Advertisement
Related Articles
Advertisement
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಘೋಡ್‌ಬಂದರ್ ಕನ್ನಡ ಅಸೋಸಿಯೇಶನ್ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಡಿ. ಸಾಲ್ಯಾನ್ ಅವರು ಮಾತನಾಡಿ, ಇಂತಹ ಉತ್ತಮ ಕಾರ್ಯಗಳಿಂದ ಕಲಾವಿದರಿಗೆ ಮತ್ತು ಸಮಾಜ ಸೇವಕರಿಗೆ ಪ್ರೇರಣೆ ದೊರೆಯುತ್ತದೆ ಎಂದು ಹೇಳಿದರು.ನವಿಮುಂಬಯಿ ಹೊಟೇಲ್ ಓನರ್ ಅಸೋಸಿಯೇಶನ್ ಉಪಾಧ್ಯಕ್ಷ ಜಯಪ್ರಕಾಶ್ ಆರ್. ಶೆಟ್ಟಿ, ಹೆಗ್ಗಡೆ ಸೇವಾ ಸಂಘ ಮುಂಬಯಿ ಉಪಾಧ್ಯಕ್ಷ ಸುರೇಶ್ ಎಸ್. ಹೆಗ್ಡೆ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ಶ್ರೀ ಶನೀಶ್ವರ ಮಂದಿರ ನೆರೂಲ್ ಉಪಾಧ್ಯಕ್ಷ ಪ್ರಭಾಕರ ಹೆಗ್ಡೆ, ಉದ್ಯಮಿಗಳಾದ ಶ್ರೀನಾಥ್ ಶೆಟ್ಟಿ, ಜಗದೀಶ್ ಶೆಟ್ಟಿ ಮುಲ್ಕಿ, ರತ್ನಾಕರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ರವಿ ಕೋಟ್ಯಾನ್ ಶುಭಹಾರೈಸಿದರು.
ಥಾಣೆ ಬಂಟ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕ ಲಕ್ಷ್ಮಣ್ ಮಣಿಯಾಣಿ, ಯಕ್ಷಗಾನ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು, ಪತ್ರಕರ್ತ ಲೇಖಕ ಶ್ರೀಧರ ಉಚ್ಚಿಲ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮ ಸಂಯೋಜಕ ರವಿ ಎಸ್. ಹೆಗ್ಡೆ ಹೆರ್ಮುಂಡೆ ವಂದಿಸಿದರು. ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪೆರ್ಡೂರು ಮೇಳದ ಕಲಾವಿದರಿಂದ ಅಹಂ ಬ್ರಹ್ಮಾಸ್ಮಿ ಯಕ್ಷಗಾನ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು, ಸಾಹಿತ್ಯಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸುರೇಂದ್ರ ಕುಮಾರ್ ಹೆಗ್ಡೆ ಅವರ ಬಗ್ಗೆ ಬರೆಯಲು ಹೋದರೆ ಬಹುದೊಡ್ಡ ಗ್ರಂಥವನ್ನೇ ರಚಿಸಬಹುದು. ಅವರ ಬಗ್ಗೆ ಪಿಎಚ್‌ಡಿ ಮಾಡಬಹುದಾದಷ್ಟು ಸಂಗ್ರಹವಿದೆ. ಆದರೆ ನಾನು ನನ್ನ ಕೃತಿಯಲ್ಲಿ ಅವರ ಸ್ವಲ್ಪ ವಿಷಯಗಳನ್ನು ಮಾತ್ರ ಓದುಗರ ಮುಂದೆ ತೆರೆದಿಟ್ಟಿದ್ದೇನೆ. ಇದು ನನ್ನ ಮತ್ತು ಅವರ ಸ್ನೇಹ-ಪ್ರೀತಿಗೆ ನೀಡಿದ ಗೌರವವಾಗಿದೆ. ಕೃತಿಯನ್ನು ಎಲ್ಲರು ಓದಿ ಅವರ ಸಾಧನೆಗಳನ್ನು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ.-ಶ್ರೀಧರ ಉಚ್ಚಿಲ್, ಕೃತಿಕಾರರು, ಪತ್ರಕರ್ತರು ಸುರೇಂದ್ರ ಕುಮಾರ್ ಹೆಗ್ಡೆ ಅವರು ಸಾಧನೆ ಮಾಡದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಅವರು ತಮ್ಮ ಪ್ರತಿಭೆಯನ್ನು ತೋರಿಸಿದ ವ್ಯಕ್ತಿ. ಅವರ ಹಲವು ಸಾಧನೆಗಳನ್ನು ಓದುಗರ ಮುಂದಿಟ್ಟು ಉಚ್ಚಿಲ್ ಅವರು ಹೃದಯ ಗೆದ್ದಿದ್ದಾರೆ. ಇದು ನಿಜವಾಗಿಯೂ ಒಂದು ಅಪರೂಪದ ಅಪರಂಜಿಯಾಗಿದೆ. ಪ್ರತಿಯೊಬ್ಬರು ಓದಿ ಸಂಗ್ರಹಿಸಿಡತಕ್ಕ ಕೃತಿ ಇದಾಗಿದೆ. ಸುರೇಂದ್ರ ಕುಮಾರ್ ಹೆಗ್ಡೆ ಅವರು ಸಂಘಟಕರಾಗಿ, ಸಾಹಿತಿಯಾಗಿ, ರಂಗಕರ್ಮಿಯಾಗಿ, ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ. ಅವರು ಇತರರಿಗೆ ಮಾದರಿ ವ್ಯಕ್ತಿಯಾಗಿದ್ದಾರೆ.
-ದಯಾ ಸಾಗರ್ ಚೌಟ, ಪತ್ರಕರ್ತರು ಚಿತ್ರ-ವರದಿ: ಸುಭಾಶ್ ಶಿರಿಯಾ