Advertisement

ವಿಂಡೀಸ್‌ ಆರಂಭಿಕರ ವಿಶ್ವದಾಖಲೆ

09:03 PM May 06, 2019 | Team Udayavani |

ಡಬ್ಲಿನ್‌: ಆರಂಭಿಕರಾದ ಜಾನ್‌ ಕ್ಯಾಂಬೆಲ್‌-ಶೈ ಹೋಪ್‌ ನಿರ್ಮಿಸಿದ ವಿಶ್ವದಾಖಲೆಯ ಸಾಹಸದಿಂದ ಏಕದಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 196 ರನ್ನುಗಳ ಭಾರೀ ಅಂತರದಿಂದ ಐರ್ಲೆಂಡ್‌ಗೆ ಸೋಲುಣಿಸಿದೆ.

Advertisement

ಕ್ಯಾಂಬೆಲ್‌-ಹೋಪ್‌ ಮೊದಲ ವಿಕೆಟಿಗೆ ಸರ್ವಾಧಿಕ 365 ರನ್‌ ಪೇರಿಸಿ ಮೆರೆದರು. ಇದರೊಂದಿಗೆ ಜಿಂಬಾಬ್ವೆ ಎದುರಿನ 2018ರ ಬುಲವಾಯೊ ಪಂದ್ಯದಲ್ಲಿ ಪಾಕಿಸ್ಥಾನದ ಓಪನರ್‌ಗಳಾದ ಇಮಾಮ್‌ ಉಲ್‌ ಹಕ್‌-ಫ‌ಕಾರ್‌ ಜಮಾನ್‌ 304 ರನ್‌ ಒಟ್ಟುಗೂಡಿಸಿದ ವಿಶ್ವದಾಖಲೆ ಪತನಗೊಂಡಿತು. ಇದು ಏಕದಿನದಲ್ಲಿ ಮೊದಲ ವಿಕೆಟಿಗೆ ದಾಖಲಾದ 2ನೇ ತ್ರಿಶತಕದ ಜತೆಯಾಟ.

ರವಿವಾರ ರಾತ್ರಿಯ ಮುಖಾಮುಖೀಯಲ್ಲಿ ವೆಸ್ಟ್‌ ಇಂಡೀಸ್‌ 3 ವಿಕೆಟಿಗೆ 381 ರನ್‌ ಪೇರಿಸಿದರೆ, ಐರ್ಲೆಂಡ್‌ 34.4 ಓವರ್‌ಗಳಲ್ಲಿ 185ಕ್ಕೆ ಕುಸಿಯಿತು. ಕ್ಯಾಂಬೆಲ್‌ 179 ರನ್‌ (137 ಎಸೆತ, 15 ಬೌಂಡರಿ, 6 ಸಿಕ್ಸರ್‌), ಹೋಪ್‌ 170 ರನ್‌ (152 ಎಸೆತ, 22 ಬೌಂಡರಿ, 2 ಸಿಕ್ಸರ್‌) ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next