Advertisement

ಇರಾನಿ ಕಪ್‌ ಪಂದ್ಯ: ಶೇಷ ಭಾರತ-ಸೌರಾಷ್ಟ್ರ ಸೆಣಸಾಟ

10:37 PM Sep 30, 2022 | Team Udayavani |

ರಾಜ್‌ಕೋಟ್‌: ರಣಜಿ ಚಾಂಪಿಯನ್‌ ವಿರುದ್ಧ ಆಡಲಾಗುವ “ಇರಾನಿ ಕಪ್‌’ ಕ್ರಿಕೆಟ್‌ ಪಂದ್ಯ ಮತ್ತೆ ಆರಂಭಗೊಂಡಿದೆ.

Advertisement

ಶೇಷ ಭಾರತವನ್ನು (ರೆಸ್ಟ್‌ ಆಫ್ ಇಂಡಿಯಾ) ಎದುರಾಳಿಯಾಗಿ ಹೊಂದಿರುವ ಈ ದೇಸಿ ಕ್ರಿಕೆಟ್‌, ಕೋವಿಡ್‌ನಿಂದಾಗಿ ಹಿಂದಿನೆರಡು ವರ್ಷ ನಡೆದಿರಲಿಲ್ಲ . ಶನಿವಾರದಿಂದ ರಾಜ್‌ಕೋಟ್‌ನಲ್ಲಿ 2022ನೇ ಆವೃತ್ತಿಯ ಪಂದ್ಯ ನಡೆಯಲಿದೆ.

ಆದರೆ ಇಲ್ಲಿ ಶೇಷ ಭಾರತಕ್ಕೆ ಎದುರಾಗುವುದು 2021-22ರ ರಣಜಿ ಚಾಂಪಿಯನ್‌ ಮಧ್ಯಪ್ರದೇಶವಲ್ಲ, ಇದಕ್ಕೂ ಹಿಂದಿನ 2019-20ರ ಸೀಸನ್‌ನಲ್ಲಿ ರಣಜಿ ಪ್ರಶಸ್ತಿ ಜಯಿಸಿದ್ದ ಸೌರಾಷ್ಟ.

ಪೂಜಾರ ಆಡುತ್ತಾರೆ
ಸೌರಾಷ್ಟ್ರ ತಂಡದಲ್ಲಿ ಅನುಭವಿ ಚೇತೇಶ್ವರ್‌ ಪೂಜಾರ ಆಡುತ್ತಿರುವುದೊಂದು ವಿಶೇಷ. ಇಂಗ್ಲಿಷ್‌ ಕೌಂಟಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಪೂಜಾರ ಮತ್ತೆ ಟೆಸ್ಟ್‌ ಇಮೇಜ್‌ ಗಳಿಸಲು ಈ ಪಂದ್ಯ ನೆರವಾಗಬೇಕಿದೆ. ತವರಿನ ಆಂಗಳದಲ್ಲಿ ಆಡುವುದು ಸೌರಾಷ್ಟ್ರಕ್ಕೆ ಲಾಭವಾದೀತೆಂಬುದೊಂದು ನಿರೀಕ್ಷೆ.

ಹನುಮ ವಿಹಾರಿ ನೇತೃತ್ವದ “ರೆಸ್ಟ್‌ ಆಫ್ ಇಂಡಿಯಾ’ ತಂಡದಲ್ಲಿ ನ್ಯೂಜಿಲ್ಯಾಂಡ್‌ “ಎ’ ವಿರುದ್ಧ ಆಡಿದ ಆಟಗಾರರೇ ತುಂಬಿಕೊಂಡಿದ್ದಾರೆ.

Advertisement

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಮೋಘ ಫಾರ್ಮ್ ನಲ್ಲಿರುವ 5 ಮಂದಿ ಸ್ಪೆಷಲಿಸ್ಟ್‌ ಆರಂಭಿಕರನ್ನು ಇದು ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next