Advertisement

ಇರಾನಿ ಕಪ್‌: ಶೇಷ ಭಾರತ ತಂಡಕ್ಕೆ ಮಯಾಂಕ್​ ಅಗರ್ವಾಲ್​ ನಾಯಕ

11:23 PM Feb 26, 2023 | Team Udayavani |

ಹೊಸದಿಲ್ಲಿ: “ಇರಾನಿ ಕಪ್‌’ ಕ್ರಿಕೆಟ್‌ ಪಂದ್ಯದಿಂದ ಎರಡು ಸುದ್ದಿ ಗಳು ಬಿತ್ತರಗೊಂಡಿವೆ. ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಶೇಷ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಈ ತಂಡದ ಸದಸ್ಯ, ಮುಂಬಯಿಯ ಇನ್‌ಫಾರ್ಮ್ ಬ್ಯಾಟರ್‌ ಸರ್ಫರಾಜ್ ಖಾನ್‌ ಎಡಗೈ ಬೆರಳಿನ ಗಾಯಕ್ಕೆ ಸಿಲುಕಿದ ಕಾರಣ ಈ ಪಂದ್ಯದಿಂದ ಬೇರ್ಪಟ್ಟಿದ್ದಾರೆ.

Advertisement

ಗಾಯದ ಕಾರಣ ರವಿವಾರ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಅಭ್ಯಾಸದಿಂದ ಸರ್ಫರಾಜ್ ಹೊರಗುಳಿದಿದ್ದರು. ಸ್ವಲ್ಪವೇ ಹೊತ್ತಿನಲ್ಲಿ ಅವರು ಪಂದ್ಯ ದಿಂದ ಬೇರ್ಪಟ್ಟ ಸುದ್ದಿಯನ್ನು ಪ್ರಕಟಿಸಲಾಯಿತು. ಸಂಜೆ ವೇಳೆ ನಾಯಕರ ಆಯ್ಕೆ ನಡೆಯಿತು.

ಕಳೆದ ಸಾಲಿನ ಪಂದ್ಯ
ಇದು ಕಳೆದ ಸಾಲಿನ ಇರಾನಿ ಕಪ್‌ ಪಂದ್ಯವಾಗಿದ್ದು, ಅಂದಿನ ರಣಜಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ಧ ನಡೆಯಲಿದೆ. ಕೀಪರ್‌ ಹಿಮಾಂಶು ಮಂತ್ರಿ ಈ ತಂಡದ ನಾಯಕರಾಗಿದ್ದಾರೆ.

ಮೂಲ ವೇಳಾಪಟ್ಟಿಯಂತೆ ಈ ಮುಖಾಮುಖಿ ಇಂದೋರ್‌ನಲ್ಲಿ ಏರ್ಪಡಬೇಕಿತ್ತು. ಆದರೆ ಭಾರತ- ಆಸ್ಟ್ರೇಲಿಯ ನಡುವಿನ 3ನೇ ಟೆಸ್ಟ್‌ ಪಂದ್ಯ ಧರ್ಮಶಾಲಾದಿಂದ ಇಂದೋ ರ್‌ಗೆ ಸ್ಥಳಾಂತರಗೊಂಡಿತು. ಈ ಟೆಸ್ಟ್‌ ಪಂದ್ಯ ಕೂಡ ಮಾ. ಒಂದರಂದೇ ಆರಂಭಗೊಳ್ಳಲಿದೆ. ಹೀಗಾಗಿ ಇರಾನಿ ಕಪ್‌ ಪಂದ್ಯದ ಆತಿಥ್ಯ ಗ್ವಾಲಿಯರ್‌ ಪಾಲಾಯಿತು.

ಇರಾನಿ ಕಪ್‌ ತಂಡಗಳು
ಶೇಷ ಭಾರತ ತಂಡ:
ಮಾಯಾಂಕ್‌ ಅಗರ್ವಾಲ್‌ (ನಾಯಕ), ಸುದೀಪ್‌ ಕುಮಾರ್‌ ಘರಾಮಿ, ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಹಾರ್ವಿಕ್‌ ದೇಸಾಯಿ, ಮುಕೇಶ್‌ ಕುಮಾರ್‌, ಅಜಿತ್‌ ಸೇಥ್‌, ಚೇತನ್‌ ಸಕಾರಿಯಾ, ನವದೀಪ್‌ ಸೈನಿ, ಉಪೇಂದ್ರ ಯಾದವ್‌, ಮಾಯಾಂಕ್‌ ಮಾರ್ಕಂಡೆ, ಸೌರಭ್‌ ಕುಮಾರ್‌, ಆಕಾಶ್‌ ದೀಪ್‌, ಬಾಬಾ ಇಂದ್ರಜಿತ್‌, ಪುಲ್ಕಿತ್‌ ನಾರಂಗ್‌, ಯಶ್‌ ಧುಲ್‌.

Advertisement

ಮಧ್ಯ ಪ್ರದೇಶ:
ಹಿಮಾಂಶು ಮಂತ್ರಿ (ನಾಯಕ), ರಜತ್‌ ಪಾಟೀದಾರ್‌, ಯಶ್‌ ದುಬೆ, ಹರ್ಷ ಗಾವಿ, ಶುಭಂ ಶರ್ಮ, ವೆಂಕಟೇಶ್‌ ಅಯ್ಯರ್‌, ಅಕ್ಷತ್‌ ರಘುವಂಶಿ, ಅಮನ್‌ ಸೋಲಂಕಿ, ಕುಮಾರ್‌ ಕಾರ್ತಿ ಕೇಯ, ಸಾರಾಂಶ್‌ ಜೈನ್‌, ಆವೇಶ್‌ ಖಾನ್‌, ಅಂಕಿತ್‌ , ಗೌರವ್‌ ಯಾದವ್‌, ಅನುಭವ್‌ ಅಗರ್ವಾಲ್‌, ಮಿಹಿರ್‌ ಹಿರ್ವಾನಿ.

Advertisement

Udayavani is now on Telegram. Click here to join our channel and stay updated with the latest news.

Next