Advertisement

ʻನಾವು ಡೊನಾಲ್ಡ್‌ ಟ್ರಂಪ್‌ ಹತ್ಯೆಯನ್ನು ಎದುರು ನೋಡುತ್ತಿದ್ದೇವೆʼ: ಇರಾನ್‌

12:13 PM Feb 25, 2023 | Team Udayavani |

ದುಬೈ: 2020ರಲ್ಲಿ ನಡೆದ ಇರಾನ್‌ ರೆವೊಲ್ಯೂಷನರಿ ಗಾರ್ಡ್‌ನ ಕೋರ್‌ನ ಕಮಾಂಡ್‌ ಜನರಲ್‌ ಖಾಸಿಂ ಸುಲೇಮಾನಿಯ ಹತ್ಯೆಗೆ ಪ್ರತೀಕಾರ ತೀರಿಸುವ ಮಾತನ್ನು ಇರಾನ್‌  ಪುನರುಚ್ಛರಿಸಿದೆ. 2020ರಲ್ಲಿ ಬಾಗ್ದಾದ್‌ನ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೇರಿಕಾ ತನ್ನ ಕ್ಷಿಪಣಿ ಮೂಲಕ ಖಾಸಿಂ ಸುಲೇಮಾನಿಯ ಹತ್ಯೆ ಮಾಡಿತ್ತು. ಅಲ್ಲದೇ ಇದೇ ಕಾರಣಕ್ಕಾಗಿ ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹತ್ಯಯನ್ನು ಎದುರು ನೋಡುತ್ತಿರುವುದಾಗಿ ಇರಾನ್‌ ಹೇಳಿಕೊಂಡಿದೆ.

Advertisement

ತಾವು ಅಭಿವೃದ್ಧಿ ಪಡಿಸಿರುವ 1,650 ಕಿಮೀ (1,125 ಮೈಲು) ದೂರದ ಗುರಿಯನ್ನೂ ಹೊಡೆದುರುಳಿಸಬಲ್ಲ ದೂರಗಾಮಿ ಕ್ರೂಸ್‌ ಕ್ಷಿಪಣಿಯ ಬಗ್ಗೆ ಮಾಧ್ಯಮಗಳಿಗೆ ತಿಳಿಸುವ ವೇಳೆ ಇರಾನ್‌ನ ʻರೆವೊಲ್ಯೂಷನರಿ ಗಾರ್ಡ್‌ ಏರೋಸ್ಪೇಸ್‌ ಫೋರ್ಸ್‌ʼನ ಮುಖ್ಯಸ್ಥ ಅಮೀರಲಿ ಹಾಜಿಝಾಹೆದ್‌ ಅವರು ʻನಾವು ಅಮೇರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಕೊಲ್ಲಲು ಎದುರು ನೋಡುತ್ತಿದ್ದೇವೆʼ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಮಾತನಾಡುತ್ತಾ 1,650 ಕಿಮೀ  ದೂರದ ಗುರಿಯನ್ನೂ ತಲುಪಬಲ್ಲ ದೂರಗಾಮಿ ಕ್ರೂಸ್‌ ಕ್ಷಿಪಣಿಯನ್ನು ನಾವು ಅಭಿವೃದ್ಧಿಪಡಿಸಿ ʻಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ನ ಶಸ್ತ್ರಾಗಾರಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ ಎಂದು ಹಾಜಿಝಾಹೆದ್‌ ಹೇಳಿದ್ಧಾರೆ.

ದೇವರ ಇಚ್ಛೆಯಂತೆ ನಾವು ಟ್ರಂಪ್‌ರ ಹತ್ಯೆಯನ್ನು ಎದುರು ನೋಡುತ್ತಿದ್ದೇವೆ. ಅಲ್ಲದೇ ಅಮೇರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪೆಯೋ ಮತ್ತು ಮಿಲಿಟರಿ ಕಮಾಂಡರ್‌ಗಳನ್ನು ಕೊಲ್ಲಲೇ ಬೇಕಾಗಿದೆ ಎಂದಿರುವ ಅವರು , ಬಡ ಸೈನಿಕರನ್ನು ಉದ್ದೇಶ ನಮಗಿಲ್ಲ ಎಂದೂ ಹೇಳಿದ್ದಾರೆ.

ಖಾಸಿಂ ಸುಲೈಮಾನಿ ಅವರ ಹತ್ಯೆ ಬಳಿಕ ಇರಾನ್‌ನಲ್ಲಿರುವ ಅಮೇರಿಕ ಪಡೆಗಳನ್ನು ಗುರಿಯಾಗಿಸಿ ಇರಾನ್‌ ಹಲವು ಬಾರಿ ಕ್ಷಿಪಣಿ ದಾಳಿ ಮಾಡಿದೆ. ಇದೀಗ ಅದರ ನಡುವೆಯೇ ಇರಾನ್‌ ದೂರಗಾಮಿ ಕ್ರೂಸ್‌ ಕ್ಷಿಪಣಿಗಳ ಅಭಿವೃದ್ಧಿಯಾಗಿರುವುದು ಇತರೆ ರಾಷ್ಟ್ರಗಳನ್ನು ಆತಂಕಕ್ಕೆ ತಳ್ಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next