾರಿಗಳು ಶಾಮೀಲಾಗಿ ನಿರಂತರವಾಗಿ ಬರುವ ಆದಾಯವನ್ನು ಪಾಲು ಮಾಡಿಕೊಂಡಿರುವ ಶಂಕೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:- ಭಾರೀ ಮಳೆಗೆ ತತ್ತರಿಸಿದ ಚೆನ್ನೈ, ಜನಜೀವನ ಅಸ್ತವ್ಯಸ್ತ; ವಿಮಾನ ಸಂಚಾರ ರದ್ದು

ಜಮೀನು ವಶಕ್ಕೆ ಪಡೆಯದ ಅಧಿಕಾರಿಗಳು: ಕೋಟ್ಯಂತರ ರೂ.ಮೌಲ್ಯದ ಜಮೀನನ್ನು ವಶಕ್ಕೆ ಪಡೆಯದೇ ತಾಲೂಕು ಆಡಳಿತ ಮೀನಾಮೇಷ ಎಣಿಸುತ್ತಿದೆ. ಖಾಸಗಿ ವ್ಯಕ್ತಿಗಳು ದೇವಾಲಯದೊಳಗೆ ಉಳಿದುಕೊಂಡು ದೂರು ಕೊಟ್ಟವರ ಮೇಲೆ ಹಾಗೂ ಅಲ್ಲಿಗೆ ಹೋಗುವ ಭಕ್ತಾದಿಗಳಿಗೆ ಕಿರಿಕಿರಿ ಮಾಡುತ್ತಿ ದ್ದಾರೆ. ಅವರನ್ನು ಹೊರಗೆ ಕಳುಹಿಸಿ ಅರ್ಚಕರನ್ನು ನೇಮಕ ಮಾಡಿ, ತೆಂಗು, ಅಡಕೆ ಹಾಗೂ ಜಮೀನು ಮುಜರಾಯಿ ಇಲಾಖೆಯ ವಶಕ್ಕೆ ಪಡೆದು ಹರಾಜು ಪ್ರಕ್ರಿಯೆ ಮಾಡಿ ಬರುವ ಆದಾಯವನ್ನು ಸರ್ಕಾರದ ಖಜಾನೆಗೆ ಜಮಾ ಮಾಡಬೇಕಾದ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮಗ್ರ ತನಿಖೆಗೆ ಒತ್ತಾಯ: ಲೋಕಾಯುಕ್ತ ನ್ಯಾಯಾಲಯವು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಮಗ್ರ ತನಿಖೆ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಖಾಸಗಿ ಟ್ರಸ್ಟ್‌ ಮಾಡಿಕೊಂಡು ಕೋಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವವರ ಮೇಲೆ ಕ್ರಮ ಜರುಗಿಸ ಬೇಕು. ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಭಕ್ತರಿಗೆ ಮುಕ್ತ ಪ್ರವೇಶ ಸಿಗಬೇಕು. ದೇವಾಲಯಕ್ಕೆ ಬರುವ ಕಾಣಿಕೆ ರೂಪದ ಚಿನ್ನ, ಬೆಳ್ಳಿ, ನಗದು ಎಲ್ಲವನ್ನೂ ರಶೀದಿ ಮೂಲಕ ಸರ್ಕಾರದ ಖಜಾನೆಯಲ್ಲಿ ಜಮಾ ಆಗಬೇಕು. ದೇವಾಲಯದ ಹೆಸರಿನಲ್ಲಿ ಒಳಗೊಂಡಂತೆ ಇನ್ನೂ ಹೆಚ್ಚಿನ ಜಮೀನು ಇದ್ದರೆ ಅದನ್ನು ತನಿಖೆ ಮಾಡಿ ಇಲಾಖೆ ಸುಪರ್ದಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಖಾಸಗಿ ಟ್ರಸ್ಟ್‌ ಹೆಸರಿನಲ್ಲಿ ಲೂಟಿ ಆಗುತ್ತಿರುವುದ ರಿಂದ ಸರ್ಕಾರಕ್ಕೆ ಅಧಿಕಾರಿಗಳಿಂದ ನಷ್ಟವಾಗಿದೆ. ಖಾಸಗಿ ಟ್ರಸ್ಟ್‌ನವರಿಂದ ನಷ್ಟ ಕಟ್ಟಿಸಿಕೊಂಡು ಅವರ ಹಾಗೂ ಅಧಿಕಾರಿಗಳ ಮೇಲೆ ಧಾರ್ಮಿಕ ದತ್ತಿ ಇಲಾಖೆಯ ಕಾನೂನು ವ್ಯಾಪ್ತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಲೋಕಾ ಯುಕ್ತ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿ, ಪಾಂಡವಪುರ ಉಪವಿಭಾಗಾ ಧಿಕಾರಿ ಹಾಗೂ ಶ್ರೀರಂಗಪಟ್ಟಣ ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ.

 “ಶ್ರೀರಾಮಮಂದಿರ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿ ದ್ದರೂ ಕೆಲವರು ಖಾಸಗಿ ಟ್ರಸ್ಟ್‌ ಮಾಡಿ ಕೊಂಡು ದೇವಾಲಯದ ಆದಾಯ, ಆಸ್ತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಸಹ ಶಾಮೀಲಾಗಿರುವುದ ರಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೂರು ನೀಡಿದ್ದೇನೆ.” – ಮೋಹನ್‌ಕುಮಾರ್‌, ರೈತ ಮುಖಂಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next