Advertisement

ಕಬ್ಬಿಣದ ಅದಿರು ರಫ್ತು ಅವಕಾಶ: ಸುಪ್ರೀಂ  ಮೊರೆ ಹೋಗಲು ನಿರ್ಧಾರ

02:18 PM May 27, 2021 | Team Udayavani |

ಬೆಂಗಳೂರು: ರಾಜ್ಯದಿಂದ ವಿದೇಶಗಳಿಗೆ ಕಬ್ಬಿಣದ ಅದಿರು ರಫ್ತು ಮಾಡಲು ಹೇರ ಲಾಗಿರುವ ನಿರ್ಬಂಧ ತೆರವುಗೊಳಿಸುವ ಸಂಬಂಧ ಸುಪ್ರೀಂಕೋರ್ಟ್‌ಮೊರೆ ಹೋಗಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Advertisement

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ ಅವರುರಾಜ್ಯದಿಂದ ಕಬ್ಬಿಣದ ಅದಿರು ರಫ್ತು ಮಾಡಲು ತಾತ್ವಿಕ ಒಪ್ಪಿಗೆನೀಡಿರುವುದರಿಂದ ಈ ಕ್ರಮಕ್ಕೆ ಮುಂದಾಗಿದೆ.ವಿಕಾಸಸೌಧದಲ್ಲಿ ಬುಧವಾರ ಗಣಿ ಸಚಿವಮುರಗೇಶ್‌ ನಿರಾಣಿ ಅವರು ಪ್ರಹ್ಲಾದ್‌ ಜೋಶಿಅವರೊಂದಿಗೆ ವರ್ಚ್ಯೂವಲ್‌ ಸಭೆ ನಡೆಸಿ ರಾಜ್ಯದಿಂದಕಬ್ಬಿ ಣದ ಅದಿರು ರಫ್ತು ನಿರ್ಬಂಧ ಹಿನ್ನೆಲೆ ಯಲ್ಲಿರಾಜ್ಯದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟದ ಬಗ್ಗೆಮನವರಿಕೆ ಮಾಡಿಕೊಟ್ಟರು.

ಈ ವಿಚಾರದಲ್ಲಿಸಂಬಂಧಪಟ್ಟವರ ಜತೆ ಮಾತನಾಡಿ ಸಹಕಾರ ನೀಡುವ ಭರವಸೆ ದೊರೆತಿದೆ.ಸಭೆಯ ನಂತರ ಮಾತನಾಡಿದ ಮುರುಗೇಶ್‌ ನಿರಾಣಿ, ಉನ್ನತಾಧಿಕಾರಿಗಳ ಸಮಿತಿಯ ಅಭಿಪ್ರಾಯ ಪಡೆದು ಕಬ್ಬಿಣ ಅದಿರು ರಫ್ತು ಮಾಡಲುವಿಧಿಸಿ ರುವ ನಿರ್ಬಂಧ ತೆರವು ಮಾಡುವಂತೆ ನ್ಯಾಯಾಲಯಕ್ಕೆ ಮನವಿಮಾಡಲಾಗು ವುದು ಎಂದು ಹೇಳಿದರು.

ವಿದೇಶಕ್ಕೆ ಕಬ್ಬಿಣದ ಅದಿರು ರಫ್ತು ಮಾಡುವ ವಿಚಾರದಲ್ಲಿ ಕೇಂದ್ರದ ಅಭಿಪ್ರಾಯ ಕೇಳಲಾಗಿತ್ತು. ಕೇಂದ್ರದಿಂದ ಯಾವುದೇ ತಕರಾರು ಇಲ್ಲ ಎಂದುತಿಳಿಸಲಾಗಿದೆ. ಕೇಂದ್ರ ಸರ್ಕಾರವು ನಮಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ನ್ಯಾಯಾಲಯದಲ್ಲಿ ಕಾನೂನು ನೆರವು ನೀಡುವುದಾಗಿ ಪ್ರಹ್ಲಾದಜೋಶಿ ಅವರು ತಿಳಿಸಿದ್ದಾರೆ. ನಮ್ಮ ನಿಲುವು ಸುಪ್ರೀಂ ಕೋರ್ಟ್‌ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next