Advertisement
ಅವಳಿ ಎಂಜಿನ್ ಹೊಂದಿರುವ ಈ ವಿಮಾನವನ್ನು ಪ್ರಾದೇಶಿಕ ಸಂಚಾರಕ್ಕಷ್ಟೇ ಬಳಸಲಾಗುತ್ತಿತ್ತು. ಇರಾನ್ ರಾಜಧಾನಿ ಟೆಹರಾನ್‌ನಿಂದ ಟೇಕ್ ಆಫ್ ಆಗಿದ್ದ ವಿಮಾನವು ಇಸಾಹಾನ್ ಪ್ರಾಂತ್ಯದ ಯಸೂಜ್ ಎಂಬ ಪುಟ್ಟ ನಗರದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಇನ್ನೇನು ಅಲ್ಲಿಗೆ ತಲುಪ ಬೇಕು ಎನ್ನುವಷ್ಟರಲ್ಲಿ ವಿಮಾನ 440 ಮೀಟರ್‌ನಷ್ಟು ಎತ್ತರದ ದೇನಾ ಎಂಬ ಪರ್ವತಕ್ಕೆ ಅಪ್ಪಳಿಸಿ ಪತನಗೊಂಡಿತು ಎಂದು ಏರ್‌ಲೈನ್ಸ್ ವಕ್ತಾರ ಮೊಹಮ್ಮದ್ ತಾ ತಬಾತಾ ಬಾಯಿ ತಿಳಿಸಿದ್ದಾರೆ. ಒಂದು ಶಿಶು, 6 ಸಿಬಂದಿ ಸಹಿತ ಒಟ್ಟು 66 ಮಂದಿ ಈ ವಿಮಾನದಲ್ಲಿದ್ದು, ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಪತನಗೊಂಡ ಪ್ರದೇಶದಲ್ಲಿ ದಟ್ಟ ಹಿಮ ಆವರಿಸಿರುವ ಕಾರಣ ರಕ್ಷಣಾ ಹೆಲಿಕಾಪ್ಟರ್, ಆ್ಯಂಬುಲೆನ್ಸ್‌ಗಳಿಗೂ ಅಲ್ಲಿಗೆ ತೆರಳಲು ಸಾಧ್ಯವಾಗಿಲ್ಲ.
Advertisement
ದೇನಾ ಪರ್ವತಕ್ಕೆ ಅಪ್ಪಳಿಸಿ ವಿಮಾನ ಪತನ: 66 ಸಾವು
07:30 AM Feb 19, 2018 | |
Advertisement
Udayavani is now on Telegram. Click here to join our channel and stay updated with the latest news.