Advertisement

ಮಿಸ್‌ ಫ್ರಾನ್ಸ್‌ಗೆ ಭುವನ ಸುಂದರಿ ಕಿರೀಟದ ಗರಿಮೆ

11:01 AM Jan 31, 2017 | Team Udayavani |

ವಾಷಿಂಗ್ಟನ್‌: ಫ್ರಾನ್ಸ್‌ನ ಚೆಲುವೆ ಐರಿಸ್‌ ಮಿಟ್ಟೆನಾಯೆರೆ 2017ರ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಟ್ಟೆನಾಯೆರೆ ದಂತ ವೈದ್ಯ ವಿದ್ಯಾರ್ಥಿಯಾಗಿದ್ದಾರೆ. ವಿಶ್ವದ ವಿವಿಧ ದೇಶಗಳ 85 ಸ್ಪರ್ಧಿಗಳನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಅಂತಿಮ ಹಂತದ ಸ್ಪರ್ಧೆಗಳು ನಡೆದವು.

Advertisement

ಐರಿಸ್‌ ಅವರು 2010ರಲ್ಲಿ ಹೈಟಿಯಲ್ಲಿ ನಡೆದ ಭೂಕಂಪದಲ್ಲಿ ಪಾರಾಗಿದ್ದ ಘಟನೆಯನ್ನು ಮನಮುಟ್ಟುವಂತೆ ತೀರ್ಪುಗಾರರಿಗೆ ವಿವರಿಸಿದರು. ಜತೆಗೆ ವಿಶ್ವಾದ್ಯಂತ ಇರುವ ವಲಸಿಗರ ಸಮಸ್ಯೆ ಮತ್ತು ಇತರ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗೆಗಿನ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದರು. ಮಿಸ್‌ ಹಯಾತಿ ಮೊದಲನೇ ರನ್ನರ್‌ ಅಪ್‌ ಮತ್ತು ಮಿಸ್‌ ಕೋಲಂಬಿಯಾ ಎರಡನೇ ರನ್ನರ್‌ ಅಪ್‌ ಎನಿಸಿಕೊಂಡಿದ್ದಾರೆ.

ಈ ಬಾರಿ ಸ್ಪರ್ಧೆಯ ನಿಯಮದಲ್ಲಿ ಸ್ಪಲ್ಪ ಬದಲಾವಣೆ ಮಾಡಲಾಗಿದ್ದು, ಅಂತಿಮ ಸುತ್ತಿನಲ್ಲಿ 13 ಮಂದಿ ಸ್ಪರ್ಧಿಗಳು ಫೈನಲ್‌ ತಲುಪಿದ್ದರು. ಭಾರತದ ವತಿಯಿಂದ ಸ್ಪರ್ಧಿಸಿದ್ದ ಬೆಂಗಳೂರು ಮೂಲದ ರೋಷ್ಮಿತಾ ಹರಿಮೂರ್ತಿ ಅವರು ಅಂತಿಮ ಸುತ್ತು ಪ್ರವೇಶಿಸುವಲ್ಲಿ ವಿಫ‌ಲರಾಗಿದ್ದರು. ಕಳೆದ 17 ವರ್ಷಗಳಿಂದ ಭಾರತದ ಸ್ಪರ್ಧಿ ಭುವನ ಸುಂದರಿ ಕಿರೀಟವನ್ನು ಗೆದ್ದುಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next