Advertisement

ಇ ಕ್ಯಾಟರಿಂಗ್ ಸೇವೆ ನಾಳೆಯಿಂದ ಪುನಾರಾಂಭ : IRCTC

12:21 PM Jan 31, 2021 | Team Udayavani |

ನವ ದೆಹಲಿ : ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಮ್ ಕಾರ್ಪೋರೇಷನ್ ( ಐ ಆರ್ ಸಿ ಟಿ ಸಿ) ತನ್ನ ಇ ಕ್ಯಾಟರಿಂಗ್ ಸೇವೆಗಳನ್ನು ಪುನರಾರಂಭಿಸಲು ಸಜ್ಜಾಗಿದೆ.

Advertisement

ಓದಿ : ವಿದ್ಯಾರ್ಥಿಗಳಲ್ಲಿಸಾಮಾಜಿಕ ಜಾಲತಾಣದಲ್ಲಿನ ಕಳೆದುಹೋಗುವ ಭಯ ಕಡಿಮೆ ಮಾಡುವುದು ಹೇಗೆ?

ಕೋವಿಡ್ ಕಾರಣದಿಂದಾಗಿ ಸುಮಾರು ಒಂದು ವರ್ಷ ಸ್ಥಗಿತಗೊಂಡಿದ್ದ ಇ ಕ್ಯಾಟರಿಂಗ್ ಸೇವೆಯನ್ನು ನಾಳೆ(ಫೆ. 1) ಯಿಂದ ಪ್ರಾರಂಭಿಸಲಾಗುತ್ತಿದೆ.

ಐ ಆರ್ ಸಿ ಟಿ ಸಿ ಪ್ರಯಾಣಿಕರಿಗೆ ಸುಲಭ ಸೌಲಭ್ಯಕ್ಕಾಗಿ 2014ರಲ್ಲಿ ಈ ಸೇವೆಯನ್ನು ಆರಂಭಿಸಿತ್ತು. ಈ ಸೇವೆಯನ್ನು ರೈಲು ಪ್ರಯಾಣಿಕರು, “ಫುಡ್ ಆನ್ ಟ್ರ್ಯಾಕ್” ಅಪ್ಲಿಕೇಶನ್ ಮೂಲಕ ಅಥವಾ ಐ ಆರ್ ಸಿ ಟಿ ಸಿ ಯ ಅಧಿಕೃತ ವೆಬ್ ಸೈಟ್ WWW.ecatering.irctc.com ನಲ್ಲಿಯೂ ಕೂಡ ಪಡೆಯಬಹುದು ಎಂದು ಹೇಳಿದೆ.

ಓದಿ : ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲಿದೆ ನೆಟ್ ಪ್ಲಿಕ್ಸ್ ..!?

Advertisement

“ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ರೈಲ್ವೆ ಸ್ಥಗಿತಗೊಳಿಸಿದ್ದ ಇ-ಕ್ಯಾಟರಿಂಗ್ ಸೇವೆಯನ್ನು ನಾಳೆ (ಫೆ 1) ಯಿಂದ ಪುನರಾರಂಭಿಸಲಿದೆ. ಪ್ರಯಾಣಿಕರಿಗೆ ಉತ್ತಮ ಮತ್ತು ಆದ್ಯತೆಯ ಸೇವೆಯನ್ನು ಒದಗಿಸಲು ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದರ ಮೂಲಕ ಈ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ” ರೈಲ್ವೆ ಸಚಿವಾಲಯವು ಹಿಂದಿಯಲ್ಲಿ ಟ್ವೀಟ್ ಮಾಡಿದೆ.

ಆರಂಭದ ಹಂತದಲ್ಲಿ ನವ ದೆಹಲಿ, ಲಕ್ನೋ, ಪಾಟ್ನಾ, ಸೂರತ್, ಭೋಪಾಲ್, ಅಹಮದಬಾದ್, ಪುಣೆ, ವಿಜಯವಾಡ, ಎರ್ನಾಕುಲಮ್, ಉಜೈನ್, ಪನ್ವೆಲ್ ಹಾಗೂ ಹೌರಾ ರೈಲ್ವೇ ಸ್ಟೇಷನ್ ಗಳನ್ನೊಳಗೊಂಡು ದೇಶದಾದ್ಯಂತ 62 ಸ್ಟೇಷನ್ ಗಳಲ್ಲಿ ಇ ಕ್ಯಾಟರಿಂಗ್ ನ್ನು ಪ್ರಾರಂಭಿಸಲಾಗುತ್ತಿದೆ.

 ಐ ಆರ್ ಸಿ ಟಿ ಸಿ ಇ ಕ್ಯಾಟರಿಂಗ್ ಸೇವೆಯನ್ನು ಪಡೆಯುವುದು ಹೇಗೆ..?

* ಐ ಆರ್ ಸಿ ಟಿ ಸಿ ಇ ಯ ಅಧಿಕೃತ ವೆಬ್ ಸೈಟ್(WWW.ecatering.irctc.com) ಮೂಲಕ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ·    * ಟೆಲಿಫೋನ್ ಮೂಲಕ ಕೂಡ ಸೇವೆಯನ್ನು ಪಡೆಯಬಹುದು. 1323 ನಂಬರ್ ಗೆ ಕರೆ ಮಾಡುವುದರ ಮೂಲಕ  ಐ ಆರ್ ಸಿ ಟಿ ಸಿ ಇ ಕ್ಯಾಟರಿಂಗ್ ಸೇವೆಯನ್ನು ಪಡೆಯಬಹುದಾಗಿದೆ.

*ಐ ಆರ್ ಸಿ ಟಿ ಸಿ ಯ ಅಪ್ಲಿಕೇಶನ್ “ಫುಡ್ ಆನ್ ಟ್ರ್ಯಾಕ್” ನ ಮೂಲಕವೂ ಪ್ರಯಾಣಿಕರಿಗೆ ಈ ಸೇವೆ ಲಭ್ಯವಿದೆ.

* ಕ್ಯಾಶ್ ಆನ್ ಡೆಲಿವರಿ ಸೌಲಭ್ಯವು ಕೂಡ ಲಭ್ಯವಿದೆ.

ಓದಿ : “ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಯಂತ್ರಿಸಲು ಹೊಸ ತಂತ್ರ” : ಫೇಸ್ ಬುಕ್

 

 

Advertisement

Udayavani is now on Telegram. Click here to join our channel and stay updated with the latest news.

Next